ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ: ಪರಿಶೀಲನೆ

By Govindaraj S  |  First Published Jul 17, 2022, 1:05 AM IST

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತಸವ್ಯಸ್ತಗೊಂಡಿದ್ದು, ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ಪರಿಹಾರ ಚೆಕ್ ವಿತರಣೆ ಮಾಡಿದರು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.17): ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತಸವ್ಯಸ್ತಗೊಂಡಿದ್ದು, ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ಪರಿಹಾರ ಚೆಕ್ ವಿತರಣೆ ಮಾಡಿದರು.

Latest Videos

undefined

ಮಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು ತಾಲ್ಲೂಕಿನ ಅರೇನೂರು ಗ್ರಾಮಕ್ಕೆ ಆಗಮಿಸಿದ ಅವರು, ಅಡಿಕೆ ತೋಟ ಮಳೆಯಿಂದ ನಾಶವಾಗಿದ್ದು, ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ನಂತರ ಮೂಡಿಗೆರೆ ತಾಲೂಕಿನ  ಹೊಯ್ಸಳಲು ಗ್ರಾಮಕ್ಕೆ ಆಗಮಿಸಿ, ಮನೆ ಬಿದ್ದ ಸ್ಥಳಗಳಿಗೆ ಭೇಟಿ ನೀಡಿದರು.  

ಕೊನೆಗೂ ಚಿಕ್ಕಮಗಳೂರಿಗೆ ಉಸ್ತುವಾರಿ ನೇಮಿಸಿದ ಸರ್ಕಾರ, ಆದೇಶ ಆಗುತ್ತಿದ್ದಂತೆಯೇ ಜಿಲ್ಲೆಗೆ ದೌಡು

ಬಣಕಲ್ ಮತ್ತು ಕೊಟ್ಟಿಗೆ ಹಾರದಲ್ಲಿ ಮಳೆಯಿಂದ ಸಂತ್ರಸ್ತರಾದವರನ್ನು ಭೇಟಿ ಮಾಡಿ, ಪರಿಹಾರಧನ ಚೆಕ್ಗಳನ್ನು ವಿತರಿಸಿದರು. ಅಲ್ಲದೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಸಮೀಪದ ಅಜಾದ್ ನಗರದಲ್ಲಿ ಮನೆಯೊಂದು ಕುಸಿದ್ದು, ಬಡಕುಟುಂಬವೊಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಜಾದ್ ನಗದ ಲೀಲಾ ಎಂಬುವವರು ತಮ್ಮ ನಾಲ್ಕು ಮಕ್ಕಳೊಂದಿಗೆ ಬಿರುಕು ಬಿಟ್ಟಿರುವ ಮನೆಯ ಪಕ್ಕದಲ್ಲಿ ಟಾರ್ಪಲ್ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವರ ಮನೆಗೆ ಭೇಟಿ ನೀಡಿದ ಸಚಿವರು ಅವರ ಕಣ್ಣೀರಿನ ಕಥೆ ಕೇಳಿ ಸ್ಥಳದಲ್ಲೇ 50 ಸಾವಿರ ರೂಪಾಯಿ ನೆರವು ನೀಡಿದರು.

ಭೂ ಕುಸಿತವಾಗಿದ್ದ ಜಾಗದಲ್ಲಿ ಪರದಾಡಿದ ಸಚಿವರು: ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗುತ್ತಿದ್ದಂತೆ ಸಚಿವ ಬೈರತಿ ಬಸವರಾಜು ಚಿಕ್ಕಮಗಳೂರಿನ ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದರು. ಅರೆನೂರಿನಲ್ಲಿ ಭೂಕುಸಿತವಾಗಿದ್ದ ಕಾಫಿ ತೋಟ ನೋಡಲು ತೆರಳಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದ್ದ ಸ್ಥಳದಲ್ಲಿ ಕಾಲಿಟ್ಟು ಸಚಿವರು ಹೊರಬರಲಾರದೆ ಪರದಾಡಿದ ಘಟನೆ ನಡೆಯಿತು. ಕೊನೆಗೆ ಸ್ಥಳೀಯರ ನೆರವಿನಿಂದ ಕಷ್ಟ ಪಟ್ಟು ಹೊರಬಂದರು.

ಮಳೆ ಅನಾಹುತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ: ಕೆಲವು ಪ್ರದೇಶಗಳು ಪ್ರತಿ ವರ್ಷ ಮಳೆಯಿಂದ ಹಾನಿಗೊಳಗಾಗುತ್ತಿದ್ದು, ಅಂತಹ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚಿಸಿದರು.ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರೊಂದಿಗೆ ಮಾತಾಡಿ ನದಿ ಪಾತ್ರದಲ್ಲಿರುವವರ ಜನರ ಸುರಕ್ಷತೆಗೆ ಪ್ರಾಶಸ್ತ್ಯ ನೀಡಿ, ಮುಂಜಾಗೃತ ಕ್ರಮವಾಗಿ ಅವರನ್ನು ಸ್ಥಳಾಂತರ ಮಾಡಿ ಹಾಗೂ ಗುಡ್ಡ ಕುಸಿತವಾಗುವ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಮನದಟ್ಟು ಮಾಡಿ ಸ್ಥಳಾಂತರಿಸಲು ತಹಶೀಲ್ದಾರ್ಗಳಿಗೆ ಸೂಚಿಸಿದರು.

ಮಲೆನಾಡು ಭಾಗಗಳಲ್ಲಿ ರಸ್ತೆಗಳು ತೀರ ಹದಗೆಟ್ಟಿದ್ದು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ 329 ಕಿ.ಮೀ ರಸ್ತೆಯನ್ನು ಮಳೆನಿಂತ ಕೂಡಲೇ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಲೆನಾಡು ಮುಖ್ಯರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಿದ್ದಲ್ಲಿ ರಸ್ತೆ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 62  ಪುನರ್ವಸತಿ ಕೇಂದ್ರಗಳಲ್ಲಿಯೂ ಯಾವುದೇ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೆಸ್ಕಾಂನಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಿ ಮಳೆಯಿಂದ ಕಂಬ ಉರುಳುವುದು ಹಾಗೂ ಲೈನ್ ತುಂಡಾಗಿ ಸಮಸ್ಯೆಗಳು ಎದುರಾದಾಗ ದಿನದ ಎರಡು ಪಾಳಿಯಲ್ಲಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

Balehonnur: ಮುಖ್ಯಮಂತ್ರಿಗಳೇ, ಮಲೆನಾಡು ಜನರ ನೆರವಿಗೆ ಬನ್ನಿ, ಶಾಸಕ ರಾಜೇಗೌಡ

ಮಳೆ ಹಾನಿ: ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 12 ಮನೆಗಳಿಗೆ ಶೇ.25ರಿಂದ 75 ರಷ್ಟು ಹಾನಿಯಾಗಿದೆ. 19 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. ಜೂನ್ ತಿಂಗಳಿಂದ ಇಲ್ಲಿವರೆಗೂ ಜಿಲ್ಲೆಯಲ್ಲಿ ಮಳೆಯಿಂದ 328 ಮನೆಗಳಿಗೆ ಹಾನಿಯಾಗಿದೆ. 44 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 97 ಮನೆಗಳಿಗೆ ಶೇ.25ರಿಂದ 75ರಷ್ಟು ಹಾನಿಯಾಗಿದೆ. 187 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. 13 ಗುಡಿಸಲು ಹಾನಿಯಾಗಿದೆ. ಮಳೆಯಿಂದ ಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿ ದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದೂವರೆದಿದೆ.

click me!