ದ್ವೀಪದಂತಾಗಿರುವ ಉಕ್ಕಡಗಾತ್ರಿ ಕ್ಷೇತ್ರ: ಭಕ್ತರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ

By Govindaraj S  |  First Published Jul 17, 2022, 1:33 AM IST

ಜಿಲ್ಲೆಯ ಹರಿಹರ ಹೊನ್ನಾಳಿಯಲ್ಲಿ ತುಂಗಾಭದ್ರಾ ಪ್ರವಾಹ ಎಲ್ಲೆ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ತುಂಗಾಭದ್ರೆ ಉಕ್ಕಿ ಹರಿಯುತ್ತಿದ್ದು, ನದಿ ದಂಡೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆ ಮಾರ್ಗಗಳು ಬಂದ್ ಆಗಿದೆ.


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಜು.17): ಜಿಲ್ಲೆಯ ಹರಿಹರ ಹೊನ್ನಾಳಿಯಲ್ಲಿ ತುಂಗಾಭದ್ರಾ ಪ್ರವಾಹ ಎಲ್ಲೆ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ತುಂಗಾಭದ್ರೆ ಉಕ್ಕಿ ಹರಿಯುತ್ತಿದ್ದು, ನದಿ ದಂಡೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆ ಮಾರ್ಗಗಳು ಬಂದ್ ಆಗಿದೆ. ಉಕ್ಕಡಗಾತ್ರಿ ಕ್ಷೇತ್ರ ದ್ವೀಪದಂತಾಗಿದ್ದು, ಉಕ್ಕಡಗಾತ್ರಿ ಗೆ ಸಂಪರ್ಕ ಮಾರ್ಗದಲ್ಲಿ‌ ನೀರೋ ನೀರು. ಉಕ್ಕಡಗಾತ್ರಿ ಸುತ್ತಮುತ್ತ ನೂರಾರು ಎಕರೆ ತರಕಾರಿ ಬೆಳೆ ಮುಳುಗಡೆಯಾಗಿದ್ದು, ಉಕ್ಕಡಗಾತ್ರಿಯ ಶಾಲಾ ಆವರಣ, ಆಸ್ಪತ್ರೆ ಸಮೀಪದವರೆಗು ‌ಪ್ರವಾಹದ ನೀರು ನುಗ್ಗಿದೆ.

Latest Videos

undefined

ಭಕ್ತರು ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ: ಅಪಾಯದ ಮಟ್ಟದಲ್ಲಿ ತುಂಗಾಭದ್ರಾ ನದಿ ನದಿ ತೀರದಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ. ಉಕ್ಕಡಗಾತ್ರಿ ಗೆ ಸಂಪರ್ಕ ಕಲ್ಪಿಸುವ ತುಮ್ಮಿನಕಟ್ಟೆ, ಪತ್ಯಾಪುರ ರಸ್ತೆ ಮಾರ್ಗ ಬಂದ್ ಆಗಿದೆ. ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದೆ. ಉಕ್ಕಡಗಾತ್ರಿ ಕರಿಬಸವೇಶ್ವರ ಕ್ಷೇತ್ರದಲ್ಲಿ ಸ್ನಾನಗಟ್ಟ ,ಜವಳಗಟ್ಟ, 25ಕ್ಕು ಹೆಚ್ಚು ವ್ಯಾಪಾರಿ ಮಳಿಗೆಗಳು‌ ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಕ್ಷೇತ್ರ ಅಕ್ಷರಶಃ ಪ್ರವಾಹ ನೀರಿನಿಂದ ಕಂಗಾಲಾಗಿದೆ. ಉಕ್ಕಡಗಾತ್ರಿ ಸುತ್ತಲು ದ್ವೀಪದ ರೀತಿ ನೀರು ಆವರಿಸಿದ್ದು ಸಂಚಾರಕ್ಕಾಗಿ ಭಕ್ತರ ಪರದಾಟ ಆಗಿದೆ. ಗಂಟೆ ಗಂಟೆಗು ತುಂಗಾಭದ್ರಾ ನದಿ ಪಾತ್ರದಲ್ಲಿ ನೀರಿನ ಹೆಚ್ಚಳವಾಗುತ್ತಿದೆ.

ಕೇವಲ ಜಯದೇವ ಶ್ರೀ ಪ್ರಶಸ್ತಿ ಪಡೆದು ಹಣವನ್ನು ವಾಪಸ್ ಮಠದ ಶಿಕ್ಷಣ ಸಂಸ್ಥೆಗೆ ನೀಡಿದ ಸಿದ್ದರಾಮಯ್ಯ

ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ ಕೊಚ್ಚಿಹೋದ ಯುವಕ: ದಾವಣಗೆರೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ತುಂಗಾಭದ್ರ ನದಿ ತುಂಬಿ ಹರಿಯುತ್ತಿದ್ದು, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡದ ಪರಮೇಶ್ ನಾಯ್ಕ್(35) ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ದೇವಸ್ಥಾನಕ್ಕೆ ಬಂದಿದ್ದ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡ ಪರಮೇಶ್ ನಾಯ್ಕ್ ನದಿ ಪಾತ್ರಕ್ಕೆ ಯಾರು ಹೋಗಬಾರದು ಎಂದು ಸೂಚನೆ ನೀಡಿದರು. 

ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕುಟುಂಬ ಸಮೇತರಾಗಿ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬಂದಿದ್ದ ಪರಮೇಶ್ ನಾಯ್ಕ ನದಿಯಲ್ಲಿ ಇಳಿದು ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಕೊಚ್ವಿಹೋಗಿದ್ದಾರೆ. ಸ್ಥಳಕ್ಕೆ ಮಲೆಬೆನ್ನೂರು ಠಾಣೆ ಪೊಲೀಸರು, ಹರಿಹರ ತಾಹಶೀಲ್ದಾರ್ ಭೇಟಿ ನೀಡಿದ್ದಾರೆ. ಮುಳುಗು ತಜ್ಞರ ತಂಡದಿಂದ ಪರಮೇಶ್ ನಾಯ್ಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ‌ ನಡೆಸಿದ್ದಾರೆ.

ಮಲೆನಾಡಲ್ಲಿ ನಿಲ್ಲದೆ ಮಳೆ: ದಾವಣಗೆರೆಯಲ್ಲಿ ಆತಂಕ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ

ದೇವಸ್ಥಾನಕ್ಕೆ ಬರುವವರಿಗೆ ಎಚ್ಚರಿಕೆ ನೀಡಿದ ದೇವಸ್ಥಾನದ ಆಡಳಿತ ಮಂಡಳಿ: ಉಕ್ಕಡಗಾತ್ರಿ ಕ್ಷೇತ್ರದ ಬಳಿ ತುಂಗಾಭದ್ರೆ ಆಪಾಯಕಾರಿಯಾಗಿದ್ದು, ಯಾರು ಭಕ್ತರು ಸ್ನಾನಗಟ್ಟಕ್ಕೆ ಇಳಿಯಬಾರದು ಎಂದು ಮನವಿ ಮಾಡಿದೆ. ಆದರೂ ಕೆಲವರು ದುಸ್ಸಾಹಕ್ಕೆ ಮುಂದಾಗುತ್ತಿದ್ದಾರೆ. ನದಿ ಪಾತ್ರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ನದಿಗೆ ಯಾರು ಇಳಿಯಬಾರದು ಎಂದು ಸೂಚನೆ ನೀಡಿದೆ.

click me!