'ಬಿಜೆಪಿಯವರು ನಕಲಿ ಹಿಂದುತ್ವವಾದಿ, ಷಂಡರು, RSS ಸಂಸ್ಕಾರ ಕಲಿಸಿಕೊಟ್ಟಿಲ್ಲವೇ?'

Published : Apr 29, 2022, 05:57 PM IST
'ಬಿಜೆಪಿಯವರು ನಕಲಿ ಹಿಂದುತ್ವವಾದಿ, ಷಂಡರು, RSS ಸಂಸ್ಕಾರ ಕಲಿಸಿಕೊಟ್ಟಿಲ್ಲವೇ?'

ಸಾರಾಂಶ

* ಶಸ್ತ್ರ ಮತ್ತು ಶಾಸ್ತ್ರ ನಮ್ಮ ಅವಿಭಾಜ್ಯ ಅಂಗ  * ಜೀವಂತ ಇರುವುದಕ್ಕಾಗಿ ಹಿಂದೂಗಳು ಆಯುಧ ಇಟ್ಟುಕೊಳ್ಳಿ * ಬಿಜೆಪಿಯವರು ನಕಲಿ ಹಿಂದುತ್ವವಾದಿಗಳು- ಷಂಡರು * ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ವಾಗ್ದಾಳಿ

ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಏ.29):
ಹಿಜಾಬ್ ವಿಚಾರವಾಗಿ ಕರ್ನಾಟಕದಲ್ಲಿ ಒಂದಲ್ಲ ಒಂದಕ್ಕೆ ಹಿಂದೂ-ಮುಸ್ಲಿಂ ಮಧ್ಯೆ ವಿವಾದಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಜೀವಂತ ಇರುವುದಕ್ಕಾಗಿ ಹಿಂದೂಗಳು ಆಯುಧ ಇಟ್ಟುಕೊಳ್ಳಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿಕೆ ನೀಡಿದ್ದಾರೆ. 

ಉಡುಪಿಯಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ, ಚುನಾವಣೆ ಹತ್ತಿರ ಬರುವಾಗ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತದೆ. ಇನ್ನೆಷ್ಟು ಹತ್ಯೆಗಳು ಆಗುತ್ತೋ ಗೊತ್ತಿಲ್ಲ. ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಗೊತ್ತಾಗಲ್ಲ, ಈ ಹಿಂದಿನ ದುರ್ಬಲ ಗೃಹ ಸಚಿವ ಈಗ ಸಿಎಂ ಆಗಿದ್ದಾರೆ. ಈಗ ಮತ್ತೊಬ್ಬ ದುರ್ಬಲ ವ್ಯಕ್ತಿ ಗೃಹ ಸಚಿವ ಆಗಿದ್ದಾರೆ ಎಂದು ಹೆಸರು ಹೇಳದೇ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದರು.

Suvarna FIR ಧರ್ಮ ದಂಗಲ್ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ್ರಾ ಪೊಲೀಸರು!

ಸ್ಥಳೀಯ ಶಾಸಕರ ರಘುಪತಿ ಭಟ್ಟರ ನಿರ್ಲಕ್ಷ್ಯದಿಂದ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತವಾಯ್ತು. ತಾಲಿಬಾನ್ ಉಗ್ರ ಹಿಜಾಬ್ ಪರ ಪದ್ಯ ಬರೆಯುತ್ತಾನೆ ಅಂದ್ರೆ ಏನರ್ಥ? ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಹಿಂದೂಗಳಿಗೆ ರಕ್ಷಣೆ ಕೊಡಲಾಗದಿದ್ದರೆ ನಾವೇ ಸ್ವಯಂ ರಕ್ಷಣೆ ಮಾಡುತ್ತೇವೆ. ಶಸ್ತ್ರ ಮತ್ತು ಶಾಸ್ತ್ರ ನಮ್ಮ ಅವಿಭಾಜ್ಯ ಅಂಗ ಎಂದರು.

ನಮಗೆ ಗಾಂಧಿ ಬೇಡ, ಗೋಡ್ಸೆ ತತ್ವ ಬೇಕು
ರಾಜ್ಯ- ರಾಷ್ಟ್ರದಲ್ಲಿ ಭ್ರಷ್ಟಾಚಾರದ ಹಾವಳಿಗೆ ಗೋಡ್ಸೆ ತತ್ವ ಬೇಕು, ನಮಗೆ ಗಾಂಧೀಜಿ ಬೇಡ. ಗೋಡ್ಸೆ ತತ್ವ ಬೇಕು. ನಾವು ಗೋಡ್ಸೆ ಅನುಯಾಯಿಗಳು.ಭ್ರಷ್ಟಾಚಾರ ಮುಕ್ತ ಭಾರತ ಅಂತ ಪ್ರಧಾನಿ ಘೋಷಿಸಿದರು. ಆದರೆ ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ.ಕಾಂಗ್ರೆಸ್ ನಾಯಕರು ಬಿಜೆಪಿಯೊಳಗೆ ಇರುವಾಗ ಕಾಂಗ್ರೆಸ್ ಮುಕ್ತಭಾರತವಾಗಲು ಹೇಗೆ ಸಾಧ್ಯ? ಕಮೀಷನ್ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿದೆ.ಕಾಂಗ್ರೆಸ್ ಗೆ ಕಮೀಷನ್ ನಲ್ಲಿ ಪರ್ಸಂಟೇಜ್ ಹೋಗುತ್ತಾ? ಎಂದು ಕಿಡಿಕಾರಿದರು.

ಬಂಧನದಲ್ಲಿ ಇರುವ ಹಿಂದೂ ಕಾರ್ಯಕರ್ತರ ಬಿಡುಗಡೆ ಮಾಡಿಸುತ್ತೇವೆ. ಕಾನೂನಿನ ಜೊತೆಗೆ ಆರ್ಥಿಕ ನೆರವನ್ನೂ ಕೊಡುತ್ತೇವೆ. ಬಿಜೆಪಿಯ ಹಲವಾರು ನಾಯಕರು ಹಿಂದೂ ಮಹಾಸಭಾ ಸೇರುತ್ತಾರೆ. ಹಿಂದೂಗಳು ಪರ್ಯಾಯ ರಾಜಕೀಯ ಪಕ್ಷದ ಕಡೆ ನೋಡುತ್ತಾರೆ ಎಂದರು.

ಸ್ವಯಂ ರಕ್ಷಣೆಗೆ ಆಯುಧ ಇಟ್ಟುಕೊಳ್ಳಿ
ಸ್ವಯಂ ರಕ್ಷಣೆಗೆ ಆಯುಧ ಇಟ್ಟುಕೊಳ್ಳಿ ಎಂದು ಧರ್ಮೇಂದ್ರ ಕರೆ ನೀಡಿದರು. ಅಕ್ಕ ತಂಗಿಯರು ಮತ್ತು ಹಿಂದೂ ರಕ್ಷಣೆಗೆ ಆಯುಧ ಇಟ್ಟುಕೊಳ್ಳಿ. ಸತ್ತಮೇಲೆ, ಆಸ್ಪತ್ರೆಗೆ ದಾಖಲಾದ ಮೇಲೆ ಕಾನೂನು ಯಾಕೆ ಬೇಕು?ಜೀವಂತ ಇರುವುದಕ್ಕಾಗಿ ಹಿಂದೂಗಳು ಆಯುಧ ಇಟ್ಟುಕೊಳ್ಳಿ.ಬಿಜೆಪಿ, ಕಾಂಗ್ರೆಸ್ ಹಿಂದೂಗಳ ರಕ್ಷಣೆ ಮಾಡುತ್ತದೆ ಎಂಬುದು ಕೇವಲ ಭ್ರಮೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ನಾವು ಸ್ಪರ್ಧಿಸ್ತೇವೆ ಬಿಜೆಪಿಯವರು ನಕಲಿ ಹಿಂದುತ್ವವಾದಿಗಳು- ಷಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸೀದಿ ಚರ್ಚ್  ಒಡೆಯುವ ತಾಕತ್ ಇದ್ಯಾ? ಇವರಿಗೆ ಎಂದು ಸವಾಲೆಸೆದರು. ಹಿಂದುತ್ವ ತೋರ್ಪಡಿಕೆಗಾಗಿ, ಹಿಂದುತ್ವ ಮಾತನಾಡುವ ನೈತಿಕತೆ ಇಲ್ಲ. ಆರ್ ಎಸ್ ಎಸ್ ಸಂಘ ಸಂಸ್ಕಾರ ಕಲಿಸಿಕೊಟ್ಟಿಲ್ಲವೇ? ಎಂದು ಪ್ರಶ್ನಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ