Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು

Published : Apr 14, 2022, 08:50 AM IST
Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ಸಾರಾಂಶ

*  9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ  *  ಸಿಡಿಲು ಬಡಿದು ವಿದ್ಯಾರ್ಥಿಗಳಿಬ್ಬರ ಸಾವು *  ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ಬೆಂಗಳೂರು(ಏ.14):  ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ದಕ್ಷಿಣ ಕರ್ನಾಟಕ(South Karnataka)ಭಾಗದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಉತ್ತಮವಾಗಿ ಸುರಿದಿದ್ದು ಕಾಲೇಜು ವಿದ್ಯಾರ್ಥಿಗಳಿಬ್ಬರು ಸಿಡಿಲಿಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯಿಂದ ವರದಿಯಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗ್ರಾಮದಲ್ಲಿ ಬುಧವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ವಾಪಸ್‌ ಬರುತ್ತಿದ್ದ ವೇಳೆ ಮಳೆಯಿಂದ(Rain) ರಕ್ಷಣೆ ಪಡೆಯಲೆಂದು ಪ್ರಯಾಣಿಕರ ತಂಗುದಾಣದಲ್ಲಿ ರಕ್ಷಣೆ ಪಡೆದಿದ್ದ ವಿದ್ಯಾರ್ಥಿಗಳಿಬ್ಬರು(Students) ಸಿಡಿಲು(Lightning Strikes) ಬಡಿದು ಮೃತಪಟ್ಟಿದ್ದಾರೆ(Death). ಉದಯ್‌ ಕುಮಾರ್‌(24) ಮತ್ತು ದರ್ಶನ್‌ (19) ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಬಾರದಿದ್ದರೂ ಗಾಳಿ ಮತ್ತು ಸಿಡಿಲಿನ ಆರ್ಭಟವೇ ಹೆಚ್ಚಾಗಿತ್ತು.

Bengaluru Rain: ರಾಜಧಾನಿಯಲ್ಲಿ ಮಳೆ ಆರ್ಭಟ... ಬಿಸಿಲಿನ ಝಳ ತಣಿಸಲು ಬೇಕಿತ್ತು!

ಇನ್ನುಳಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಭರ್ಜರಿ ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಅನೇಕ ಕಡೆ ಮರಗಳು ಬಿದ್ದು ಬೈಕ್‌, ಕಾರುಗಳಿಗೆ ಹಾನಿಯಾಗಿವೆ. ಶಿವಪುರದಲ್ಲಿ ಶೆಡ್‌ ನಾಶವಾಗಿ 10 ಮಂದಿಯಿದ್ದ ಶಿಳ್ಳೆಕ್ಯಾತರ ಕುಟುಂಬವೊಂದು ಅಕ್ಷರಶಃ ಬೀದಿಗೆ ಬಿದ್ದಿದೆ.

ಚಾಮರಾಜನಗರದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕಟಾವು ಮಾಡದಿದ್ದ ಈರುಳ್ಳಿ ಬೆಳೆಗಾರರಿಗೆ ಈ ಮಳೆ ಕಣ್ಣೀರು ತರಿಸಿದ್ದು ಬೆಳೆ ಕೈ ತಪ್ಪುವ ಆತಂಕ ಎದುರಾಗಿದೆ. ಕೊಡಗಿನ ಸೋಮವಾರಪೇಟೆಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಕಲಬುರಗಿಯಲ್ಲಿ ಅತ್ಯಧಿಕ 41 ಡಿಗ್ರಿ ತಾಪ: ಸುಡು ಬಿಸಿಲಿಗೆ ಕಂಗಾಲಾದ ಜನತೆ..!

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಂಪಲ್ಲಿ ಕ್ರಾಸ್‌ ಬಳಿ ಇರುವ ಮಾಡಪಲ್ಲಿ ರೈತನ(Farmer) ಜಮೀನೊಂದರಲ್ಲಿರುವ ತೆಂಗಿನ ಮರವೊಂದರ ಮೇಲೆ ಬುಧವಾರ ಸಂಜೆ ಮಳೆ ಸುರಿದಾಗ ಅಕಸ್ಮಿಕವಾಗಿ ಸಿಡಿಲು ಬಡಿದು, ಮರ ಹೊತ್ತು ಉರಿದ ಘಟನೆ ನಡೆದಿದೆ.

ಈ ತೆಂಗಿನ ಮರವು ಮಾಡಪಲ್ಲಿ ಗ್ರಾಮದ ರೈತ ತಿಪ್ಪಣ್ಣ ಎಂಬುವವರಿಗೆ ಸೇರಿದ್ದು, ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಮಾಡಪ್ಪಲ್ಲಿ ಗ್ರಾಮದ ನರಸಿಂಹಮೂರ್ತಿ ಕನ್ನಡಪ್ರಭಗೆ ತಿಳಿಸಿದರು. ಬೇಸಿಗೆ(Summer Season) ಕಾಲದಲ್ಲೇ ಈ ರೀತಿ ಭಯಂಕರ ಗುಡುಗು ಸಿಡಿಲುಗಳು ಹೊಡೆಯುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸೇರಿದಂತೆ ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಲ್ಲಿ ಮಳೆ ಆಗಿರುವ ಬಗ್ಗೆ ವರದಿಗಳು ಬಂದಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!