ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿ ಪರದಾಡಿದ ಪ್ರಯಾಣಿಕರು

Published : Nov 11, 2022, 07:50 PM ISTUpdated : Nov 11, 2022, 10:00 PM IST
ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿ ಪರದಾಡಿದ ಪ್ರಯಾಣಿಕರು

ಸಾರಾಂಶ

ಬೆಂಗಳೂರಿನಲ್ಲಿ ವಂದೇಮಾತರಂ ರೈಲಿಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಶುಕ್ರವಾರ ವ್ಯತ್ಯಯ ಕಂಡುಬಂದಿತು. ಇದರಿಂದ ಪ್ರಯಾಣಿಕರು ತೀವ್ರ ಪರದಾಟ ನಡೆಸಿದರು.

 ಮಂಡ್ಯ (ನ.11): ಬೆಂಗಳೂರಿನಲ್ಲಿ ವಂದೇಮಾತರಂ ರೈಲಿಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಶುಕ್ರವಾರ ವ್ಯತ್ಯಯ ಕಂಡುಬಂದಿತು. ಇದರಿಂದ ಪ್ರಯಾಣಿಕರು ತೀವ್ರ ಪರದಾಟ ನಡೆಸಿದರು. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಎಲ್ಲಾ ರೈಲುಗಳು ಕನಿಷ್ಠ 1 ರಿಂದ 1 ಗಂಟೆ ವಿಳಂಬವಾಗಿ ಸಂಚಾರ ನಡೆಸಿದವು. ನಿಗದಿತ ಸಮಯಕ್ಕೆ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ರೈಲು ಬರುವ ದಾರಿಯನ್ನೇ ಕಾಯುತ್ತಾ ಕೂರುವಂತಾಯಿತು. ಬೆಂಗಳೂರಿನಿಂದ ಮಂಡ್ಯಕ್ಕೆ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 9ಕ್ಕೆ ಬದಲಾಗಿ 10 ಗಂಟೆಗೆ ತಲುಪಿದರೆ, ಬೆಳಗ್ಗೆ 9.30ಕ್ಕೆ ಬರಬೇಕಿದ್ದ ಗೋಲ್‌ಗುಂಬಜ್ ರೈಲು ಮಧ್ಯಾಹ್ನ 1.30ಕ್ಕೆ ಆಗಮಿಸಿತು. ಬೆಳಗ್ಗೆ 10.15ಕ್ಕೆ ಮಂಡ್ಯ ತಲುಪಬೇಕಿದ್ದ ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 1.50ಕ್ಕೆ ನಿಲ್ದಾಣಕ್ಕೆ ಬಂದು ಸೇರಿತು. ಮಂಡ್ಯದಿಂದ ಮೈಸೂರಿಗೆ ಟ್ಯುಟಿಕಾರನ್, ಮೆಮೋ ಎಕ್ಸ್‌ಪ್ರೆಸ್‌ಗಳು ನಿಗದಿತ ಸಮಯಕ್ಕೆ ಎಂದಿನಂತೆ ಪ್ರಯಾಣಿಸಬೇಕಿದ್ದರೂ ಎಲ್ಲಾ ರೈಲುಗಳು ಒಂದರಿಂದ ನಾಲ್ಕು ಗಂಟೆ ವಿಳಂಬವಾಗಿ ಸಂಚಾರ ನಡೆಸಿದವು. ರೈಲಿಗಾಗಿ ಕಾದು ಬೇಸತ್ತವರು ಬಸ್ ನಿಲ್ದಾಣಕ್ಕೆ ತೆರಳಿ ಪ್ರಯಾಣಕ್ಕೆ ಬಸ್ಸುಗಳನ್ನು ಆಶ್ರಯಿಸಿದರೆ, ಇನ್ನು ಕೆಲವರು ರೈಲುಗಳಿಗಾಗಿ ನಿಲ್ದಾಣದಲ್ಲೇ ಕಾದು ಕುಳಿತರು. ಕನಕ ಜಯಂತಿ ರಜೆಯಿದ್ದ ಕಾರಣ ಪ್ರಯಾಣಿಕರ ಸಂಖ್ಯೆ ಸಾಮಾನ್ಯ ದಿನಗಳಿಗಿಂತ ಕಡಿಮೆ ಇದ್ದರೂ ಅವರು ಸಾಕಷ್ಟು ತೊಂದರೆ  ಅನುಭವಿಸುವಂತಾಯಿತು.

 

 ಕೇವಲ 18 ತಿಂಗಳಲ್ಲಿ ದೇಶಕ್ಕೆ ಸ್ವದೇಶಿ ಹೈಟೆಕ್‌ ರೈಲು ಕೊಟ್ಟ ಸುಧಾನ್ಷು ಮಣಿ

ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್‌ಗೆ ವೇಳಾಪಟ್ಟಿಕೋರಿದ ರೈಲ್ವೆ ಮಂಡಳಿ
ಬೆಂಗಳೂರು-ಹುಬ್ಬಳ್ಳಿ ನಡುವೆ ‘ವಂದೇ ಭಾರತ್‌’ ರೈಲು ಆರಂಭಿಸುವ ಕುರಿತು ಕೇಂದ್ರ ರೈಲ್ವೆ ಮಂಡಳಿಯು, ನೈಋುತ್ಯ ರೈಲ್ವೆಗೆ ವೇಳಾಪಟ್ಟಿಕೋರಿದೆ ಎಂದು ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ರೈಲ್ವೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಕುರಿತ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಅವರ ಪತ್ರಕ್ಕೆ ಉತ್ತರಿಸಿರುವ ಸಂಜೀವ್‌ ಕಿಶೋರ್‌ ಅವರು, ‘ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ - ಶ್ರೀಸಿದ್ಧಾರೂಡ ಸ್ವಾಮಿ ಹುಬ್ಬಳ್ಳಿ ನಿಲ್ದಾಣಕ್ಕೆ ವಂದೇ ಭಾರತ್‌ ರೈಲು ಆರಂಭಿಸುವ ಕುರಿತು ನೈಋುತ್ಯ ರೈಲ್ವೆ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಬೋರ್ಡ್‌ ವೇಳಾಪಟ್ಟಿಕೇಳಿದೆ ಎಂದು ತಿಳಿಸಿದ್ದಾರೆ. ಯಶವಂತಪುರ ನಿಲ್ದಾಣದಲ್ಲಿ ಕಾಮಗಾರಿ ಟೆಂಡರ್‌ ಅ.18ರಂದು ಪೂರ್ಣಗೊಂಡಿದೆ. ದಂಡು ನಿಲ್ದಾಣದ ಕಾಮಗಾರಿ ಟೆಂಟರ್‌ ತಾಂತ್ರಿಕ ಸಮಸ್ಯೆಯಿಂದ ಮರು ಟೆಂಡರ್‌ ಕರೆದಿದ್ದು, ನ.23ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದರು.

ಶಿಷ್ಟಾಚಾರ ಬ್ರೇಕ್: ಕಾರಿನ ರನ್ನಿಂಗ್ ಬೋರ್ಡ್ ಮೇಲೆ ನಿಂತು ಕಾರ್ಯಕರ್ತರಿಗೆ ಮೋದಿ ಸ್ವಾಗತ

ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಮತ್ತು ಸಮೀಪದ ನಾಗೇನಹಳ್ಳಿಯಲ್ಲಿ ಟರ್ಮಿನಲ್‌ ನಿರ್ಮಿಸುವ ಕಾಮಗಾರಿಗೆ ರೈಲ್ವೆ ಬೋರ್ಡ್‌ 493 ಕೋಟಿ ರು. ಅನುದಾನಕ್ಕೆ ಅನುಮತಿ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿಗಳ ಟೆಂಟರ್‌ ಕರೆಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!