
ಬೆಂಗಳೂರು (ಜ.28): ರಾಜ್ಯ ಸರ್ಕಾರವು ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. 2024ರಲ್ಲಿ ನೇಮಕಗೊಂಡಿದ್ದ ಒಟ್ಟು 25 ಶಾಸಕರಿಗೆ, ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಹುದ್ದೆಯಲ್ಲಿ ಮುಂದುವರಿಯಲು ಸರ್ಕಾರ ಹಸಿರು ನಿಶಾನೆ ತೋರಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಬುಧವಾರ (ಜ.28, 2026) ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಎಲ್ಲಾ ಶಾಸಕರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ (Cabinet Rank Status) ಸ್ಥಾನಮಾನವನ್ನು ಮುಂದುವರಿಸಲಾಗಿದೆ. ಈ ನೇಮಕಾತಿಯು ಜನವರಿ 26, 2026 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
ರಾಜ್ಯದ ಪ್ರಮುಖ ನಿಗಮಗಳಿಗೆ ನೇಮಕಗೊಂಡಿದ್ದ ಹಿರಿಯ ಶಾಸಕರಾದ ಎನ್.ಎ. ಹ್ಯಾರಿಸ್, ಎಸ್.ಆರ್. ಶ್ರೀನಿವಾಸ್ (ವಾಸು), ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಒಟ್ಟು 25 ಜನಪ್ರತಿನಿಧಿಗಳ ಪಟ್ಟಿ ಈ ಕೆಳಗಿನಂತಿದೆ:
ಎನ್.ಎ. ಹ್ಯಾರಿಸ್: ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ).
ಎಸ್.ಆರ್. ಶ್ರೀನಿವಾಸ್ (ವಾಸು): ಅಧ್ಯಕ್ಷರು, ಕೆಎಸ್‌ಆರ್‌ಟಿಸಿ (KSRTC).
ಕೆ.ಎಂ. ಶಿವಲಿಂಗೇಗೌಡ: ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ.
ಅಪ್ಪಾಜಿ ಸಿ.ಎಸ್. ನಾಡಗೌಡ: ಅಧ್ಯಕ್ಷರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL).
ಭರಮಗೌಡ (ರಾಜು) ಕಾಗೆ: ಅಧ್ಯಕ್ಷರು, ವಾಯುವ್ಯ ಸಾರಿಗೆ ಸಂಸ್ಥೆ.
ಬಿ.ಕೆ. ಸಂಗಮೇಶ್ವರ್: ಅಧ್ಯಕ್ಷರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ (ಲ್ಯಾಂಡ್ ಆರ್ಮಿ).
ಅಬ್ಬಯ್ಯ ಪ್ರಸಾದ್: ಅಧ್ಯಕ್ಷರು, ಕರ್ನಾಟಕ ಕೊಳೆಚೆ ಅಭಿವೃದ್ಧಿ ಮಂಡಳಿ.
ಬಸವನಗೌಡ ದದ್ದಲ್ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ.
ರೂಪಕಲಾ ಎಂ.: ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ.
ಶರತ್ ಕುಮಾರ್ ಬಚ್ಚೇಗೌಡ: ಅಧ್ಯಕ್ಷರು, ಕಿಯೋನಿಕ್ಸ್ (KEONICS).
ಅನಿಲ್ ಚಿಕ್ಕಮಾದು: ಅಧ್ಯಕ್ಷರು, ಜಂಗಲ್ ಲಾಡ್ಜಸ್.
ಸತೀಶ್ ಕೃಷ್ಣ ಸೈಲ್: ಅಧ್ಯಕ್ಷರು, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ಸ್ ಆಂಡ್ ಏಜೆನ್ಸೀಸ್.
ಇವರಲ್ಲದೆ, ಬಸವರಾಜ ಶಿವಣ್ಣನವರ (ಅರಣ್ಯ ಅಭಿವೃದ್ಧಿ), ಬಿ.ಜಿ. ಗೋವಿಂದಪ್ಪ (ಆಹಾರ ನಿಗಮ), ಹೆಚ್.ಸಿ. ಬಾಲಕೃಷ್ಣ (ರಸ್ತೆ ಅಭಿವೃದ್ಧಿ ನಿಗಮ), ಜಿ.ಎಸ್. ಪಾಟೀಲ್ (ಖನಿಜ ನಿಗಮ), ಸಿ. ಪುಟ್ಟರಂಗಶೆಟ್ಟಿ (ಎಂಎಸ್ಐಎಲ್), ಜೆ.ಟಿ. ಪಾಟೀಲ್ (ಹಟ್ಟಿ ಚಿನ್ನದ ಗಣಿ), ಬಿ.ಕೆ. ಗೋಪಾಲಕೃಷ್ಣ ಬೇಳೂರು, ಎಸ್.ಎನ್. ನಾರಾಯಣಸ್ವಾಮಿ, ಟಿ. ರಘುಮೂರ್ತಿ, ರಮೇಶ ಬಂಡಿಸಿದ್ದೇಗೌಡ (ಸೆಸ್ಕ್), ಕನೀಜ್ ಫಾತಿಮಾ, ಟಿ.ಡಿ. ರಾಜೇಗೌಡ ಮತ್ತು ಬಸವನಗೌಡ ತುರುವಿಹಾಳ ಅವರ ಅವಧಿಯನ್ನೂ ವಿಸ್ತರಿಸಲಾಗಿದೆ.
ಸರ್ಕಾರದ ಉಪ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ಅಭಿಜಿನ್ ಬಿ. ಅವರು ರಾಜ್ಯಪಾಲರ ಆಜ್ಞಾನುಸಾರ ಈ ಅಧಿಸೂಚನೆಯನ್ನು ಹೊರಡಿಸಿದ್ದು, ಸಂಬಂಧಪಟ್ಟ ಇಲಾಖೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ