ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಕೆಐಎಡಿಬಿ ಹಗರಣ ಮುನ್ನಲೆಗೆ, ವಿಚಾರಣೆಗೆ ಸಚಿವೆ ಗೈರು

By Suvarna NewsFirst Published Mar 26, 2024, 5:12 PM IST
Highlights

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ  ಮತ್ತು ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ.

ಬೆಂಗಳೂರು (ಮಾ.26): ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ  ಮತ್ತು ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ. ಇಡಿ ಪ್ರಕರಣದ ವಿಚಾರಣೆಗೆ ಶೋಭಾ ಗೈರು ಹಾಜರಾಗಿದ್ದಾರೆ.

ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್ ಶೋಭಾ ಮೇಲಿದ್ದು, ಇವರಲ್ಲದೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ 24 ಮಂದಿ ವಿರುದ್ಧದ ಕೇಸ್ ಇದೆ.

ಬೆಂಗಳೂರು: ನಗರ್ತಪೇಟೆ ಪ್ರತಿಭಟನೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ 40 ಮಂದಿ ವಿರುದ್ಧ ಕೇಸ್‌

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಹಗರಣದ ಬಗ್ಗೆ  ವಿಚಾರಣೆ ನಡೆಯುತ್ತಿದೆ. ಈಗ  ವಿಚಾರಣೆಗೆ ಶೋಭಾ ಕರಂದ್ಲಾಜೆ ಗೈರಾಗಿದ್ದು, ವಿಚಾರಣೆಗೆ ಹಾಜರಾತಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇಡಿ ಪರ ವಕೀಲರು ಗೈರು ಹಿನ್ನಲೆ ವಿಚಾರಣೆಯನ್ನು ಏಪ್ರಿಲ್ 3ಕ್ಕೆ  ಕೋರ್ಟ್ ಮುಂದೂಡಿದೆ.

ಏನಿದು ಪ್ರಕರಣ: ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಇಟಾಸ್ಕಾ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಪಡೆದ ಲಂಚದಲ್ಲಿ ಸಚಿವೆ ಶೋಭಾಗೂ ಪಾಲು ಸಿಕ್ಕಿದೆ ಎನ್ನಲಾಗಿದ್ದು, ಇಟಾಸ್ಕಾದಿಂದ ಬಂದಿದ್ದ 87 ಕೋಟಿ ರೂ ಕಿಕ್ ಬ್ಯಾಕ್ ನಲ್ಲಿ 47 ಕೋಟಿ ರೂ. ಶೋಭಾ ಅವರಿಗೆ ಸಂದಿದೆ ಎಂದು ಇಡಿ ಪತ್ತೆ ಮಾಡಿತ್ತು. ಇದಕ್ಕೆ ಪುರಾವೆ ಎಂಬಂತೆ  ಶೋಭಾ ಅವರ ಅಕೌಂಟ್‌ಗೆ 70 ಲಕ್ಷ ರೂ ವರ್ಗಾವಣೆ ಆಗಿತ್ತು. ನಂತರ ಮಾಧ್ಯಮದಲ್ಲಿ ಹಗರಣದ ವರದಿ ಬಹಿರಂಗವಾಗುತ್ತಿದ್ದಂತೆಯೇ ಶೋಭಾ ತಾನು ಪಡೆದ ಹಣ 'ಸಾಲ'ವೆಂದು ತೋರಿಸಲು ತನ್ನ ಅಕೌಂಟಿನಿಂದ ಅಷ್ಟು ಮೊತ್ತ ಮೈನಸ್ ಆಗಿರುವಂತೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು.

ತಮಿಳುನಾಡಿನಿಂದ ಬಂದು ಬಾಂಬ್ ಹಾಕ್ತಾರೆ: ಸಚಿವೆ ಶೋಭಾ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ

ಜಿವಿ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ ಶೋಭಾರಿಂದ ಹಣ ಮರುಪಾವತಿಯಾಗಿರುವ ದಾಖಲೆಗಳನ್ನು ಅಧಿಕಾರಗಳು ಪಡೆದುಕೊಂಡಿದ್ದರು. ಅಲ್ಲಿಂದ ಮುಂದೆ ಈ ಹಣ ಕಟ್ಟಾಗೆ  ಮರಳಿ ಪಾವತಿಯಾಗಿದೆ. ಇದನ್ನು ಕಟ್ಟಾಗೆ ಶೋಭಾ ಮರಳಿಸಿದ ಹಣ ಎನ್ನಲು ಸಾಧ್ಯವೇ ಎನ್ನುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. 

2011ರ ಈ ಪ್ರಕರಣದಲ್ಲಿ ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಚಿವ ಸ್ಥಾನವನ್ನು ಕಳೆದುಕೊಂಡು, ಜೈಲುಪಾಲಾಗಿದ್ದರು. ಕಟ್ಟಾ ಅವರ ಮಗ ಜಗದೀಶ್ ಕಟ್ಟಾ, ಇಟಾಸ್ಕಾ ಕಂಪನಿ ಎಂಡಿ ಸೇರಿದಂತೆ  ಒಟ್ಟು 24 ಮಂದಿ ಪ್ರಕರಣದ ಪ್ರಮುಖರಾಗಿದ್ದರು. ಕೋರ್ಟ್ ನಲ್ಲಿ ನಿಧಾನಗತಿಯ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಈ ಪ್ರಕರಣಕ್ಕೆ 10 ವರ್ಷ ದಾಟಿದೆ.

click me!