ಟ್ರಾಫಿಕ್ ನಿಯಮ ಉಲ್ಲಂಘನೆ: 50% ರಿಯಾಯಿತಿಯಡಿ ದಂಡ ಕಟ್ಟಲು ಇಂದು ಕೊನೆ ದಿನ

Published : Sep 09, 2023, 09:19 AM IST
ಟ್ರಾಫಿಕ್ ನಿಯಮ ಉಲ್ಲಂಘನೆ:  50% ರಿಯಾಯಿತಿಯಡಿ ದಂಡ ಕಟ್ಟಲು ಇಂದು ಕೊನೆ ದಿನ

ಸಾರಾಂಶ

ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ (ಸೆ.9) ಅಂತ್ಯವಾಗಲಿದೆ.

ಬೆಂಗಳೂರು (ಸೆ.9): ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ (ಸೆ.9) ಅಂತ್ಯವಾಗಲಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(State Legal Services Authority)ದ ಸಭೆಯ ತೀರ್ಮಾನದಂತೆ ಫೆ.11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ(Traffic violation case bengaluru)ಗಳಿಗೆ ಅನ್ವಯವಾಗುವಂತೆ ಬಾಕಿ ದಂಡದ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ಜು.6ರಿಂದ ಎರಡನೇ ಬಾರಿ ಶೇ.50ರಷ್ಟುರಿಯಾಯಿತಿ ಸೌಲಭ್ಯ ಕಲ್ಪಿಸಿತ್ತು. ಅದರಂತೆ ಬೆಂಗಳೂರು ನಗರದಲ್ಲಿ ಜು.6ರಿಂದ ಸೆ.8ರ ವರೆಗೆ 2.53 ಲಕ್ಷ ಪ್ರಕರಣಗಳಿಂದ 8.07 ಕೋಟಿ ರು. ಬಾಕಿ ದಂಡ ಸಂಗ್ರಹವಾಗಿದೆ.

ಬ್ರ್ಯಾಂಡ್‌ ಬೆಂಗಳೂರು: ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ದಟ್ಟಣೆ ಶುಲ್ಕ ವಸೂಲಿ!

ಸಾರ್ವಜನಿಕರು ತಮ್ಮ ವಾಹನದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಸಲು ಕರ್ನಾಟಕ ಸ್ಟೇಟ್‌ ಪೊಲೀಸ್‌(ಕೆಎಸ್‌ಪಿ) ಆ್ಯಪ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ವೆಬ್‌ಸೈಟ್‌ಗಳು, ಸಮೀಪದ ಸಂಚಾರ ಪೊಲೀಸ್‌ ಠಾಣೆಗಳು, ನಗರ ಸಂಚಾರ ಪೊಲೀಸರ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ಕೌಂಟರ್‌ನಲ್ಲಿ ಅವಕಾಶ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್