ಇಂದು ಕೋಮುವಾದ ವಿರುದ್ಧ ಹೋರಾಡಲು ಆಗದ ಸ್ಥಿತಿ ಸೃಷ್ಟಿಯಾಗಿದೆ: ಬಿಳಿಮಲೆ

Published : Dec 19, 2022, 11:44 AM IST
ಇಂದು ಕೋಮುವಾದ ವಿರುದ್ಧ ಹೋರಾಡಲು ಆಗದ ಸ್ಥಿತಿ ಸೃಷ್ಟಿಯಾಗಿದೆ: ಬಿಳಿಮಲೆ

ಸಾರಾಂಶ

ತೊಂಬತ್ತರ ದಶಕದ ಘಟನಾವಳಿಗಳಿಂದ ಇಂದು ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧ ಹೋರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೆಹಲಿಯ ಜೆಎನ್‌ಯು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಬೆಂಗಳೂರು (ಡಿ.19) : ತೊಂಬತ್ತರ ದಶಕದ ಘಟನಾವಳಿಗಳಿಂದ ಇಂದು ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧ ಹೋರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೆಹಲಿಯ ಜೆಎನ್‌ಯು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕನ್ನಡ ಜನಶಕ್ತಿ ಕೇಂದ್ರ ಭಾನುವಾರ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ‘ಕುವೆಂಪು ದರ್ಶನ ಮತ್ತು ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೋರೇಟಿಕರಣ, ಜಾಗತೀಕರಣ ಸೇರಿದಂತೆ ದೇಶದಲ್ಲಿ ನಡೆದ ರಥಯಾತ್ರೆಗಳಿಂದ ಲೋಹಿಯಾ ಹೇಳಿದ ಸಮಾಜವಾದಕ್ಕೂ ಇವತ್ತಿನ ಬಂಡವಾಳ ವಾದಕ್ಕೂ ಮೂಲಭೂತ ವ್ಯಾತ್ಯಾಸ ಬೆಳೆಯಿತು. ಹೀಗಾಗಿ, ಇವತ್ತಿನ ಕೋಮವಾದ ಮತ್ತು ಬಂಡವಾಳವಾದದ ವಿರುದ್ಧ ಹೋರಾಟ ಮಾಡಲಾಗದ ವಿಚಿತ್ರ ಪರಿಸ್ಥಿತಿ ದೇಶದಲ್ಲಿ ಸೃಷ್ಟಿಯಾಗಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ತಂದರೆ ಕರ್ನಾಟಕ ಉಳಿಯಲ್ಲ: ಸಿದ್ದರಾಮಯ್ಯ

1990ರ ನಂತರ ಆರ್ಥಿಕ ಬೆಳಗಣಿಗೆಗಳು ಏನಿದೆ ಅದು ನೆಹರು ತಂದಿರುವ ಸಾಮಾಜವಾದಕ್ಕೆ ಅತ್ಯಂತ ವಿರುದ್ಧ ಗತಿಯಲ್ಲಿ ನಡೆದಿದ್ದರಿಂದ ಹೊಸ ತಲೆಮಾರು ನೆಹರು ಅವರನ್ನು ಕೂಡ ಅಪನಂಬಿಕೆಯಿಂದ ಕಂಡಿದ್ದು ಮಾತ್ರವಲ್ಲ ನೆಹರು ಅವರನ್ನು ಅಂತ್ಯಂತ ವಿದ್ರೋಹಿ ಎಂಬ ಹಾಗೆ ಹೇಳಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಲೇಖಕಿ ಕಮಲಾ ಹಂಪನಾ ಮಾತನಾಡಿ, ಕುವೆಂಪು ಅವರ ಸಾಹಿತ್ಯದಲ್ಲಿ ಅಂತಃಸತ್ವವಿದೆ. ಬದುಕಿನ ಪ್ರೀತಿಯಿದೆ. ಜಲಗಾರ ನಾಟಕದಲ್ಲಿ ಅವರು ದೇವರು ಎಲ್ಲಿದ್ದಾನೆ ಎಂದು ಪ್ರಶ್ನೆ ಮಾಡುತ್ತಾರೆ. ಮಲೆಗಳಲ್ಲಿ ಮದು ಮಗಳು ಕಾದಂಬರಿಯಲ್ಲಿ ಹಲವು ಪಾತ್ರಗಳ ಮೂಲಕ ನೆನಪಾಗುತ್ತಾರೆ. ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಆಗಿದ್ದಾರೆ. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿಯಾಗಿದ್ದಾರೆ ಎಂದು ಹೇಳಿದರು.  ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಮೊದಲಾದವರಿದ್ದರು. ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ: ರೂಪ ಶಶಿಧರ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್