ರಾಜ್ಯದಲ್ಲಿ ನೈಟ್ ಕರ್ಫ್ಯೂ: ರಾತ್ರಿ ಪ್ರಯಾಣಿಕರಿಗೆ ಸವದಿ ವಿಶೇಷ ಮನವಿ

By Suvarna News  |  First Published Dec 23, 2020, 2:13 PM IST

ಬ್ರಿಟನ್ ಕೊರೋನಾ ವೈರಸ್ ಇದೀಗ ದೇಶದೆಲ್ಲೆಡೆ ಬೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ನೈಟ್  ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಪ್ರಯಾಣಿಕರಿಗೆ ಸಚಿವರು ವಿಶೇಷ ಮನವಿ ಮಾಡಿಕೊಂಡಿದ್ದಾರೆ.


ಬೆಂಗಳೂರು, (ಡಿ.23): ಕೊರೋನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು (ಬುಧವಾರ) ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. 

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ದೊರೆಯಲಿವೆ.

Tap to resize

Latest Videos

undefined

ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿ: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಕಂಪ್ಲೀಟ್ ಬ್ರೇಕ್ !

ರಾತ್ರಿ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಸಾರಿಗೆ ಸಚಿವರೂ ಉಪಮುಖ್ಯಮಂತ್ರಿಯಾದ ಲಕ್ಷ್ಮಣ ಸವದಿ ಅವರು ರಾತ್ರಿ ಪ್ರಯಾಣಿಕರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

"

ಪ್ರಯಾಣಿಕರಿಗೆ ಸವದಿ ಮನವಿ
ಎಲ್ಲಾ ಪ್ರಯಾಣಿಕರು ರಾತ್ರಿ 10 ಗಂಟೆ ಒಳಗೆ ನಿಲ್ಥಾಣಗಳಿಗೆ ಬರುವಂತೆ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ. 

ನಗರ ಪ್ರದೇಶಗಳಲ್ಲಿ ಮಾತ್ರ ರಾತ್ರಿ ವೇಳೆ ಕರ್ಪ್ಯೂ ಜಾರಿ ಇರಲಿದ್ದು, ಇಂದು (ಬುಧವಾರ) ಮಾತ್ರ ಕೆಲ ಪ್ರಯಾಣಿಕರಿಗೆ ತೊಂದರೆಯಾಗಬಹುದು. ಇದಕ್ಕೆ ಸಹಕರಿಸಿ, ಹೆದ್ದಾರಿಗಳಲ್ಲಿ ಎಂದಿನಂತೆ ಬಸ್‌ಗಳ ಸಂಚಾರವಿರುತ್ತೆ. ಅಂತರಾಜ್ಯಕ್ಕೆ ಹೊರಡುವ ಬಸ್ಗಳು 10 ಗಂಟೆಗೂ ಮುನ್ನ ಹೊರಡಲಿವೆ ಎಂದು ಸ್ಪಷ್ಟಪಡಿಸಿದರು.

click me!