Asianet Suvarna News Asianet Suvarna News

ಕೇವಲ 18 ತಿಂಗಳಲ್ಲಿ ದೇಶಕ್ಕೆ ಸ್ವದೇಶಿ ಹೈಟೆಕ್‌ ರೈಲು ಕೊಟ್ಟ ಸುಧಾನ್ಷು ಮಣಿ

ದೇಶಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕೊಟ್ಟ ಹಿಂದಿನ ಶಕ್ತಿ ಸುಧಾನ್ಷು ಮಣಿ ಎಂಬ ರೈಲ್ವೆಯ ಹಿರಿಯ ಎಂಜಿನಿಯರ್‌. ಭಾರತೀಯ ರೈಲ್ವೆಯಲ್ಲಿ ಸುದೀರ್ಘ 38 ವರ್ಷ ಸೇವೆ ಸಲ್ಲಿಸಿದ ಮಣಿ, ತಮ್ಮ ಕಡೆಯ 2 ವರ್ಷವನ್ನು ಈ ರೈಲು ನಿರ್ಮಾಣಕ್ಕಾಗಿ ವ್ಯಯಿಸಿ, ಇಡೀ ಯೋಜನೆಯ ಪ್ರಮುಖ ರೂವಾರಿ ಎಂದು ಗುರುತಿಸಿಕೊಂಡಿದ್ದಾರೆ.

Sudhanshu Mani gave the country high-tech train in only 18 months akb
Author
First Published Nov 7, 2022, 9:58 AM IST

ದೇಶಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕೊಟ್ಟ ಹಿಂದಿನ ಶಕ್ತಿ ಸುಧಾನ್ಷು ಮಣಿ. ಎಂಬ ರೈಲ್ವೆಯ ಹಿರಿಯ ಎಂಜಿನಿಯರ್‌. ಭಾರತೀಯ ರೈಲ್ವೆಯಲ್ಲಿ ಸುದೀರ್ಘ 38 ವರ್ಷ ಸೇವೆ ಸಲ್ಲಿಸಿದ ಮಣಿ, ತಮ್ಮ ಕಡೆಯ 2 ವರ್ಷವನ್ನು ಈ ರೈಲು ನಿರ್ಮಾಣಕ್ಕಾಗಿ ವ್ಯಯಿಸಿ, ಇಡೀ ಯೋಜನೆಯ ಪ್ರಮುಖ ರೂವಾರಿ ಎಂದು ಗುರುತಿಸಿಕೊಂಡಿದ್ದಾರೆ. ಯಾವುದೇ ಉನ್ನತ ತಂತ್ರ​ಜ್ಞಾ​ನ ಬಳಸಿ ಸುಧಾ​ರಿತ ರೈಲು ತಯಾ​ರಿ​ಕೆಯ ಅವಧಿ 3 ರಿಂದ 4 ವರ್ಷ. ಆದರೆ ಯಾವುದೇ ಜಾಗ​ತಿಕ ನೆರವಿಲ್ಲದೇ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಕೇವಲ 18 ತಿಂಗಳ ದಾಖ​ಲೆಯ ಅವಧಿಯಲ್ಲಿ ನಿರ್ಮಿಸಿದ್ದು ಮಣಿ ನೇತೃ​ತ್ವದ ತಂಡದ ಹಿರಿಮೆ

ವಂದೇ ಭಾರತ್‌ ಹಿನ್ನೆಲೆ?:

ವೇಗದ ರೈಲು ಹಿಂದಿನಿಂದಲೂ ಭಾರತದ ಕನಸು. ಆದರೆ ಅದಕ್ಕೆ ಅಗತ್ಯ ತಂತ್ರಜ್ಞಾನ (technology) ಇರಲಿಲ್ಲ. ವೇಗದ ರೈಲು (Fast train), ಎಂಜಿನ್‌ ಎಲ್ಲವೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಇಂಥ ಒಂದು ರೈಲಿನ (Railways) ಕನಿಷ್ಠ ದರ 200 ಕೋಟಿ ರು. ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವದೇಶಿ, ಅತ್ಯಾಧುನಿಕ ತಂತ್ರಜ್ಞಾನದ, ಅಗ್ಗದ ವೆಚ್ಚದ ರೈಲಿನ ಕನಸು ಕಂಡವರು ಸುಧಾನ್ಷು.

ಗೂಳಿಗೆ ಗುದ್ದಿ ಮತ್ತೆ ನುಜ್ಜುಗುಜ್ಜಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು..!

ನಿವೃತ್ತಿಗೆ ಮುನ್ನ:

ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ನಿವೃತ್ತಿಯ ಕಡೆಯ 2 ವರ್ಷವನ್ನು ಅವರು ಕೇಳಿದ ಜಾಗಕ್ಕೆ ವರ್ಗ ಮಾಡಲಾಗುತ್ತದೆ. ಅದೇ ರೀತಿ ಸ್ವದೇಶಿ ರೈಲಿನ ಕನಸು ಕಂಡಿದ್ದ ಮಣಿ, ತಮ್ಮ ಕಡೆಯ 2 ವರ್ಷವನ್ನು ಚೆನ್ನೈಗೆ ವರ್ಗ ಕೇಳಿದರು. ಕಾರಣ ಅಲ್ಲಿ ಭಾರತೀಯ ರೈಲು ನಿರ್ಮಾಣ ಕಾರ್ಖಾನೆ ಇದೆ. ಹೀಗೆ ಚೆನ್ನೈನ (Chennai) ಇಂಡಿಯನ್‌ ಕೋಚ್‌ ಫ್ಯಾಕ್ಟರಿಗೆ (Indian Coach Factory) ಬಂದ ಮಣಿ, ತಮ್ಮದೇ ತಂಡವನ್ನು ಆಯ್ಕೆ ಮಾಡಿಕೊಂಡು ತಮ್ಮ ವೃತ್ತಿ ಜೀವನದ ಕಡೆಯ 2 ವರ್ಷವನ್ನು ಆಗ ಟ್ರೈನ್‌ 18 ಎಂದು ಕರೆಯಲಾಗುತ್ತಿದ್ದ ರೈಲಿನ ಅಭಿವೃದ್ಧಿಗೆ ತೊಡಗಿಸಿಕೊಂಡರು. ಇದಕ್ಕಾಗಿ ಅವರಿಗೆ ರೈಲ್ವೆ 100 ಕೋಟಿ ಅನುದಾನ ನೀಡಿತ್ತು.

Vande Bharat Express: ಚೆನ್ನೈ-ಮೈಸೂರು ಪ್ರಯಾಣಕ್ಕೆ 921 ರೂಪಾಯಿ ಟಿಕೆಟ್‌!

ದುರ್ಗಮ ಹಾದಿ:

ದೇಶಿ ನಿರ್ಮಿತ ರೈಲು ನಿರ್ಮಾ​ಣದ ಹಾದಿ ಸುಗಮವಾ​ಗೇನೂ ಇರ​ಲಿ​ಲ್ಲ. ಇದಕ್ಕೆ ಯಾವುದೇ ವಿದೇಶಿ ತಂತ್ರಜ್ಞಾನ ನೆರವು (foreign technological assistance) ಇರಲಿಲ್ಲ. ಹೊಸ ಸಾಮಾನ್ಯ ರೈಲಿನ ಬದಲಾಗಿ ಮೆಟ್ರೋ ರೈಲಿನ ಮಾದರಿಯಲ್ಲಿ ಎಂಜಿನ್‌ ರಹಿತ ರೈಲು ನಿರ್ಮಿಸಬೇಕಿತ್ತು. ಪ್ರತಿಯೊಂದು ಬಿಡಿಭಾಗ ಕೂಡಾ ಹೊಸದಾಗಿ ಬೇಕಿತ್ತು. ಹೀಗಾಗಿ ನೂರಾರು ಕಂಪನಿಗಳ ಸಹಯೋಗ ಪಡೆದು ಹಗಲಿರುಳು ದುಡಿದು ಕೇವಲ 18 ತಿಂಗಳಲ್ಲಿ ಅವರು ದೇಶಕ್ಕೆ ಟ್ರೈನ್‌ 18 ರೈಲನ್ನು ನಿರ್ಮಿಸಿಕೊಟ್ಟರು.

Follow Us:
Download App:
  • android
  • ios