ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಗೆ ಶೀಘ್ರ ಸಂಪುಟ ಅನುಮೋದನೆ: ಸಿಎಂ ಬೊಮ್ಮಾಯಿ

By Govindaraj S  |  First Published Apr 30, 2022, 1:34 AM IST

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಮೇ ತಿಂಗಳಲ್ಲಿ ಕೇಂದ್ರ ಸಂಪುಟ ಇದಕ್ಕೆ ಒಪ್ಪಿಗೆ ನೀಡಲಿದೆ.


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಏ.30): ಭದ್ರಾ ಮೇಲ್ದಂಡೆ ಯೋಜನೆಯನ್ನು (Upper Bhadra Project) ರಾಷ್ಟ್ರೀಯ ಯೋಜನೆಯನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಮೇ ತಿಂಗಳಲ್ಲಿ ಕೇಂದ್ರ ಸಂಪುಟ ಇದಕ್ಕೆ ಒಪ್ಪಿಗೆ ನೀಡಲಿದೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ರೂ. 16 ಸಾವಿರ ಕೋಟಿ ಅನುದಾನ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ತಿಳಿಸಿದರು. ಜಿಲ್ಲೆಯ  ಜಗಳೂರು ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಹಾಗೂ ಇತರೆ ಕಾಮಗಾರಿಗಳು ಸೇರಿ 1383.10 ಕೋಟಿ ಮೌಲ್ಯದ 19 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ರೂ.21.05 ಕೋಟಿ ಮೌಲ್ಯದ 18 ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿದರು. 

Latest Videos

undefined

12 ಇಲಾಖೆಗಳಿಂದ 1248 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಬರಡು ನಾಡಾಗಿದ್ದ ಜಗಳೂರನ್ನು ಜಲನಾಡಾಗಿ ಪರಿವರ್ತನೆ ಮಾಡಲಾಗುತ್ತಿದೆ. ಜಗಳೂರು ತಾಲ್ಲೂಕಿನಾದ್ಯಂತ 40 ಸಾವಿರ ಎಕೆರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದ್ದು, ಈ ಯೋಜನೆಯಿಂದ 9 ಕೆರೆಗಳನ್ನು ತುಂಬಿಸಲಾಗುತ್ತದೆ. ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯವಾಗಿದ್ದು ಜೂನ್ ಅಥವಾ ಜುಲೈನಲ್ಲಿ ಎಲ್ಲ ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು.  

ಮಧ್ಯ ಕರ್ನಾಟಕದ ಜಗಳೂರಿನಲ್ಲಿ ನೀರಾವರಿಯ ಕ್ರಾಂತಿಯನ್ನು ಮಾಡಲಾಗುತ್ತದೆ. ಜಗಳೂರು ಅತ್ಯಂತ ಬರ ಪೀಡಿತ ತಾಲ್ಲೂಕು ಆಗಿದ್ದು, ಈ ಪ್ರದೇಶದಲ್ಲಿ ಕೆರೆ ತುಂಬಿಸುವ ಮತ್ತು ನೀರಾವರಿ ಯೋಜನೆಗಳ ಕನಸು ಮರೀಚಿಕೆಯಾಗಿತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ರೈತರ ಜೀವನವನ್ನು ಹಸನಾಗಿಸಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು. ಬಜೆಟ್‍ನಲ್ಲಿ ಈ ವರ್ಷ ರಾಜ್ಯ ಸರ್ಕಾರ ರೂ. 20 ಸಾವಿರ ಕೋಟಿಗಿಂತ ಹೆಚ್ಚು ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡಲಾಗಿದೆ.  ನೀರಾವರಿ ಯೋಜನೆ ಜೊತೆಗೆ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕೈಗಾರಿಕಾ ಕ್ರಾಂತಿ ಮಾಡುವುದರ ಮೂಲಕ ಮಧ್ಯ ಕರ್ನಾಟಕದ ಭವ್ಯ ಭವಿಷ್ಯವನ್ನು ನಮ್ಮ ಸರ್ಕಾರ ನನಸು ಮಾಡುತ್ತದೆ ಎಂದರು.

Cabinet Expansion: ಹೈಕಮಾಂಡ್‌ನತ್ತ ಬೊಟ್ಟು ಮಾಡಿದ ಸಿಎಂ: ಸಚಿವಾಕಾಂಕ್ಷಿಗಳಲ್ಲಿ ಹೆಚ್ಚಿದ ಟೆನ್ಷನ್..!

ಭದ್ರಾ ಯೋಜನೆಗೆ ಹಣ ಕೊಟ್ಟಿದ್ದು ಈಗ ಫಲ ನೀಡುತ್ತಿದೆ: ಜಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಬಿ ಎಸ್ ವೈ  ಜಗಳೂರು ಬರಪೀಡಿತವಾಗಿತ್ತು. ಜನ ಜಾನುವಾರುಗಳಿಗೆ ನೀರಿರಲಿಲ್ಲ.ಇದನ್ನು ಮನಗೊಂಡು ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ ನೀಡಿದ್ದೆ. ಜಗಳೂರು ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆಗೆ1300 ಕೋಟಿ ಅನುದಾನ ನೀಡಿದೆ.ಭದ್ರಾ ಮೇಲ್ಡಂಡೆ ಯೋಜ‌ನೆಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ‌ಮಾಡುತ್ತಿರುವುದು ಖುಷಿ ತಂದಿದೆ.  ಜಗಳೂರು ತಾಲ್ಲೂಕಿನ ಭದ್ರಾ ಮೇಲ್ಡಂಡೆ ಯೋಜನೆಗೆ ಹಣಕೊಟ್ಟದ್ದು ಫಲ ಕೊಟ್ಟಿದೆ. ವಿಶೇಷ ಶ್ರಮ ಹಾಕಿದ ಶಾಸಕ ರಾಮಚಂದ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ.  

ಮುಂದಿನ ಚುನಾವಣೆಯಲ್ಲಿ ರಾಮಚಂದ್ರನ ವಿರುದ್ದ ನಿಂತ ಅಭ್ಯರ್ಥಿಗಳ ಠೇವಣಿ ಕಳೆಯಿರಿ ಎಂದು ಕರೆ ನೀಡಿದರು.ಪ್ರಧಾನಿ ಮೋದಿಯವರ ಪರಿಶ್ರಮದ ಫಲವಾಗಿ ನಾಲ್ಕು ರಾಜ್ಯಗಳಲ್ಲಿ ಉತ್ತಮ ಪಲಿತಾಂಶ ಬಂದಿದೆ.ಕಾಂಗ್ರೆಸ್ ಮುಳುಗುತ್ತಿರುವ ಹಡಗು.ಅವರು ಒಂತರ ತಬ್ಬಲಿಗಳಾಗಿದ್ದಾರೆ.ಕರ್ನಾಟಕದಲ್ಲಿ ಕಾಂಗ್ರೆಸ್ ಉಸಿರಾಡುತ್ತಿದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು 150 ಸೀಟು ಗೆದ್ದು ಕಾಂಗ್ರಸ್ ನಿರ್ನಾಮ ಮಾಡಲು ಸಂಕಲ್ಪ ತೊಟ್ಟಿದ್ದೇವೆ ಎಂದ ಬಿ ಎಸ್ ವೈ  ರಾಮಚಂದ್ರರ ಪರಿಶ್ರಮ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಜಗಳೂರು ತಾಲ್ಲೂಕಿಗೆ ಭದ್ರಮೇಲ್ದಂಡೆ ಕನಸು  ನನಸಾಗಿದೆ. ಇದರಡಿಯಲ್ಲಿ ಹನಿ ನೀರಾವರಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲಿದೆ.

ರೈತರು ವೈಜ್ಞಾನಿಕ ದೃಷ್ಟಿಕೋನದಿಂದ ನೀರನ್ನು ಬಳಸಿ: ಜಲ ಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಮಾತನಾಡಿ, ಜಗಳೂರು ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೊನೆಯ ಭಾಗದ ರೈತರಿಗೂ ನೀರು ಒದಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಅವೈಜ್ಞಾನಿಕವಾಗಿ ನೀರಿನ ಬಳಕೆ ಕಡಿಮೆ ಮಾಡಬೇಕು, ವೈಜ್ಞಾನಿಕ ದೃಷ್ಟಿಕೋನದಿಂದ ನೀರನ್ನು ಬಳಸಬೇಕು. 

ಮಧ್ಯ ಕರ್ನಾಟಕದ ಬರದ ನಾಡಿಗೆ ಭದ್ರೆ ಜೀವಗಂಗೆ: ಜಗಳೂರು ಕ್ಷೇತ್ರದಲ್ಲಿ 1500 ಕೋಟಿ ರೂಗಳ ಕಾಮಗಾರಿ ಶಂಕುಸ್ಥಾಪನೆಯಾಗುತ್ತಿದೆ.ಬಹುಶಃ ಈ ವೇದಿಕೆಯನ್ನು ನೋಡಿದ್ರೆ ಜನಗಳ ಮನಸ್ಸು ಹೇಗಿದೆ ಎಂಬುದು ಗೊತ್ತಾಗುತ್ತಿದೆ.ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರರ ಮೇಲೆ‌ ಅಭಿಮಾನ‌ ಇರುವುದಕ್ಕೆ ಯಡಿಯೂರಪ್ಪ ‌ಹಲವು ಸಚಿವರು ಬಂದಿದ್ದಾರೆ. ದೇಶದ ಪ್ರಧಾನಮಂತ್ರಿ ಮೋದಿ, ನಮ್ಮ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ,ನಿಕಟಪೂರ್ವ ಯಡಿಯೂರಪ್ಪ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಯಡಿಯೂರಪ್ಪನವರನ್ನು ನಾವು ಎಷ್ಟು ಹೊಗಳಿದ್ರು ಸಾಲದು ಚಿತ್ರದುರ್ಗ ದಾವಣಗೆರೆ ತುಮಕೂರು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಯಡಿಯೂರಪ್ಪ ‌ಹಣ‌ ಬಿಡುಗಡೆ ಮಾಡಿ ಕೆರೆ ತುಂಬಿ ರೈತರ ಬದುಕು ಹಸನಾಗಬೇಕೆಂದು 2008-09 ರಲ್ಲಿ ನೀರಾವರಿ ಯೋಜನೆಗೆ ಹಣ ನೀಡಿದರು. ಹೊಳಲ್ಕೆರೆ‌ ಜಗಳೂರು ಪಾವಗಡ ಚಳ್ಳಕೆರೆ ಮೊಳಕಾಲ್ಮೂರ ತಾಲ್ಲೂಕಿಗೆ‌ ನೀರಾವರಿ‌ ಯೋಜ‌ನೆಗಳಿಂದ ಕೆರೆಗಳಿಗೆ ನೀರು‌ ಹರಿಯಬೇಕೆಂದು ಅಂದಿನ‌ ನೀರಾವರಿ ಸಚಿವರಿಗೆ ಬೊಮ್ಮಾಯಿಗೆ ಯಡಿಯೂರಪ್ಪ ಹೇಳಿದ್ದರು. ನಮ್ಮದು ಡಬಲ್ ಇಂಜಿನ್ ಸರ್ಕಾರ ಕೇಂದ್ರದಲ್ಲಿ ಮೋದಿ ಅಮಿತಾ ಷಾ ಜೋಡಿ, ನಮ್ಮ ರಾಜ್ಯದಲ್ಲಿ ಬೊಮ್ಮಾಯಿ ಡಬಲ್ ಇಂಜಿನ್ ಸರ್ಕಾರವಾಗಿ ಕೆಲಸ ಮಾಡುತ್ತಿದೆ.  ನಾ‌ನು ಸಮಾಜ ಕಲ್ಯಾಣ ಸಚಿವನಾಗಿದ್ದೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯನ್ನೇ ಮಾಡಿದರು. ವಾಲ್ಮೀಕಿ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ಯಡಿಯೂರಪ್ಪ ‌ಮಾಡಿದರು. 

ಇಲ್ಲಿತನಕ‌ ಜನರು ಸರ್ಕಾರದ ಮನೆ ಬಾಗಿಲಿಗೆ ಯಾರು ಹೋಗಬಾರದು, ಸರ್ಕಾರವೇ ರೈತರ ಮನೆ ಬಾಗಿಲಿಗೆ ಹೋಗಬೇಕು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ನಾನು ಭಗೀರಥ ಆಗೋಕೆ ಹೋಗೋಲ್ಲ ಎಂದು ರಾಮಚಂದ್ರ ಹೇಳಿದ್ದಾರೆ. ಈ ಬರದ ನಾಡಿಗೆ ಹಸಿರು ಸೀರೆ‌ ಉಡಿಸುವ ಕೆಲಸ ಬೊಮ್ಮಾಯಿ ಸರ್ಕಾರ ಮಾಡುತ್ತಿದೆ. ಭದ್ರಾ ಮೇಲ್ಡಂಡೆ ಯೋಜನೆ ಸಲುವಾಗಿ ರಾಜ್ಯ ಸರ್ಕಾರ 3 ಸಾವಿರ ಕೋಟಿ ಅನುದಾನವನ್ನು ಬಜೆಟ್ ನಲ್ಲಿ‌ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆ‌ ಜಾರಿಯಾದ್ರೆ ಚಿಕ್ಕಮಗಳೂರು , ತುಮಕೂರು ದಾವಣಗೆರೆ ಚಿತ್ರದುರ್ಗ ಜಿಲ್ಲೆ ಸುಮಾರು 25 ಲಕ್ಷ ಎಕರೆ ಪ್ರದೇಶ ನೀರಾವರಿ ಆಗುತ್ತದೆ.ಭದ್ರಾ ಮೇಲ್ಡಂಡೆ ಇವತ್ತು ರಾಷ್ಟ್ರೀಯ ಸ್ಥಾನಮಾನ ಪಡೆದುಕೊಂಡು 12500 ಕೋಟಿ ವೆಚ್ಚದ ಅ‌ನುದಾನ ಬರುತ್ತೇ...ನಿಮ್ಮೆಲ್ಲರ ಆರ್ಶೀವಾದ ಬಿಜೆಪಿ ಮೇಲೆ‌ ಇಟ್ಟು 150 ಗುರಿ‌ ಮುಟ್ಟಲು ರಾಮಚಂದ್ರರನ್ನು ಗೆಲ್ಲಿಸಬೇಕೆಂದರು. 2023 ರ ಯುಗ ಕರ್ನಾಟಕದ ಸುವರ್ಣಯುಗವಾಗಲು ನೀವು ಮತ ಕೊಡಿ ಅಂದರು

'ಶಿಗ್ಗಾವಿ ತಾಲ್ಲೂಕನ್ನು ಭಾರತದ ಟೆಕ್ಸ್ ಟೈಲ್ & ಸಿದ್ದಉಡುಪು ಹಬ್ ಆಗಿಸುವ ಕನಸು'

ಭದ್ರಾ ಮೇಲ್ಡಂಡೆ‌ ರಾಷ್ಟ್ರೀಯ ಯೋಜನೆಯಾಗಲು ನಮ್ಮ ಪರಿಶ್ರಮ ಇದೆ: ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲು ದೆಹಲಿಗೆ ಹೋದಾಗ ನಾನು ಯಡಿಯೂರಪ್ಪ  ಬೈರಾವತ್ ಸಿಂಗ್ ಗೆ ಭೇಟಿ ಮಾಡಿದ್ದೇವು. 1236 ಕೋಟಿ ಹಣ ಪ್ರಾಜೆಕ್ಟ್ ಗೆ ಮೀಸಲಿರಿಸಿದ್ದು ಟೆಂಡರ್ ಕೂಡ ಆಗಿದೆ. ಹೈದರಾಬಾದ್ ನ ಕಂಟ್ರಾಕ್ಟರ್ ಟೆಂಡರ್ ಆಗಿದೆ.ಇನ್ನು ಒಂದೂವರೆ ವರ್ಷದಲ್ಲಿ 9 ಕೆರೆ ತುಂಬಿಸಿ 18 ಸಾವಿರ ಹೆಕ್ಟೇರ್ ಗೆ ಹನಿ ನೀರಾವರಿ ಯೋಜನೆಗೆ ಚಾಲನೆ‌‌ ಕೊಡಿಸುವ ಕೆಲಸ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.

ಆಕಾಶ ನೋಡಿ ಕೃಷಿ ಮಾಡುತ್ತಿದ್ದ ಬರದ ನಾಡಿನಲ್ಲಿ ಭದ್ರೆ ಜಲಧಾರೆ: ಜಗಳೂರು ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ  ಮಾತನಾಡಿ ಇಲ್ಲಿನ ರೈತರು ನೀರಾವರಿ ಸೌಲಭ್ಯಗಳಿಲ್ಲದೆ ಆಕಾಶ ನೋಡಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕು ಹಸಿರುದಾಪುಗಾಲಿಟ್ಟಿದೆ. ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸಮಗ್ರ ನೀರಾವರಿ ಯೋಜನೆಗಳನ್ನು ನೀಡಲಾಗಿದೆ.57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು ಜೂನ್‌ ತಿಂಗಳಲ್ಲೇ ಒಂದು ಬೃಹತ್ ಕಾರ್ಯಕ್ರಮ ಮಾಡುತ್ತೇವೆ.ಅದಕ್ಕಾಗಿ ನಮ್ಮ ಪೂಜ್ಯ ಶ್ರೀ ಸಿರಿಗೆರೆ ಜಗದ್ಗುರು ಒಪ್ಪಿಗೆ ಪಡೆದಿದ್ದು ಇದಕ್ಕಿಂತ ಅದ್ದೂರಿ ಕಾರ್ಯಕ್ರಮ ಮಾಡುತ್ತೇವೆ.ಇದು ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶ್ರೀಗಳು ಬರಲು ಒಪ್ಪಿಲ್ಲ.ವಿರೋಧಿಗಳ ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದರು.

click me!