ದಿಲ್ಲಿ ಮಾದರಿಯಲ್ಲಿ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ರ‍್ಯಾಲಿ

Published : Jan 16, 2021, 06:42 PM IST
ದಿಲ್ಲಿ ಮಾದರಿಯಲ್ಲಿ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ರ‍್ಯಾಲಿ

ಸಾರಾಂಶ

ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು  ವಾಪಸ್ ಪಡೆಯುವಂತೆ ಒತ್ತಾಯಿಸಿ 42ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ‌. ಇದಕ್ಕೆ ರಾಜ್ಯದ ರೈತರ ಸಹ ಬೆಂಬಲ ಸೂಚಿಸಿದ್ದಾರೆ.

ಕೋಲಾರ, (ಜ.16): ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸತತ ಪ್ರತಭಟನೆ ನಡೆಸುತ್ತಿರುವ ರೈತರು ದೆಹಲಿಯ ಪ್ರಮುಖ ನಾಲ್ಕು ಗಡಿ ಭಾಗಗಳಲ್ಲಿ ಟ್ರಾಕ್ಟರ್‌ ಮೆರವಣಿಗೆ ನಡೆಸಿದ್ದಾರೆ.

ಅಲ್ಲದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸಹ ಟ್ರಾಕ್ಟರ್‌ ಮೆರವಣಿಗೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದಕ್ಕೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ಮೆರವಣಿಗೆ ಮಾಡಲು ಮುಂದಾಗಿವೆ.

ಈ ಬಗ್ಗೆ  ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್  ಕೋಲಾರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ಮೆರವಣಿಗೆ ಇರುತ್ತದೆ. ದೆಹಲಿ ರೈತರಿಗೆ ಬೆಂಬಲಿಸಿ ನಾವು ಕೂಡ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ವಿವಿದೆಡೆಯಿಂದ ಟ್ರ್ಯಾಕ್ಟರ್‌ಗಳು ಅಂದು ಬೆಂಗಳೂರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದರು.

ರೈತರ ಜೊತೆಗಿನ 9ನೇ ಸುತ್ತಿನ ಮಾತುಕತೆ ವಿಫಲ; ಮತ್ತೆ ಸಭೆ ಯಾವಾಗ?

ರೈಲು, ಬಸ್, ವಿಮಾನ, ಬಂದರು ಸೇರಿದಂತೆ ಹಲವು ‌ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ನೀಡಲಾಗುತ್ತಿದೆ. ಅದಾನಿ, ಅಂಬಾನಿಗಳು ದೇಶಾದ್ಯಂತ ಗೋಡೋನ್‌ಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಅದಾನಿ, ಅಂಬಾನಿಗಳು ಪ್ರದಾನಿಯವರ ಅತ್ತೆ‌ಮಕ್ಕಳಾ? ಚಿಕ್ಕಪ್ಪನ ಮಕ್ಕಳಾ ?ಅಥವಾ ಮಾವನ ಮಕ್ಕಳಾ? ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದರು.

ಕೆಲವರು ಮಾತ್ರವೇ ದೇಶದ ವಾರಸುದಾರರಾಗಿ ಇರಲು ಹುನ್ನಾರ ನಡೆಯುತ್ತಿದೆ. ದೇಶದ ಜನರನ್ನ ನಿರ್ಗತಿಕರನ್ನಾಗಿ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ತಳಬುಡ ಇಲ್ಲದ ಕಾನೂನುಗಳನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದರು.

ಇನ್ನು ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇ ಕಾನೂನು ಇಂದಿನದ್ದಲ್ಲ. ಅದು ಅಶೋಕನ ಕಾಲದಲ್ಲಿಯೂ ಇತ್ತು. ನೆಹರು ಕಾಲದಲ್ಲಿಯೂ ಇತ್ತು. ಕಾಲಕಾಲಕ್ಕೆ ಅದನ್ನು ಮಾರ್ಪಾಟು ಮಾಡಲಾಗಿದೆ. ರೈತರ ಮನೆ ಹಾಳು ಮಾಡಲು ಗೋ ಹತ್ಯೆಯನ್ನ ಜಾರಿಗೆ ತರಲಾಗಿದೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ