ಕೇಸ್‌ ಖುಲಾಸೆ ಅರ್ಜಿ ವಜಾ, ನ್ಯಾಯಾಧೀಶರ ಮುಂದೆ ತಲೆ ತಗ್ಗಿಸಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

Published : Apr 03, 2025, 07:30 PM ISTUpdated : Apr 03, 2025, 08:15 PM IST
ಕೇಸ್‌ ಖುಲಾಸೆ ಅರ್ಜಿ ವಜಾ, ನ್ಯಾಯಾಧೀಶರ ಮುಂದೆ ತಲೆ ತಗ್ಗಿಸಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

ಸಾರಾಂಶ

ಅತ್ಯಾಚಾರ ಪ್ರಕರಣದಲ್ಲಿ ಜೈಲಿರುವ ಪ್ರಜ್ವಲ್ ರೇವಣ್ಣರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಪ್ರಜ್ವಲ್ ಅವರ ಖುಲಾಸೆ ಅರ್ಜಿಯನ್ನು ತಿರಸ್ಕರಿಸಿತು. ಕೆ.ಆರ್.ನಗರ ಮಹಿಳೆ ದಾಖಲಿಸಿದ ದೂರಿನ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಲಾಗಿದೆ. ಮತ್ತೊಂದು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ರೇವಣ್ಣ ಮತ್ತು ಭವಾನಿ ರೇವಣ್ಣ ಕೂಡಾ ಕೇಸ್ ಎದುರಿಸುತ್ತಿದ್ದಾರೆ.

ಬೆಂಗಳೂರು (ಏ.3): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿರುವ ಆರೋಪಿ ಹಾಗು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು. ಪ್ರಕರಣದಿಂದ ಖುಲಾಸೆಗೊಳಿಸುವಂತೆ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.  ಕೆ.ಆರ್.‌ನಗರ ಮಹಿಳೆ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ಕೇಸ್ ಇದಾಗಿದ್ದು, ಇದೇ ವೇಳೆ ಪ್ರಜ್ವಲ್ ಮೇಲಿರುವ ಆರೋಪವನ್ನು ಜಡ್ಜ್ ಓದಿದರು. ಆರೋಪಗಳು ಏನಿದೆ ಎಂದು ಆರೋಪಿ ಪ್ರಜ್ವಲ್ ಗೆ ನ್ಯಾಯಾಧೀಶರು ತಿಳಿಸಿದರು. ಜಡ್ಜ್ ಆರೋಪ ಓದುತ್ತಿದ್ದ ವೇಳೆ  ತಲೆ ಅಲ್ಲಾಡಿಸುತ್ತಾ ಆರೋಪ ಅಲ್ಲಗಳೆದ ಪ್ರಜ್ವಲ್  ಕಣ್ಣೀರು ಹಾಕಿದರು. 

ಪ್ರಜ್ವಲ್ ಜೈಲಿನಿಂದ ಬರೋದು ಯಾವಾಗ ಅನ್ನೋದನ್ನ ಹೇಳಿ ಒಟ್ಟಿಗೆ ಸೇರಿ ಸ್ವಾಗತಿಸೋಣ ಎಂದ ಸೂರಜ್ ರೇವಣ್ಣ!

ಆರೋಪ ಮುಕ್ತ ಅಪ್ಲೀಕೇಷನ್ ವಜಾಗೊಳಿಸಿ ಆರೋಪ ನಿಗದಿ ಮಾಡುವ ಮೂಲಕ ಟ್ರಯಲ್ ಆರಂಭಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದರು. ಕೆ.ಆರ್.ನಗರದ ಮಹಿಳೆ ನೀಡಿದ್ದ ಪ್ರಕರಣ ವಿಚಾರಣೆ ಏ.09ಕ್ಕೆ ಮುಂದೂಡಿಕೆ ಮಾಡಲಾಯ್ತು. ಇನ್ನು  ಹಾಸನ ಜಿಲ್ಲೆಯ ಮಾಜಿ ಜನಪ್ರತಿನಿಧಿಯೊಬ್ಬರು ನೀಡಿದ್ದ ಮತ್ತೊಂದು ಪ್ರಕರಣವನ್ನು ಖುಲಾಸೆ ಅರ್ಜಿ ವಿಚಾರಣೆಯನ್ನು ಏ.16ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣಗೆ ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ!

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ.ಆರ್.‌ನಗರ ಮಹಿಳೆಯನ್ನು ಅಪಹರಿಸಿದ ಆರೋಪ ಸಂಬಂಧ ಮಾಜಿ ಸಚಿವ ಎಚ್‌.ಡಿ.ರೇವಣ್ಣ , ಭವಾನಿ ರೇವಣ್ಣ ಕೂಡ ಕೇಸ್ ಎದುರಿಸುತ್ತಿದ್ದಾರೆ. ಆದರೆ ಬೇಲ್‌ ಮೇಲೆ ಹೊರಗಡೆ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!