ಜೂ.9ನೇ ತಾರೀಕು ಪ್ರಧಾನಮಂತ್ರಿಗಳ ನಿರ್ಣಯದ ಮೇರೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಾಗಿದೆ. ಅವರು ಇಲಾಖೆಗಳನ್ನ ಹಂಚಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ (ಜೂ.15): ಜೂ.9ನೇ ತಾರೀಕು ಪ್ರಧಾನಮಂತ್ರಿಗಳ ನಿರ್ಣಯದ ಮೇರೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಾಗಿದೆ. ಅವರು ಇಲಾಖೆಗಳನ್ನ ಹಂಚಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಂಡ್ಯದ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ನೂತನ ಸಂಸದ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ಪ್ರಧಾನಮಂತ್ರಿ ಮೋದಿಯವರು ನನಗೆ ಎರಡು ಇಲಾಖೆಗಳನ್ನ ಕೊಟ್ಟಿದ್ದಾರೆ. ಎರಡು ಇಲಾಖೆಗಳನ್ನ ನಿಭಾಯಿಸುವುದು ಸುಲಭದ ಮಾತಲ್ಲ, ದೊಡ್ಡ ಸವಾಲು ಇದೆ, ಮುಂದೆ ಕಠಿಣ ಹಾದಿ. ಎರಡೂ ಇಲಾಖೆ ಅಧಿಕಾರಿಗಳ ರಿವ್ಯೂವ್ ಮೀಟಿಂಗ್ ಮಾಡಿದ್ದೇನೆ. ಪ್ರಥಮ ಸಹಿ ರಾಜ್ಯದ ಉದ್ಯೋಗದ ಸಹಿಯಾಗಿದೆ. ಕುದುರೆಮುಖ ಯನಿಟ್ ಭಾಗದಲ್ಲಿ ಈ ಹಿಂದೆ ಚಟುವಟಿಕೆ ನಿಲ್ಲಿಸಿದ್ರು. ಇದೀಗ ಸಹಿ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ ಎಂದರು.
undefined
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ! ಬಿಜೆಪಿ ನಾಯಕರು ಕಿಡಿ
ಈ ಹಿಂದೆ ನಾನು ಸಿಎಂ ಆದಾಗ ವಿರೋಧ ಮಾಡಿದ್ದೇ ಎಂದು ಹೇಳಿದ್ದಾರೆ. ಇಲ್ಲಿ ಯಾರೂ ಅಪಾರ್ಥ ಮಾಡಿಕೊಳ್ಳುವುದು ಬೇಡ. ಅಲ್ಲಿ ಒಂದು ವರ್ಷ ಟ್ರಯಲ್ ನಡೆಯುತ್ತದೆ. ಅದಿರು ಸಿಗುತ್ತಾ ಎಂದು ನೋಡುತ್ತಾರೆ. ಅಧಿಕಾರಿಗಳ ಜೊತೆ ಕೂಡ ಚರ್ಚೆ ಮಾಡಿದ್ದೇನೆ. ಐವತ್ತು ವರ್ಷಗಳ ಕಾಲ ಅದಿರು ಉತ್ಪಾದನೆ ನಡೆಯುತ್ತದೆ. ಮರಗಳನ್ನ ಬೆಳೆಸಲು, ಅರಣ್ಯ ಕಾಯಲು ಕಂಪನಿ ಸರ್ಕಾರಕ್ಕೆ 123 ಕೋಟಿ ಕೊಟ್ಟಿದ್ದಾರೆ. ಹಸಿರಿಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಕಂಪನಿ ಹಣ ಕೂಡ ಕೊಟ್ಟಿದ್ದಾರೆ. ಫೈಲ್ ಅನ್ನ ಸಂಪೂರ್ಣ ಸ್ಟಡಿ ಮಾಡಿದ್ದೇನೆ.
ಎರಡು ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇಟ್ಟಿದ್ದಾರೆ ಎಂದರು.