: ಜಿಲ್ಲೆ ಖ್ಯಾತ ವೈದ್ಯರಾಗಿ ಹೆಸರು ಮಾಡಿರುವ ಖಾಸಗಿ ಆಸ್ಪತ್ರೆಯ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣದ ತನಿಖೆ ವೇಳೆ ಬೆಚ್ಚಿ ಬೀಳಿಸುವ ವಿಷಯ ಹೊರಬಿದ್ದಿದೆ.
ರಾಯಚೂರು (ಸೆ.4): ಜಿಲ್ಲೆ ಖ್ಯಾತ ವೈದ್ಯರಾಗಿ ಹೆಸರು ಮಾಡಿರುವ ಖಾಸಗಿ ಆಸ್ಪತ್ರೆಯ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣದ ತನಿಖೆ ವೇಳೆ ಬೆಚ್ಚಿ ಬೀಳಿಸುವ ವಿಷಯ ಹೊರಬಿದ್ದಿದೆ.
ಗುಂಡಿನ ದಾಳಿ ನಡೆದ ಪ್ರಕರಣದ ಬೆನ್ನಹತ್ತಿರುವ ತನಿಖಾ ತಂಡಕ್ಕೆ ಒಂದೊಂದೇ ಬೆಚ್ಚಿಬಿಳಿಸುವ ವಿಷಯಗಳು ಹೊರಬರುತ್ತಿವೆ. ವೈದ್ಯನಿಗೆ ಮುಂಬೈ ಮೂಲದಿಂದ ಬೆದರಿಕೆ ಕರೆಗಳು ಬಂದಿವೆ. ಇದೇ ಜೂನ್ 7ರಂದು ಮುಂಬೈ ನೆಟ್ವರ್ಕ್‌ನಿಂದ ವೈದ್ಯ ಜಯಪ್ರಕಾಶ್ ಗೆ ಬಂದಿದ್ದ ಕರೆ.'ಭಾಯ್ ಬೋಲ್ ರಹೆ ಹೈ, ತೀಸ್ ಹಜಾರ್ ಡಾಲರ್ ದೋ ದಿನ ಅಂದರ್ ಡಾಲ್ ನಾ, ವನಹಿ ದಾಲೆತೋ ತುಮ್ಹಾರಾ ಫ್ಯಾಮಿಲಿ, ಡಾಕ್ಟರ್ ಕಾ ಫ್ಯಾಮಿಲಿ ಕೋ ನಹಿ ಚೋಡೆಂಗೆ' ಎಂದು ಮುಂಬೈ ಸ್ಟೈಲ್ ಹಿಂದಿಯಲ್ಲಿ ಬೆದರಿಕೆ ಹಾಕಿ ಕ್ರಿಪ್ಟೋ ಕರೆನ್ಸಿ ನೀಡುವಂತೆ ನಿರಂತರ ಕರೆ ಮಾಡಿರುವ ದುಷ್ಕರ್ಮಿಗಳು.
ಕಲಬುರಗಿ: ಪರಿಚಯ ಕೇಳಿದವನ ಮೇಲೆಯೇ ಗುಂಡಿನ ದಾಳಿ
ಆಸ್ಪತ್ರೆ ನಂಬರ್ ಗೆ ಕರೆ ಬಂದಿದ್ದರಿಂದ ಅದೇ ನಂಬರ್ ಗೆ ವಾಪಸ್ ಕರೆ ಮಾಡಿದ್ದ ಆಸ್ಪತ್ರೆ ಮ್ಯಾನೇಜರ್ ಮಹಾಂತೇಶ್ ಸಜ್ಜನ್(Mahantesh sajjan) ಆಗ 'ಮೈ ಆಪ್ ಕೊ ಮೆಸೆಜ್ ಕರ್ತಾ ಹುಂ, ಓ ಅಕೌಂಟ್ ಗೆ ತೀಸ್ ಹಜಾರ್ ಕ್ರಿಪ್ಟೊ ಕರೆನ್ಸಿ ಡಾಲ್ ನಾ.. ಅಂತ ಎಸ್ ಎಂಎಸ್ ಮಾಡಿದ್ದಾರೆ. ಬಳಿಕ ಈ ಬಗ್ಗೆ ಎರಡು ತಿಂಗಳ ಹಿಂದೆ ನೇತಾಜಿ ನಗರ ಠಾಣೆಗೆ ದೂರು ನೀಡಿದ್ದ ಆಸ್ಪತ್ರೆ ಮ್ಯಾನೇಜರ್ ಮಹಾಂತೇಶ್. ದೂರಿನಲ್ಲಿ ಮುಂಬೈ ಸ್ಟೈಲ್ ನ ಹಿಂದಿಯಲ್ಲಿ ದುಷ್ಕರ್ಮಿ ಬೆದರಿಕೆ ಹಾಕಿದ್ದರ ಬಗ್ಗೆ ವೈದ್ಯ ಜಯಪ್ರಕಾಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕ್ರಿಪ್ಟೋ ಕರೆನ್ಸಿ, ಮುಂಬೈ ನೆಟ್ ವರ್ಕ್ ಆಧರಿಸಿ ಕಾರ್ಯಾಚರಣೆಗಿಳಿದಿರುವ ತನಿಖಾ ತಂಡ. ರಾಯಚೂರು ಎಸ್‌ಪಿ ನಿಖಿಲ್ ಬಿ ಸೂಚನೆ ಮೇರೆಗೆ ಮೂರು ತಂಡ ತನಿಖೆ ಕಳೆದ ನಾಲ್ಕು ದಿನಗಳಿಂದ ಮೂರು ತಂಡಗಳನ್ನಾಗಿ ರಚಿಸಿ ದುಷ್ಕರ್ಮಿಗಳ ಜಾಡು ಜಾಲಾಡುತ್ತಿರುವ ರಾಯಚೂರು ಪೊಲೀಸರು. ವೈದ್ಯನ ಮೇಲೆ ಗುಂಡಿನ ದಾಳಿ ಯಾಕೆ ನಡೆಯಿತು ಎಂಬುದು ಇನ್ನೂ ನಿಗೂಢವಾಗಿದೆ. ಮುಂಬೈನಿಂದ ಬೆದರಿಕೆಯೊಡ್ಡಿದ ಗ್ಯಾಂಗ್ ಗುಂಡಿನ ದಾಳಿ ನೆಡಸಿದ್ದಾರೆಯೇ? ಅಥವಾ ವೈದ್ಯರೊಂದಿಗೆ ಬೇರೆ ಯಾರಾದರೂ ದ್ವೇಷ ಸಾಧಿಸಿ ಗುಂಡಿನ ದಾಳಿ ನಡೆಸಿದರೇ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು.
ರಾಯಚೂರು: ನೆಚ್ಚಿನ ಶಿಕ್ಷಕ ಸಾವು, ಶಾಲೆ ಬಿಟ್ಟು ಅಂತ್ಯಕ್ರಿಯೆಗೆ ಬಂದ ನೂರಾರು ಮಕ್ಕಳು..!
ಕಳೆದ ಗುರುವಾರ ವೈದ್ಯ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು(Dr jayaprakash bettadur) ಮಧ್ಯಾಹ್ನ ತಮ್ಮ ಕಾರಿನಲ್ಲಿ ರಾಯಚೂರಿನಿಂದ ಮಾನ್ವಿ ಕಡೆಗೆ ಹೋಗುವಾಗ ಸಾಥ ಮೈಲ್ ಕ್ರಾಸ್(Raichur sathamile cross) ಹತ್ತಿರ ಇವರ ಕಾರಿನ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡಿನ ದಾಳಿ ಮಾಡಿ ಎಸ್ಕೇಪ್ ಆಗಿದ್ದರು. ಕಾರಿನ ಬಾನಟ್ಗೆ ಗುಂಡು ತಗುಲಿತ್ತು ಅದೃಷ್ಟವಶಾತ್ ಈ ಘಟನೆಯಲ್ಲಿ ವೈದ್ಯರು ಪ್ರಾಣಪಾಯದಿಂದ ಪಾರಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.