
ಬೆಂಗಳೂರು (ಜ.28) ಕಾರ್ಮಿಕ ಹೋರಾಟ ಚಳುವಳಿ ಮೂಲಕ ರಾಜ್ಯದ ಕಾರ್ಮಿಕ ಮುಖಂಡನಾಗಿ ಬೆಳದ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ನಾಳೆ (ಜ.28) ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ 5 ಗಂಟೆಗೆ ಹೃದಯಾಘಾತದಿಂದ ಅಸ್ವಸ್ಥಗೊಂಡ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ನಾಳೆಯ ಹೋರಾಟದ ಕುರಿತು ಮಾತನಾಡಿದ್ದರು. ಸಾರಿಗೆ ನೌಕರರ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದರು.
ಸಾರಿಗೆ ನೌಕರರ ಬೇಡಿಕೆ ಸಮಸ್ಯೆಗಳಿಗೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ಅನಂತ್ ಸುಬ್ಬರಾವ್ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಗಮನಸೆಳೆದಿದ್ದರು. ಪ್ರಮುಖವಾಗಿ ಎಸ್ಮಾ ಜಾರಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಅನಂತ್ ಸುಬ್ಬರಾವ್ ಸಾರಿಗೆ ನೌಕರರ ಪರವಾಗಿ ಹಲವು ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ್ದರು.
ಅನಂತ್ ಸುಬ್ಬರಾವ್ ನಿಧನದಿಂದ ನಾಳೆ ನಡೆಯಬೇಕಿದ್ದ ಸಾರಿಗೆ ನೌಕರರ ಮುಷ್ಕರ ಮಂದೂಡಲಾಗಿದೆ. ಅನಂತ್ ಸುಬ್ಬರಾವ್ ನಿಧನದಿಂದ ಸಾರಿಗೆ ನೌಕರರ ಬೆಂಗಳೂರು ಚಲೋ ಮುಷ್ಕರ ಮುಂದೂಡಲಾಗಿದೆ.
ಇತ್ತೀಚೆಗೆ ರಾಜ್ಯ ಸಾರಿಗೆ ಇಲಾಖೆ ಎಸ್ಮಾ ಜಾರಿಗೆ ಮುಂದಾಗಿತ್ತು. ಈ ಕುರಿತು ಸೂಚನೆಯನ್ನು ನೀಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅನಂತ್ ಸುಬ್ಬರಾವ್ ಎಸ್ಮಾ ಜಾರಿ ಮಾಡಿದ್ರೆ ನಾವು ಅಂಜಲ್ಲ, ಎಸ್ಮಾ ಭಸ್ಮವಾಗಲಿದೆ ಎಂದಿದ್ದರು. ಯಾವಾಗ ಬೇಕಾದರೂ ಸಾರಿಗೆ ಬಂದ್ ಆಗಬಹುದು. ನಮ್ಮ ನೌಕರರು ರೆಡಿಯಾಗಿದ್ದಾರೆ, ಸಾರಿಗೆ ಬಂದ್ ಮಾಡೇ ಮಾಡುತ್ತೇವೆ. ಈ ಬಾರಿ ಅನೌನ್ಸ್ ಮಾಡದೆ ಸಾರಿಗೆ ಬಂದ್ ಮಾಡಲಿದ್ದೇವೆ. ಮರ್ಯಾದೆಯಿಂದ ನಮ್ನ ಕರೆದು ಹಿಂಬಾಕಿ ಸೆಟ್ಲ್ ಮಾಡಿ ಎಂದು ಅನಂತ್ ಸುಬ್ಬರಾವ್ ಎಚ್ಚರಿಕ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ