ಕಾಂಗ್ರೆಸ್‌ನ ಇತಿಹಾಸವನ್ನ ಗಮನಿಸಿ ಮೊದಲಿನಿಂದಲೂ ತುಷ್ಟೀಕರಣ ರಾಜಕೀಯ ಮಾಡ್ತಾ ಬಂದಿದೆ. ಈ ಹಿಂದೆ ಸೋಮನಾಥ ಮಂದಿರ ಉದ್ಘಾಟನೆ ವೇಳೆ ಏನು ಮಾಡಿದ್ರು? ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರನ್ನ ಉದ್ಘಾಟನೆಗೆ ಹೋಗದಂತೆ ಒತ್ತಾಯ ಮಾಡಿದ್ರು ಎಂದು ರಾಮಮಂದಿರ ಉದ್ಘಾಟನಾ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ರಾಯಚೂರು (ಜ.12): ಕಾಂಗ್ರೆಸ್‌ನ ಇತಿಹಾಸವನ್ನ ಗಮನಿಸಿ ಮೊದಲಿನಿಂದಲೂ ತುಷ್ಟೀಕರಣ ರಾಜಕೀಯ ಮಾಡ್ತಾ ಬಂದಿದೆ. ಈ ಹಿಂದೆ ಸೋಮನಾಥ ಮಂದಿರ ಉದ್ಘಾಟನೆ ವೇಳೆ ಏನು ಮಾಡಿದ್ರು? ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರನ್ನ ಉದ್ಘಾಟನೆಗೆ ಹೋಗದಂತೆ ಒತ್ತಾಯ ಮಾಡಿದ್ರು ಎಂದು ರಾಮಮಂದಿರ ಉದ್ಘಾಟನಾ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಇಂದು ರಾಯಚೂರು ಜಿಲ್ಲೆ ತಿಂಥಿಣಿಗೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ರಾಮ ಕಾಲ್ಪನಿಕ ಎಂದರು, ಕರಸೇವಕರ ಮೇಲೆ ಗೂಲಿಬಾರ್ ಮಾಡಿದ್ರು. ರಾಮಸೇತುವೆ ಕಾಲ್ಪನಿಕ ಅದರ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದರು. ಇಂದು ಆಹ್ವಾನ ನಿರಾಕರಣೆ ಮಾಡ್ತಿರೋದು ನೆಪ ಅಷ್ಟೇ. ರಾಮಮಂದಿರ ಹೋರಾಟಗಾರರಿಗೆ ವಿನಾಕಾರಣ ತೊಂದರೆ ಕೊಡ್ತಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಮುಸ್ಲಿಮರ ತುಷ್ಟೀಕರಣ ರಾಜಕೀಯ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಇಷ್ಟು ವರ್ಷ ಬಾಂಬ್ ಹಾಕಿ ಗೆದ್ದಿದ್ದರಾ? ಎಂದು ಕಟುವಾಗಿ ಟೀಕಿಸಿದರು.
ಇನ್ನು ರಾಮಮಂದಿರ ಅಪೂರ್ಣಗೊಂಡ ಮಂದಿರ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ಆಗಬೇಕು ಎಂಬುದು ಭೂಮಿ ಪೂಜೆ ವೇಳೆಯೇ ತೀರ್ಮಾನ ಆಗಿತ್ತು. ಅದರಂತೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.