
ಬೆಂಗಳೂರು (ಅ.11) : ಓಲಾ, ಉಬರ್ ಕಂಪನಿಗಳ ವಿರುದ್ದ ಸಾರ್ವಜನಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿರುವ ಹಿನ್ನೆಲೆ ಇಂದು ಓಲಾ, ಉಬರ್ ಕಂಪನಿಗಳ ಪ್ರತಿನಿಧಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಮಹತ್ವದ ಸಭೆಯಲ್ಲಿ ದರ ವಸೂಲಿಗೆ ಸರ್ಕಾರ ಇಂದೇ ಬ್ರೇಕ್ ಹಾಕುವ ಸಾಧ್ಯತೆ.
ಮಧ್ಯಾಹ್ನ 2 ಗಂಟೆಗೆ ಶಾಂತಿನಗರದ ಪ್ರಧಾನ ಕಛೇರಿಯಲ್ಲಿ ಸಾರಿಗೆ ಆಯುಕ್ತ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೇಮಂತ್ ಹಾಗೂ ಜಂಟಿ ಆಯುಕ್ತ ಹಾಲಸ್ವಾಮಿ ಭಾಗಿಯಾಗಲಿದ್ದಾರೆ.
ಇಂದೇ ಓಲಾ, ಉಬರ್ ಆಟೋಗಳ ಭವಿಷ್ಯ ನಿರ್ಧಾರ?
ಓಲಾ, ಉಬರ್ ಕಂಪನಿಗಳು ಸಾರ್ವಜನಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದ್ದರು. ಸಾರಿಗೆ ಇಲಾಖೆ ಆಯುಕ್ತರು ಕಂಪನಿಗಳಿಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿ ಮೂರು ದಿನಗಳಾದರೂ ಕಂಪನಿಗಳು ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಆಟೋಗಳನ್ನು ವಶಕ್ಕೆ ಪಡೆದು ಕಂಪನಿಗಳಿಗೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಇಂದು ಮಹತ್ವದ ಸಭೆ ಹಾಜರಾಗಲು ಕಂಪನಿಗಳು ಒಪ್ಪಿಕೊಂಡಿವೆ.
ಸಾರಿಗೆ ಇಲಾಖೆಯ ನಿಯಮಗಳು, ನಿರ್ಧಾರಗಳಿಗೆ ಒಪ್ಪಿಕೊಂಡ್ರೆ ಓಲಾ, ಊಬರ್ ಕಂಪನಿಗಳನ್ನ ನಡೆಸಲು ಅನುಮತಿ ನೀಡಬಹುದು. ಸಾರಿಗೆ ಅಧಿಕಾರಿಗಳ ಆದೇಶ, ನಿಯಮಗಳನ್ನ ಮೀರಿ ದರ ವಸೂಲಿ ಮುಂದುವರಿಸಿದರೆ ಸರ್ಕಾರ ಓಲಾ, ಉಬರ್ ಕಂಪನಿಗಳನ್ನ ಬ್ಯಾನ್ ಮಾಡುವ ಸಾಧ್ಯತೆ ಇದೆ. ಹಿಂದೆಯೂ ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು.ಆಗ ನಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದ ಕಂಪನಿಗಳು. ಹೀಗಾಗಿ ಈ ಮಹತ್ವದ ಸಭೆಯಲ್ಲಿ. ಕಾನೂನು ಕೋಶದ ಅಭಿಪ್ರಾಯದ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ