ಕರ್ನಾಟಕದ 15 ಜಿಲ್ಲೆಗಳಲ್ಲಿ ಅಬ್ಬರಿಸಿದ ವರುಣ, ಸಿಡಿಲಿಗೆ ಇಬ್ಬರು ಬಲಿ: ಇಂದೂ ಕೂಡ ಭಾರೀ ಮಳೆ..!

By Kannadaprabha News  |  First Published May 19, 2024, 10:02 AM IST

ಬನವಾಸಿಯ ಕದಂಬ ಮೈದಾನದಲ್ಲಿ ಗೆಳೆಯರ ಜತೆ ಕ್ರಿಕೆಟ್ ಆಡುತ್ತಿದ್ದ ವೇಳೆ ಸಿಡಿಲು ಬಡಿದು ಸಾಜಿದ್ ಅಸ್ಪಾಕಲಿ ಶೇಖ್ ಎಂಬಾತ ಮೃತಪಟ್ಟಿದ್ದಾನೆ. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಸಿಡಿಲು ಬಡಿದು ಸಕಿರ್ ಮಹ್ಮದ್ ಶಹಪುರಿ ಎಂಬುವರು ಮೃತಪಟ್ಟಿದ್ದಾರೆ. 


ಬೆಂಗಳೂರು(ಮೇ.19): ರಾಜಧಾನಿ ಬೆಂಗಳೂರು, ಮಡಿಕೇರಿ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಹಾಗೂ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಸಿಡಿಲಬ್ಬರದ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ.

ಬನವಾಸಿಯ ಕದಂಬ ಮೈದಾನದಲ್ಲಿ ಗೆಳೆಯರ ಜತೆ ಕ್ರಿಕೆಟ್ ಆಡುತ್ತಿದ್ದ ವೇಳೆ ಸಿಡಿಲು ಬಡಿದು ಸಾಜಿದ್ ಅಸ್ಪಾಕಲಿ ಶೇಖ್ (16) ಎಂಬಾತ ಮೃತಪಟ್ಟಿದ್ದಾನೆ. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಸಿಡಿಲು ಬಡಿದು ಸಕಿರ್ ಮಹ್ಮದ್ ಶಹಪುರಿ (55) ಎಂಬುವರು ಮೃತಪಟ್ಟಿದ್ದಾರೆ. ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು ಸೇರಿ ಹಾವೇರಿ ಜಿಲ್ಲೆಯ ಹಲವೆಡೆ ಸಂಜೆ ಸುಮಾರು 1 ಅಬ್ಬರದ ಮಳೆ ಸುರಿಯಿತು. ಕೊಡಗಿನಲ್ಲಿ ಗಂಟೆ ಕಾಲ ಅಬರದ ಮಡಿಕೇರಿ ಸುತ್ತಮುತ್ತ ಮಧ್ಯಾಹ್ನ ಒಂದು ಗಂಟೆ ಗಾಳಿ ಸಹಿತ ಜೋರು ಮಳೆ ಸುರಿದಿದೆ.

Tap to resize

Latest Videos

ಕರ್ನಾಟಕದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಸಿಡಿಲಿಗೆ ಬಾಲಕಿ ಸಾವು

ಮೈಸೂರಿನಲ್ಲಿ ಭಾರಿ ಮಳೆಗೆ ಜನರ ಪರದಾಟ

ಚಾಮರಾಜನಗರದಲ್ಲಿ ಶನಿವಾರ ಮಧ್ಯಾಹ್ನದ ನಂತರ ಒಂದೂವರೆ ತಾಸು ಜೋರು ಮಳೆಯಾಗಿದ್ದು, ಮೂಡಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಡಿ ಗುಂಡಿ ಬಿದ್ದು, ವಾಹನ ಸವಾರರು ಪ್ರಯಾಣಿಸಲು ಪರದಾಡಿದರು. ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ , ತಪ್ಪಲಿನ ಹೆಬ್ರಿ, ಕಾರ್ಕಳ ತಾಲೂಕು ಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, 4-5 ಮನೆಗಳು ಹಾನಿಗೊಳಗಾಗಿವೆ.

ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಸಿಡಿಲಿಗೆ ಹಾವೇರಿ ಯುವಕ ಬಲಿ

ಇಂದು ಭಾರಿ ಮಳೆ ಸಾಧ್ಯತೆ ಒಳನಾಡಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಕರಾವಳಿ ಮೂರು ಜಿಲ್ಲೆಗಳು ಹಾಗೂ ರಾಜಧಾನಿ ಬೆಂಗಳೂರು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಿಗೆ ಮುಂದಿನ 24 ಗಂಟೆ ಯಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.  ಇದೇ ವೇಳೆ ಕೊಡಗು ಜಿಲ್ಲೆಯಲ್ಲಿ ಮೇ 19 ರಿಂದ 21ರ ಅವಧಿಯಲ್ಲಿ 11 ರಿಂದ 20 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಕೆಲವು ಸ್ಥಳದಲ್ಲಿ ಅತಿ ಭಾರೀ ಮಳೆಯೂ ಸುರಿಯಲಿದೆ. ಗಾಳಿ ಹೆಚ್ಚಾಗಿರಲಿದೆ. ಇನ್ನು ಮೇ 20ಕ್ಕೆ ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಅಲ್ಲಲ್ಲಿ ಮಳೆ ಆಗಲಿದೆ.

click me!