ಗ್ರಾಪಂ ಮಟ್ಟದಲ್ಲಿ ಕೃಷಿ ಸಂಸ್ಕರಣೆ ಘಟಕ ಸ್ಥಾಪನೆಗೆ ಚಿಂತನೆ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Jun 25, 2023, 10:22 AM IST

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. 


ಬೆಂಗಳೂರು (ಜೂ.25): ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇ.8ರಷ್ಟು ಆಹಾರ ಧಾನ್ಯಗಳು ಪೋಲಾಗುತ್ತಿವೆ. ಶೇ.30ರಷ್ಟು ಹಣ್ಣು-ತರಕಾರಿಗಳು ಸಂಸ್ಕರಿಸದೇ ಹಾಳಾಗುತ್ತಿವೆ. ಆದರೆ ಹೊರ ದೇಶಗಳಲ್ಲಿ ಶೇ.60ರಷ್ಟುಆಹಾರ ಪದಾರ್ಥಗಳನ್ನು ಸಂಸ್ಕರಿಸುತ್ತಾರೆ. ರಾಜ್ಯ ಸರ್ಕಾರ 5 ಜಿಲ್ಲೆಯಲ್ಲಿ 5 ಕೋಟಿ ರು. ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದೆ. ಹೆಚ್ಚಿನ ಘಟಕಕ್ಕೆ ಬೇಡಿಕೆ ಬಂದರೆ ಪೂರೈಸಲಾಗುವುದು. ಜತೆಗೆ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಘಟಕ ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇಫ್ಕೋ ಸಂಸ್ಥೆಯಿಂದ ಡ್ರೋನ್‌ ಮೂಲಕ ನ್ಯಾನೋ ರಸಗೊಬ್ಬರಗಳ ಸಿಂಪಡಣೆ ತಂತ್ರಜ್ಞಾನಕ್ಕೆ ಅವರು ಚಾಲನೆ ನೀಡಿದರು.

Tap to resize

Latest Videos

ಕರಾವಳಿಯ 3 ಜಿಲ್ಲೆಗಳಲ್ಲಿ ಭಾರೀ ಮಳೆಯ ಆರೆಂಜ್‌ ಅಲರ್ಟ್‌

ಡ್ರೋನ್‌ನಲ್ಲಿ ನ್ಯಾನೋ ಗೊಬ್ಬರ ಸಿಂಪಡಣೆ ತಂತ್ರಜ್ಞಾನಕ್ಕೆ ಚಾಲನೆ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಇಫ್ಕೋ ಸಂಸ್ಥೆಯಿಂದ ಡ್ರೋನ್‌ ಮೂಲಕ ನ್ಯಾನೋ ರಸಗೊಬ್ಬರಗಳ ಸಿಂಪಡಣೆ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ರೈತರ ಬೆಳೆಗಳಿಗೆ ರಸಗೊಬ್ಬರ ಹಾಕುವ ವಿಷಯದಲ್ಲಿ ಇಫ್ಕೋ ಸಂಸ್ಥೆ ಹೊಸ ರೀತಿಯ ನ್ಯಾನೋ ರಸಗೊಬ್ಬರ ಆವಿಷ್ಕರಿಸಿ, ಡ್ರೋನ್‌ಗಳ ಮೂಲಕ ಸಿಂಪಡಿಸಲು ಹೊಸ ತಂತ್ರಜ್ಞಾನ ಅಳವಡಿಸಿರುವುದು ರೈತರ ಕೆಲಸವನ್ನು ಇನ್ನೂ ಹೆಚ್ಚು ಸರಳಗೊಳಿಸಿದೆ. ಹೊಸ ತಂತ್ರಜ್ಞಾನದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು’ ಎಂದರು.

ಇಫ್ಕೋ ಸಂಸ್ಥೆ ಮಾರಾಟ ವ್ಯವಸ್ಥಾಪಕ ಡಾ.ನಾರಾಯಣಸ್ವಾಮಿ ಮಾತನಾಡಿ, ರೈತರು ಹರಳು ರೂಪದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಬಳಸುವುದರಿಂದ ಮಣ್ಣಿನ ಸ್ವಾಸ್ಥ್ಯ ಹಾಳಾಗುತ್ತದೆ. ಸರ್ಕಾರಕ್ಕೂ 2 ಲಕ್ಷ ಕೋಟಿ ರುಪಾಯಿಗೂ ಅಧಿಕ ಸಬ್ಸಿಡಿಯ ಹೊರೆ ಬೀಳುತ್ತದೆ. ಈ ಆರ್ಥಿಕ ಹೊರೆಯನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಇಫ್ಕೋ ಸಂಸ್ಥೆಯ ವಿಜ್ಞಾನಿಗಳು ಆವಿಷ್ಕರಿಸಿರುವ ನ್ಯಾನೋ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ರೈತರು ಬಳಸಬೇಕು ಎಂದು ಕರೆ ನೀಡಿದರು.

ವೃದ್ಧರಿಗೆ ದೇಗುಲಗಳಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಶುರು: ಸಚಿವ ರಾಮಲಿಂಗಾರೆಡ್ಡಿ

ಕಾರ್ಯಕ್ರಮದಲ್ಲಿ ಐಎಎಸ್‌ ಅಧಿಕಾರಿ ಡಾ.ಅಶೋಕ್‌ ದಳವಾಯಿ, ಕೃಷಿ ಆಯುಕ್ತ ವೈ.ಎಸ್‌.ಪಾಟೀಲ್‌, ಬೆಂ.ಕೃಷಿ ವಿ.ವಿ ಉಪಕುಲಪತಿ ಡಾ.ಸುರೇಶ್‌, ಇಫ್ಕೋ ಮಾರಾಟ ವಿಭಾಗದ ನಿರ್ದೇಶಕ ಯೋಗೇಂದ್ರಕುಮಾರ್‌, ಕೃಷಿ ಇಲಾಖೆಯ ನಿರ್ದೇಶಕ ಡಾ.ಜಿ.ಟಿ.ಪುತ್ರ ಉಪಸ್ಥಿತರಿದ್ದರು.

click me!