ರಾಮಮಂದಿರ ನಿಧಿ ಸಂಗ್ರಹಕ್ಕಾಗಿ ಮುಂಬೈನಲ್ಲಿ ಉಡುಪಿಯ ಪೇಜಾವರ ಶ್ರೀಗಳು ಮುಂಬೈನಲ್ಲಿ ಪಾದಯಾತ್ರೆ ಮಾಡಿದರು.
ಉಡುಪಿ, (ಫೆ.08): ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರಕ್ಕಾಗಿ, ಮಂದಿರ ಟ್ರಸ್ಟ್‌ನ ಟ್ರಸ್ಟಿ, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರು ಭಾನುವಾರ ಮುಂಬೈ ಮಹಾನಗರದ ಖಾರ್ ದಾಂಡ ಪ್ರದೇಶದಲ್ಲಿ ನಿಧಿಸಂಗ್ರಹ ಪಾದಯಾತ್ರೆ ನಡೆಸಿದರು.
ಇಲ್ಲಿನ ಸುಮಾರು ಇನ್ನೂರು ವರ್ಷಗಳಷ್ಟು ಪುರಾತನ ರಾಮ ಮಂದಿರದಲ್ಲಿ ಶ್ರೀಗಳು ದೇವರಿಗೆ ಆರತಿಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಭಜನೆ ಸಂಕೀರ್ತನೆಗಳ ನಡುವೆ ಸ್ಥಳೀಯರ ಮನೆಮನೆಗಳಿಗೆ ಭೇಟಿ ನೀಡಿದ ಶ್ರೀಗಳನ್ನು ಭಕ್ತಾಭಿಮಾನಿಗಳು ಆರತಿ ಬೆಳಗಿ, ಹೂವುಗಳನ್ನು ಚೆಲ್ಲಿ ಸ್ವಾಗತಿಸಿ, ಸಂತಸದಿಂದ ದೇಣಿಗೆ ನೀಡಿ, ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಗೋವಾ ಪ್ರಾಂತ್ಯದ ವಿ.ಹೆಚ್.ಪಿ. ಕ್ಷೇತ್ರಪತಿ ಶಂಕರ ಗಾಂವ್ಕರ್, ಕೊಂಕಣಿ ಪ್ರಾಂತ ವಿಭಾಗದ ಅಧಿಕಾರಿ ನರೇಶ ಪಾಟೀಲ, ಆರ್.ಎಸ್.ಎಸ್. ವಿಭಾಗ ಸಂಚಾಲಕ ಜೋಗ್ ಸಿಂಗ್ ಹಾಗೂ ಶಾಸಕ ಆಶೀಷ್ ಶೇಲ್ಹಾರ್, ಪ್ರಮುಖರಾದ ನಿತ್ಯೇಶ ಶಾಹ್, ವಿದ್ವಾನ್ ಡಾ. ರಾಮದಾಸ ಉಪಾಧ್ಯಾಯ ಮೊದಲಾದವರು ಪಾದಯಾತ್ರೆ ಪಾಲ್ಗೊಂಡರು.