ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡಿದ್ದಾಯ್ತು. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದ್ದಾಯ್ತು ಇದೀಗ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯ (ಜೂ.15): ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡಿದ್ದಾಯ್ತು. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದ್ದಾಯ್ತು ಇದೀಗ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಂದು ಮಂಡ್ಯದ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ನೂತನ ಸಂಸದ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆ ಮುಗಿಯುವವರಿಗೆ ಕಾದು ಇದೀಗ ಐದು ಗ್ಯಾರಂಟಿಗಾಗಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಜನ ಸಾಮಾನ್ಯರ ವಿರೋಧಿ ಸರ್ಕಾರವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಟ್ರಾನ್ಸ್‌ಪೋರ್ಟ್ ಮೇಲೆ ಒಡೆತ ಬೀಳುತ್ತೆ. ಇದರಿಂದ ರೈತರಿಗೆ ತೊಂದರೆಯಾಗುತ್ತೆ. ಈ ಸರ್ಕಾರ ನೇರವಾಗಿ ಬಡವರು, ರೈತರಿಗೆ ಕಿಸೆಗೆ ಕೈಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
undefined
ಮಂಡ್ಯ: ಸಂಸದರ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ
ಈ ಹಿಂದೆ ಬೆಲೆ ಏರಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಮಾತನಾಡಿದ್ದರು. ಆದರೀಗ ತಾವೇ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ. ಎಲ್ಲವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಜನರೇ ತೀರ್ಮಾನ ಮಾಡ್ತಾರೆ. ಜನರ ತೆರಿಗೆ ಹಣವನ್ನ ದುರ್ಬಳಕೆ ಮಾಡುವುದನ್ನ ತಡೆಗಟ್ಟದೇ ಈ ಸರ್ಕಾರ ಕುಳಿತಿದೆ. ಈ ಸರ್ಕಾರ ಬಂದ ಮೇಲೆ ರಾಜ್ಯದ ಜನರ ದುಡ್ಡು ಯಾವ ಯಾವ ಇಲಾಖೆಯಲ್ಲಿ ಎಷ್ಟು ಲೂಟಿ ಮಾಡಿದ್ದಾರೋ ಎಷ್ಟು ದಿನ ಈ ಆಟ ಆಡುತ್ತೀರೋ ಇನ್ನು ಹದಿನೈದು ದಿನಗಳಾದ ಮೇಲೆ ಏನು ಆಗುತ್ತೆ ಹಣ ವಾಪಸ್ ಬರುತ್ತೋ ಇಲ್ವೋ ನೋಡೋಣ ಎಂದರು.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ! ಬಿಜೆಪಿ ನಾಯಕರು ಕಿಡಿ
ಇದೇ ವೇಳೆ ದರ್ಶನ್ ಬಂಧನ ವಿಚಾರ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಅದು ನನಗೆ ಸಂಬಂಧ ಇಲ್ಲದ ವಿಷಯ. ಇನ್ಮುಂದೆ ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಕೊಡಿ, ಮಂಡ್ಯ ಜಿಲ್ಲೆ ಅಭಿವೃದ್ಧಿಗಳ ಬಗ್ಗೆ ನನಗೆ ಸಲಹೆ ಕೊಡಿ ಉಳಿದ ಯಾವ ವಿಷಯವನ್ನ ನನ್ನ ಬಳಿ ಚರ್ಚೆ ಮಾಡಬೇಡಿ ಎನ್ನುವ ಮೂಲಕ ದರ್ಶನ್ ವಿಚಾರಕ್ಕೆ ಪ್ರತಿಕ್ರಿಯೆಗೆ ನಿರಾಕರಿಸಿದರು.