ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ನಾಶವಾದರು: ಕಲ್ಲಡ್ಕ ಪ್ರಭಾಕರ್ ಭಟ್

By Kannadaprabha News  |  First Published Dec 15, 2023, 12:52 PM IST

ಸಮಸ್ತ ಹಿಂದೂಗಳೆಲ್ಲರೂ ಪೂಜಿಸುವ ಶ್ರೀರಾಮನ ಕುರಿತು ಕೆಲವರು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು ಎಂದು ಶ್ರೀರಾಮ ವಿದ್ಯಾ ಕೇಂದ್ರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು. 


ಹಾಸನ (ಡಿ.15): ಸಮಸ್ತ ಹಿಂದೂಗಳೆಲ್ಲರೂ ಪೂಜಿಸುವ ಶ್ರೀರಾಮನ ಕುರಿತು ಕೆಲವರು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು ಎಂದು ಶ್ರೀರಾಮ ವಿದ್ಯಾ ಕೇಂದ್ರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು. ನಗರದ ಮಹಾರಾಜ ಪಾರ್ಕ್ ಬಳಿ ಇರುವ ಶ್ರಿ ಸೀತಾರಾಮಾಂಜನೇಯ ದೇವಾಲಯದಲ್ಲಿ ಜನವರಿ ೨೨ರಂದು ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆಗೆ ಪ್ರಭು ಶ್ರೀ ರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಮಾತನಾಡಿದ ಅವರು, ಶ್ರೀರಾಮ ಅಂದರೆ ದಾಖಲೆಗಳಿಲ್ಲ. 

೨೦ ಸಾವಿರ ವರ್ಷಗಳ ಹಿಂದೆ ಜನ್ಮ ಪಡೆದಿರಬಹುದು. ಆದರೆ ೧೦ ಸಾವಿರ ವರ್ಷಗಳ ಹಿಂದೆ ಶ್ರೀರಾಮ ಜನಿಸಿದರು. ಇಂದಿಗೂ ಶ್ರೀರಾಮನ ತರಹ ಇರಬೇಕು ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೀಳು ಮಟ್ಟದ ಬಾಬರ್ ನಮ್ಮ ದೇಶವನ್ನು ಆಕ್ರಮಣ ಮಾಡಿ, ಸಾವಿರಾರು ಜನರು ಬರುವ ಶ್ರೀರಾಮನ ದೇವಸ್ಥಾನ ನೋಡಿದ್ದ. ಬಾಬರ್ ದೇವಸ್ಥಾನ ತೆರವುಗೊಳಿಸಲು ಸೈನಿಕರಿಗೆ ಸೂಚನೆ ನೀಡಿದ ಪರಿಣಾಮ ಯುದ್ಧ ನಡೆದು ೩ ರಿಂದ ೪ ಲಕ್ಷ ಜನ ಹಿಂದೂಗಳು ಸಾವನ್ನಪ್ಪಿದರು. ಸೋಮನಾಥ ದೇವಸ್ಥಾನ ನಿರ್ಮಾಣ ಮಾಡಲು ನೆಹರು ಅನುಮತಿ ನೀಡಲಿಲ್ಲ. ಆದರೂ ಸರ್ದಾರ್ ವಲ್ಲಬಬಾಯಿ ಪಟೇಲರು ದೇವಾಲಯ ನಿರ್ಮಾಣ ಮಾಡಿದರು. ಮುಸ್ಲಿಂ ಸಮುದಾಯದ ರಾಜರು ಸುಮಾರು ೩೩ ಸಾವಿರ ಹಿಂದೂ ದೇವಾಲಯಗಳ ನಾಶ ಮಾಡಿದ್ದಾರೆ. ನಾವು ಒಡೆದಿದ್ದು ಕೇವಲ ೩ ಮಸೀದಿ ಎಂದರು.

Latest Videos

undefined

ಸಿಎಂ ಸಿದ್ದರಾಮಯ್ಯ ಜಾತಿ, ಧರ್ಮ ಒಡೆಯುವುದರಲ್ಲಿ ನಿಸ್ಸಿಮ: ಕೆ.ಎಸ್.ಈಶ್ವರಪ್ಪ

ರಾಮಮಂದಿರ ನಿರ್ಮಾಣ ಮಾಡಲು ಆ ವೇಳೆ ರಾಜೀವ್ ಗಾಂಧಿ ವಿರೋಧ ಮಾಡಿದರು. ೧೯೮೯ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದವು. ಎಲ್ಲಿಯೂ ರಾಮ ಭಕ್ತರು ರಾಮಮಂದಿರ ತಲುಪದಂತೆ ಅಂದಿನ ಸರ್ಕಾರಗಳು ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಿದರು ಹಾಗೂ ಮುಲಾಯಂ ಸಿಂಗ್ ಯಾದವ್‌ ಗುಂಡು ಹಾರಿಸಲು ಸೂಚನೆ ನೀಡಿದರು. ಆದ ಕಾರಣ ನಾವೆಲ್ಲರೂ ಯಾವುದೇ ಗುಂಪಿನ ಮೂಲಕ ಹಾಗೂ ಭಜನೆ ಮಾಡದಂತೆ ಒಂದೇ ಬೋಗಿಯಲ್ಲಿ ಸಂಚಾರ ಮಾಡದಂತೆ ವಿಶ್ವ ಹಿಂದೂ ಪರಿಷತ್ತು ಹಿರಿಯರು ಸೂಚನೆ ನೀಡಿದರು. ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು. ಅಖಂಡ ಭಾರತ ಶ್ರೇಷ್ಠ ಭಾರತ ಎಂಬ ಕಲ್ಪನೆಯಡಿ ವಿಭಜನೆಯಾಗಿರುವ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ರಾಮರಾಜ್ಯ ನಿರ್ಮಾಣವಾಗುತ್ತದೆ. ರಾಮರಾಜ್ಯ ನಿರ್ಮಾಣವಾದರೆ ಈ ದೇಶದಲ್ಲಿ ದಿನನಿತ್ಯ ನಡೆಯುವ ಜಗಳ, ಮತಾಂತರ ಭಯೋತ್ಪಾದನೆ ನಿಂತುಹೋಗಲಿದೆ. ಹಿಂದೂಗಳೆಲ್ಲ ಒಂದಾಗಿದ್ದೇವೆ. ಆ ಕಾರಣಗಳಿಗಾಗಿ ರಾಮಮಂದಿರ ನಿರ್ಮಾಣವಾಯಿತು. ಮತ ಗಳಿಕೆಗೆ ಕಾರಣ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೂಡ ನಾನು ಹಿಂದೂ ಅನ್ನುತ್ತಾರೆ. ಆದರೆ ಆರ್ ಎಸ್.ಎಸ್ ನವರನ್ನು ಹಿಂದೂಗಳಲ್ಲ ಎನ್ನುತ್ತಾರೆ. ನಮ್ಮಲ್ಲಿ ಆರ್.ಎಸ್.ಎಸ್. ಹಿಂದೂ ಸಾಮಾನ್ಯ ಹಿಂದೂ ಎಂಬುದಿಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು.

ಮುಸ್ಲಿಂರಿಗೆ ೬೦ ದೇಶಗಳಿವೆ. ಕ್ರಿಶ್ಚಿಯನ್‌ರಿಗೆ ೭೦ ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ದೇಶ. ಗಾಜಾ ಪಟ್ಟಿ ವಶಪಡಿಸಿಕೊಳ್ಳಲು ಇಸ್ರೇಲ್-ಪ್ಯಾಲೆಸ್ಟೈನ್ ನಡುವೆ ಯುದ್ಧ ನಡೆಯುತ್ತಿದೆ. ಯಹೂದಿಗಳು ಒಂದಾಗಿ ಮುಸ್ಲಿಂ ದೇಶಗಳ ಒಕ್ಕೂಟದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹಿಂದೂಗಳ ಅಸ್ತಿತ್ವದ ಪ್ರಶ್ನೆ ಭಾರತ ಎಂದರು. ನಾವು ಶಕ್ತಿ ಶಾಲಿಯಾದರೆ ಹಿಂದೂ ಅನ್ನುತ್ತಾರೆ. ಇಲ್ಲ ಅಂದರೆ ಯಾರು ಹಿಂದೂಗಳಿಗೆ ಯಾರು ಮರ್ಯಾದೆ ಕೊಡುವುದಿಲ್ಲ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. 

ಸಿದ್ದು ಸರ್ಕಾರ ಬರ ಪರಿಹಾರ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ

ಬೈಕ್‌ ಯಾತ್ರೆಯು ರೈಲ್ವೆ ನಿಲ್ದಾಣದ ಬಳಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಬಿ.ಎಂ. ರಸ್ತೆ, ಎನ್.ಆರ್ ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಚಿತ್ರಮಂದಿರ, ಸಾಯಿಬಾಬಾ ದೇವಸ್ಥಾನ, ಸಾಲಗಾಮೆ ಗೇಟ್ ಸರ್ಕಾರಿ ಕಲಾ ಕಾಲೇಜು ಮಾರ್ಗವಾಗಿ ಎಂ.ಜಿ. ರಸ್ತೆ, ಬಸಟ್ಟಿಕೊಪ್ಪಲು ಮುಖ್ಯ ರಸ್ತೆ, ಸ್ಲೇಟರ್ಸ ಹಾಲ್ ಸರ್ಕಲ್ ಮೂಲಕ ಸೀತಾರಾಮ ಆಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿಗೆ ಬೈಕ್ ಯಾತ್ರೆ ಸಂಪೂರ್ಣಗೊಂಡಿತು. ಇದೆ ವೇಳೆ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಜಿಲ್ಲಾ ಸಂಯೋಜಕರಾದ ಫಾರಸ್ ಮಲ್, ಸಂಚಾಲಕ ವಿಜಯಕುಮಾರ್ ನಾರ್ವೇ, ಟ್ರಸ್ಟ್ ಬಿಜೆಪಿ ಜಿಲ್ಲಾ ಮಾದ್ಯಮ ಸಂಚಾಲಕ ವಿಜಯ್ ಕುಮಾರ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್. ಶೋಭನ್ ಬಾಬು, ವೇಧವತಿ, ವಿಜಯಲಕ್ಷ್ಮಿ ಅಂಜನಪ್ಪ, ರತ್ನಪ್ರಕಾಶ್, ಪ್ರಣವ್ ಭಾರಧ್ವಜ್, ಮಹಿಪಾಲ್, ನರೇಶ್, ಇತರರು ಉಪಸ್ಥಿತರಿದ್ದರು.

click me!