ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಆಗ ಮಾಡಿಸಿ ಯಾರು ಬೇಡ ಅಂತಾರೆ. ವರದಿ ವೈಜ್ಞಾನಿಕವಾಗಿಲ್ಲ ಅಂತಾ ತುಂಬಾ ಜನ ಬುದ್ದಿಜೀವಿಗಳು ಹೇಳುತ್ತಿದ್ದಾರೆ. ಅದನ್ನು ಪುನರ್‌ಪರಿಶೀಲನೆ ಮಾಡಿದರೆ ದೇಶ ಏನು ಮುಳುಗಿ ಹೋಗುವುದಿಲ್ಲ: ಕೇಂದ್ರ ಸಚಿವ ಸೋಮಣ್ಣ
ತುಮಕೂರು(ಅ.11): ಜಾತಿ ಗಣತಿ ವರದಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದು, ಅದನ್ನು ಕೆರೆದುಕೊಂಡು ಮತ್ತೇ ಮತ್ತೇ ಗಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.
ತುಮಕೂರಿನಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆ ಕಚೇರಿ ಪೂಜೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮಗಿಂತ ಜಾಸ್ತಿ ಶತ್ರುಗಳು ಅವರ ಪಕ್ಷದಲ್ಲೇ ಇದ್ದಾರೆ ಎಂದರು.
ಆಧಾರ್ ನಂಬರ್ ಆಧರಿತ ಜಾತಿ ಗಣತಿ ನಡೆಸಿ: ಸಿ.ಎನ್. ಬಾಲಕೃಷ್ಣ
ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ ಅಂತ ನಾವು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಈ ವಿಷಯವನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳುವುದು ಏಕೆ ಎಂದರು. ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಆಗ ಮಾಡಿಸಿ ಯಾರು ಬೇಡ ಅಂತಾರೆ. ವರದಿ ವೈಜ್ಞಾನಿಕವಾಗಿಲ್ಲ ಅಂತಾ ತುಂಬಾ ಜನ ಬುದ್ದಿಜೀವಿಗಳು ಹೇಳುತ್ತಿದ್ದಾರೆ. ಅದನ್ನು ಪುನರ್‌ಪರಿಶೀಲನೆ ಮಾಡಿದರೆ ದೇಶ ಏನು ಮುಳುಗಿ ಹೋಗುವುದಿಲ್ಲ ಎಂದರು.