ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕರ್‌ ಸಾವು

By Kannadaprabha NewsFirst Published Jan 16, 2021, 7:34 AM IST
Highlights

ರಾಜಸ್ಥಾನದಲ್ಲಿ ಬಿಎಂಡಬ್ಲ್ಯು ಜಿಎಸ್‌ ಬೈಕ್‌ ಅಪಘಾತದ ದುರ್ಘಟನೆ|ತಮ್ಮ ಬೈಕ್‌ ರೈಡಿಂಗ್‌ ಇತಿಹಾಸದಲ್ಲಿ ಇದುವರೆಗೆ 5 ಖಂಡಗಳ, 37 ದೇಶಗಳಲ್ಲಿ 65000 ಕಿ.ಮೀ ಸಂಚರಿಸಿದ ದಾಖಲೆ ಹೊಂದಿದ ಶ್ರೀನಿವಾಸನ್‌| ವಿಶ್ವದ ಎಲ್ಲಾ ದೇಶಗಳಿಗೆ ಬೈಕ್‌ನಲ್ಲೇ ಭೇಟಿ ನೀಡುವ ಕನಸು ತಮ್ಮದು ಎಂದು ಹೇಳಿಕೊಂಡಿದ್ದ ಶ್ರೀನಿವಾಸನ್‌| 

ಜೈಸಲ್ಮೇರ್‌(ಜ.16): ಬೆಂಗಳೂರಿನ ಖ್ಯಾತ ಕ್ರಾಸ್‌ಕಂಟ್ರಿ ಬೈಕರ್‌, ಕಿಂಗ್‌ ರಿಚರ್ಡ್‌ ಶ್ರೀನಿವಾಸನ್‌ ರಾಜಸ್ಥಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಏಕಾಏಕಿ ರಸ್ತೆಗೆ ಅಡ್ಡಬಂದ ಒಂಟೆಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ತಾವು ಓಡಿಸುತ್ತಿದ್ದ ಬಿಎಂಡಬ್ಲ್ಯು ಜಿಎಸ್‌ ಬೈಕ್‌ನಿಂದ ಆಯತಪ್ಪಿ ಕೆಳಗೆ ಉರುಳಿಬಿದ್ದು ಅವರು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ಜೈಸಲ್ಮೇರ್‌ಗೆ 8000 ಕಿ.ಮೀ ದೂರದ ಬೈಕ್‌ ರೈಡಿಂಗ್‌ ವೇಳೆ ಈ ಅಪಘಾತ ಸಂಭವಿಸಿದೆ. ಜ.7ರಂದಷ್ಟೇ ಶ್ರೀನಿವಾಸನ್‌ ಅವರು ಬೆಂಗಳೂರಿನಿಂದ ತೆರಳಿದ್ದರು. ಅವರ ಈ ಸಾಹಸದ ವೇಳೆ ಬೆಂಗಳೂರಿನವರೇ ಆದ ನಾರಾಯಣನ್‌, ಚೆನ್ನೈನ ಡಾ. ವಿಜಯ್‌ ಮತ್ತು ವೇಣುಗೋಪಾಲ್‌ ಕೂಡಾ ಇದ್ದರು.

ಜ.22ಕ್ಕೆ ಬಂದ್‌ಗೆ ಕರೆ ನೀಡಿದ ಬೆಂಗಳೂರು ಮುಸ್ಲಿಂ ಸಂಘಟನೆ!

ಶ್ರೀನಿವಾಸನ್‌ ಅವರು ತಮ್ಮ ಬೈಕ್‌ ರೈಡಿಂಗ್‌ ಇತಿಹಾಸದಲ್ಲಿ ಇದುವರೆಗೆ 5 ಖಂಡಗಳ, 37 ದೇಶಗಳಲ್ಲಿ 65000 ಕಿ.ಮೀ ಸಂಚರಿಸಿದ ದಾಖಲೆ ಹೊಂದಿದ್ದಾರೆ. 2018ರಲ್ಲಿ ಶ್ರೀನಿವಾಸನ್‌ ಅವರು ಬೆಂಗಳೂರಿನಿಂದ ಲಂಡನ್‌ಗೆ, 2019ರಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಬೈಕನಲ್ಲೇ ಪ್ರಯಾಣ ಕೈಗೊಂಡಿದ್ದರು. ವಿಶ್ವದ ಎಲ್ಲಾ ದೇಶಗಳಿಗೆ ಬೈಕ್‌ನಲ್ಲೇ ಭೇಟಿ ನೀಡುವ ಕನಸು ತಮ್ಮದು ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು.
 

click me!