
ಬೆಂಗಳೂರು(ಮಾ.30): ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ಊರಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಟ್ರಾವೆಲ್ ಏಜೆನ್ಸಿಗಳು ಟಿಕೆಟ್ ದರವನ್ನು ದುಪ್ಪಟ್ಟುಗೊಳಿಸಿ ಸುಲಿಗೆಗೆ ಇಳಿದಿವೆ.
ಏಪ್ರಿಲ್ 2ರಂದು ಯುಗಾದಿ ಹಬ್ಬವಿದೆ. ಹೀಗಾಗಿ ಮಾ.30 ಹಾಗೂ 31 ರಂದು ಸಾವಿರಾರು ಜನ ಬೆಂಗಳೂರು ನಗರದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಹುತೇಕ ಸರ್ಕಾರಿ ಬಸ್‌ಗಳಲ್ಲಿ ಈ ಮೊದಲೇ ಎಲ್ಲ ಸೀಟುಗಳು ಮುಂಗಡ ಕಾಯ್ದಿರಿಸಲಾಗಿದೆ. ಜೊತೆಗೆ ಹೆಚ್ಚಿನ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಕಾರ್ಯಾಚರಣೆ ಮಾಡಲು ಮುಂದಾಗಿದ್ದರೂ ಬೇಡಿಕೆ ಪೂರೈಸಲು ಆಗುತ್ತಿಲ್ಲ. ಇದೇ ಅವಕಾಶ ಬಳಸಿಕೊಂಡಿರುವ ಖಾಸಗಿ ಬಸ್‌ಗಳ ಏಜೆನ್ಸಿಗಳು ಸಾಮಾನ್ಯ ದಿನಗಳಿಗಿಂತ ಶೇ.150ರ ವರೆಗೂ ಹೆಚ್ಚು ಹಣ ನಿಗದಿ ಮಾಡುತ್ತಿವೆ.
ಯುಗಾದಿ ವರ್ಷ ಭವಿಷ್ಯ: ಯಾವ ರಾಶಿಗೆ ಹೇಗಿರಲಿದೆ?
ಬೆಂಗಳೂರು ನಗರದಿಂದ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು ಮತ್ತು ಹೈದರಾಬಾದ್ ಮುಂತಾದ ನಗರಗಳಿಗೆ ಹೆಚ್ಚಿನ ಜನರು ಪ್ರಯಾಣಿಸಲಿದ್ದಾರೆ. ಬೇಡಿಕೆ ಹೆಚ್ಚಾಗುವ ನಗರಗಳನ್ನು ಗುರಿಯಾಗಿಸಿಕೊಂಡಿರುವ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ದಿಢೀರ್ ಹೆಚ್ಚಳ ಮಾಡಿವೆ. ಈ ಬಾರಿ ಯುಗಾದಿ ಹಬ್ಬ ಶನಿವಾರ ಬಂದಿದೆ. ಭಾನುವಾರ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಕ್ಕೆ ಮುಂದಾಗಿದ್ದಾರೆ.
ಎಲ್ಲಿಗೆ ಎಷ್ಟು ದರ?
ಮಂಗಳೂರು: ಸಾಮಾನ್ಯ ದಿನ 699 ರೂ, ಹಬ್ಬದ ದಿನ: 1100 ರೂ
ಬೆಳಗಾವಿ: ಸಾಮಾನ್ಯ ದಿನ 700ರೂ, ಹಬ್ಬದ ದಿನ: 1200 ರೂ
ಉಡುಪಿ: ಸಾಮಾನ್ಯ ದಿನ 750ರೂ, ಹಬ್ಬದ ದಿನ: 1150ರೂ
ಬಳ್ಳಾರಿ: ಸಾಮಾನ್ಯ ದಿನ 500ರೂ, ಹಬ್ಬದ ದಿನ: 1000 ರೂ
ಹುಬ್ಬಳ್ಳಿ: ಸಾಮಾನ್ಯ ದಿನ 650ರೂ, ಹಬ್ಬದ ದಿನ: 1100 ರೂ
Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?
ಸಾಮಾನ್ಯ ದಿನಗಳಲ್ಲಿ ಮಂಗಳೂರಿಗೆ 600 ರು.ಗಳ ಇರುತ್ತದೆ. ಪ್ರಮುಖ ಹಬ್ಬಗಳು ಬಂತೆಂದರೆ 1200ರು.ವರೆಗೂ ಹೆಚ್ಚಳ ಮಾಡುತ್ತಾರೆ. ಇದರಿಂದ ಹಬ್ಬಗಳಿಗೆ ಊರುಗಳಿಗೆ ತೆರಳುವುದೇ ಬೇಡ ಎನ್ನುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವನ್ನು ನಿಯತ್ರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸಾಮಾನ್ಯ ಜನತೆಗೆ ತೀವ್ರ ತೊಂದರೆಯಾಗುತ್ತದೆ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ರಾಕೇಶ್ ಎಂಬುವರು ಬೇಸರ ವ್ಯಕ್ತಪಡಿಸಿದರು.
ಹೆಚ್ಚುವರಿ ಬಸ್‌ಗಳು:
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 600 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ನಿರ್ಧರಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ 1700 ಬಸ್‌ಗಳು ಕಾರ್ಯಚರಣೆಯಾಗಲಿವೆ. ಅದರೆ, ಹಬ್ಬಕ್ಕಾಗಿ ಹೆಚ್ಚುವರಿಯಾಗಿ ಬಸ್‌ಗಳ ಕಾರ್ಯಚರಣೆ ಮಾಡುತ್ತಿವೆ.
ಕೊರೋನಾ ಕರಿಛಾಯೆಯಿಂದ ಎರಡು ವರ್ಷ ಸರಳ, ಸಾಂಪ್ರದಾಯಿಕ ನಡೆದಿದ್ದ ಜಾತ್ರೆ ಈ ಬಾರಿ ಕಳೆಗಟ್ಟಿದ್ದು ಮೈಸೂರು ದಸರಾ ಮಾದರಿಯಲ್ಲಿ ದೇವಾಲಯ ಆವರಣ, ರಸ್ತೆಗಳು, ಮರಗಳಿಗೆ ದೀಪಾಲಂಕಾರ ಮಾಡಿದ್ದು ಇಡೀ ಮಲೆಮಹದೇಶ್ವರ ಬೆಟ್ಟವಿದ್ಯುತ್ ದೀಪಗಳಿಂದ ಜಘಮಘಿಸುತ್ತಿದೆ.
ವಿಶೇಷ ಪೂಜೆ ನಡೆಸುವ ಮೂಲಕ ಜಾತ್ರೆ ಆರಂಭಗೊಂಡಿದ್ದು 30ರಂದು ಎಣ್ಣೆ ಮಜ್ಜನ ಸೇವೆ, 31 ರಂದು ಮಲೆಮಹದೇಶ್ವರನಿಗೆ ವಿಶೇಷ ಅಲಂಕಾರ ಮತ್ತು ಸೇವೆಗಳು, ಏಪ್ರಿಲ್ 1ರಂದು ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಮತ್ತು ಏ.2ರ ಶುಕ್ರವಾರ ಬೆಳಗ್ಗೆ 7.30ರಿಂದ 9ರ ನಡುವೆ ಮಹಾರಥೋತ್ಸವ ಜರುಗಲಿದೆ ಎಂದು ಮಲೆಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ