
ಬಳ್ಳಾರಿ (ಅ.28): ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಶಾಸಕರು, ಮಂತ್ರಿಗಳ ಕುಟುಂಬಸ್ಥರದೇ ಸಾಲು ಸಾಲು ಫೋಟೊಗಳು ವೈರಲ್ ಆಗುತ್ತಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಅಳಿಯ, ಶಾಸಕ ಲಕ್ಷ್ಮಣ್ ಸವದಿ ಪುತ್ರನ, ಬಳಿಕ ಇದೀಗ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಕೊರಳಲ್ಲಿರುವ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆಗಿದೆ.
ಬಳ್ಳಾರಿ ನಗರ ಶಾಸಕನಾಗಿರುವ ಭರತ್ ರೆಡ್ಡಿ ಹುಲಿ ಉಗುರು ಹಾಕಿದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಯದಲ್ಲಿ ಹಾಕಿದ್ದ ಹುಲಿ ಉಗುರಿನ ಪೆಂಡೆಂಟ್. ಫೋಟೊ ವೈರಲ್ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಭರತ್ ರೆಡ್ಡಿ, "ನಾನು ಹಾಕಿರೋದು ಒರಿಜಿನಲ್ ಹುಲಿ ಉಗುರಿನ ಪೆಂಡೆಂಟ್ ಅಲ್ಲ, ಅದೊಂದು ಸಿಂಥೆಟಿಕ್ ಹುಲಿ ಉಗುರಿನ ಪೆಂಡೆಂಟ್ ಎಂದಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಉಗುರಿನ ಕಂಟಕ!
ಸಾಮಾನ್ಯವಾಗಿ ಅಷ್ಟು ಸುಲಭವಾಗಿ ಹುಲಿ ಉಗುರುಗಳು ಸಿಗಲ್ಲ. ಗೋಲ್ಡ್ ಶಾಪ್ ನಲ್ಲಿ ಹುಲಿ ಉಗುರಿನ ಸಿಂಥೆಟಿಕ್ ಪೆಂಡೆಂಟ್ ಸಿಗುತ್ತವೆ. ಈಗ ಸಿಕ್ಕಿರುವ ಪೆಂಡೆಂಟ್ ಗಳು ಬಹುತೇಕ ಸಿಂಥೆಟಿಕ್ ಎನ್ನುವುದು ನನ್ನ ಅಭಿಪ್ರಾಯ. ಭಾರತದಲ್ಲಿ ಹುಲಿಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಹುಲಿ ಉಗುರು ಸಿಗೋದು ಅಷ್ಟು ಸುಲಭವಲ್ಲ. ಈಗ ಅಭಿಯಾನದ ರೀತಿಯಲ್ಲಿ ಪೋಟೋ ವೈರಲ್ ಆಗುತ್ತಿವೆ. ಅದೇ ರೀತಿಯಲ್ಲಿ ನನ್ನ ಪೋಟೋ ಕೂಡಾ ವೈರಲ್ ಆಗಿದೆ. ಅದು ಒರಿಜಿನಲ್ ಅಲ್ಲ, ಸಿಂಥೆಟಿಕ್ ನಿಂದ ಮಾಡಿರುವ ಹುಲಿ ಉಗುರು. ಬೇಕಾದರೆ ನಿಮಗೂ(ಮಾಧ್ಯಮದವರಿಗೆ) ವಿಳಾಸ ಕೊಡ್ತೇನೆ. ನೀವು ಸಿಂಥೆಟಿಕ್ ಹುಲಿ ಉಗುರು ಖರೀದಿ ಮಾಡಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ