
ಬೆಂಗಳೂರು(ನ.05): ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿದ ದುಷ್ಕರ್ಮಿಗಳು, ಬಳಿಕ ಅವರಿಗೆ ಕಿರುಕುಳ ನೀಡಿ ಬಿಟ್ಟು ಕಳುಹಿಸಿರುವ ಘಟನೆ ಅನ್ನಪೂಣೇಶ್ವರಿ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳಾದ ಎಂ.ಆರ್.ಕಿರಣ್ ಹಾಗೂ ಕೆ.ಸಿ.ಚಂದನ್ ದೌರ್ಜನ್ಯಕ್ಕೆ ಒಳಗಾದವರು. ತಮ್ಮ ಸ್ನೇಹಿತೆ ಮದುವೆಗೆ ಹೋಗಲು ಮುದ್ದಿನಪಾಳ್ಯದ ಮುಖ್ಯರಸ್ತೆಗೆ ಶನಿವಾರ ರಾತ್ರಿ 7.50ರ ಸಮಯದಲ್ಲಿ ಚಂದನ್ ಜತೆ ಮುದ್ದಿನಪಾಳ್ಯ ಮುಖ್ಯರಸ್ತೆಗೆ ಕಿರಣ್ ಬಂದಿದ್ದ. ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿ ಕಾರಿನಲ್ಲಿ ಅಪಹರಿಸಿದ್ದಾರೆ.
ಬೆಂಗಳೂರು : 1.5 ಲಕ್ಷಕ್ಕೆ ಮಗು ಮಾರಾಟ! ಪೋಷಕರೆ ಎಚ್ಚರ
ಕುಣಿಗಲ್ ಸಮೀಪದ ಎಡೆಯೂರಿಗೆ ಕರೆದೊಯ್ದಿದ್ದಾರೆ. ನಿನ್ನ ಲ್ಯಾಪ್‌ಟಾಪ್‌ನಲ್ಲಿರುವ ಫೋಟೋಗಳನ್ನು ಕೊಡಬೇಕು ಎಂದು ಕಿರಣ್‌ಗೆ ಧಮಕಿ ಹಾಕಿ, ಕುಟುಂಬ ಸದಸ್ಯರಿಗೆ ಕರೆ ಮಾಡಿಸಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಎಡೆಯೂರು ಸಮೀಪ ಸಿಗರೇಟ್ ಸೇದಲು ಅಪಹರಣಕಾರರು ಕಾರು ನಿಲ್ಲಿಸಿದಾಗ ಕಿರಣ್, ಕಾರಿನ ಸಮೇತ ತಪ್ಪಿಸಿಕೊಂಡಿದ್ದ. ಬಳಿಕ ಚಂದನ್‌ನನ್ನು ಮತ್ತೊಂದು ಕಾರಲ್ಲಿ ಕಡಬಗೆರೆ ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಶಿವಮೊಗ್ಗ : ಪ್ರಜ್ಞೆ ತಪ್ಪಿಸಿ ಬಾಲಕಿ ಅಪಹರಣ, ಪೋಸ್ಕೋ ಪ್ರಕರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ