ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ ಪುತ್ರನ ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಉಗುರಿನ ಕಂಟಕ!

By Ravi Janekal  |  First Published Oct 27, 2023, 2:31 PM IST

ನಿನ್ನೆಯಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಅಳಿಯ ರಜತ್ ಉಳ್ಳಾಗಡ್ಡಿ ಹುಲಿ ಉಗುರು ಪೆಂಡೆಂಟ್ ಧರಿಸಿದ ಫೋಟೊಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರನಿಗೂ ಸಹ ಸಂಕಷ್ಟ ಎದುರಾಗಿದೆ.


ಬೆಳಗಾವಿ (ಅ.27): ನಿಷೇಧಿತ ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು, ಚಿತ್ರನಟರ ಫೋಟೊಗಳು ವೈರಲ್ ಆಗುವ ಮೂಲಕ ಹೊಸ ಪ್ರಕರಣಗಳು ಬಯಲಿಗೆ ಬರುತ್ತಿವೆ. ನಿನ್ನೆಯಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಅಳಿಯ ರಜತ್ ಉಳ್ಳಾಗಡ್ಡಿ ಹುಲಿ ಉಗುರು ಪೆಂಡೆಂಟ್ ಧರಿಸಿದ ಫೋಟೊಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರನಿಗೂ ಸಹ ಸಂಕಷ್ಟ ಎದುರಾಗಿದೆ.

ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಸುಮಿತ್ ‌ಸವದಿ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎನ್ನಲಾಗ್ತಿದೆ.ಆದರೆ ಸೋಷಿಯಲ್ ಮೀಡಿಯಾದಲ್ಲಿ 'ಎಲ್ಲರಿಗೂ ಒಂದೇ ಕಾನೂನು' ಹ್ಯಾಷ್ ಟ್ಯಾಗ್ ಬಳಸಿ ಬಿಗ್ ಸ್ಪರ್ಧಿ ಸಂತೋಷ್ ಹಾಗೂ ಚಿಕ್ಕಮಗಳೂರಿನ ಮಾರ್ಕಂಡೇಯ ದೇವಸ್ಥಾನದ ಅರ್ಚಕರನ್ನು ಬಂಧಿಸುವ ಅರಣ್ಯ ಇಲಾಖೆ ರಾಜಕಾರಣಿಗಳ ಮಕ್ಕಳನ್ನು ಏಕೆ ಬಂಧಿಸುತ್ತಿಲ್ಲ? ಜನಸಾಮಾನ್ಯರಿಗೊಂದು ರಾಜಕಾರಣಿಗಳ ಮಕ್ಕಳಿಗೊಂದು ಕಾನೂನಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tap to resize

Latest Videos

ಒರಿಜಿನಲ್ ಹುಲಿ ಉಗುರು ಅಲ್ಲ, ಪ್ಲಾಸ್ಟಿಕ್ ಉಗುರು:

ಮಾಜಿ ಡಿಸಿಎಂ ಪುತ್ರನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಮಾಧ್ಯಮಗಳಿಗೆ ಸೃಷ್ಟೀಕರಣ ನೀಡಿದ ಲಕ್ಷ್ಮಣ ಸವದಿಯ ಹಿರಿಯ ಪುತ್ರ ಚಿದಾನಂದ ಸವದಿ, ಅದು ವಿವಾಹದ ಸಂದರ್ಭದಲ್ಲಿ ಧರಿಸಿರುವ ಹುಲಿ ಉಗುರಿನ ಪೆಂಡೆಂಟ್. ಆದರೆ ಅದು ಒರಿಜಿನಲ್ ಅಲ್ಲ, ಪ್ಲಾಸ್ಟಿಕ್ ಉಗುರು. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಂದು ಹಸ್ತಾಂತರಿಸುತಿದ್ದೇವೆ. ಯಾವುದೇ ರೀತಿಯ ತನಿಖೆ ಇದ್ದರೂ ನಾವು ಸಹಕರಿಸಲಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಲಿ ಉಗುರು  ಧರಿಸುವುದು ಶೋಕಿ ಆಗಿದೆ. ಇದನ್ನು ನನ್ನ ಸಹೋದರನ ಸ್ನೇಹಿತರು ಮದುವೆಯಲ್ಲಿ ಗಿಫ್ಟ್ ಕೊಟ್ಟಿದ್ದಾರೆ. ಆದರೆ ಇದು ಅಸಲಿ ಉಗುರು ಅಲ್ಲ ಪ್ಲಾಸ್ಟಿಕ್ ನಿಂದ ಮಾಡಿರುವ ಹುಲಿ ಉಗುರಿನ ಆಕೃತಿ. ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ ಎಂದ ಚಿದಾನಂದ ಸವದಿ. 

click me!