ಅತಿಥಿ ಉಪನ್ಯಾಸಕರಿಗೆ ಬಿಗ್ ಶಾಕ್ ಕೊಟ್ಟ ಸಚಿವ ಅಶ್ವಥನಾರಾಯಣ

By Suvarna NewsFirst Published Oct 10, 2021, 6:00 PM IST
Highlights

* ಅತಿಥಿ ಉಪನ್ಯಾಸಕರಿಗೆ ಬಿಗ್ ಶಾಕ್ ಕೊಟ್ಟ ಸಚಿವ ಅಶ್ವಥನಾರಾಯಣ
* ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದ ಉನ್ನತ ಶಿಕ್ಷಣ ಸಚಿವ
* ಬೀದರ್‌ನಲ್ಲಿ ಸ್ಪಷ್ಟಪಡಿಸಿದ ಡಾ. ಅಶ್ವಥನಾರಾಯಣ

ಬೀದರ್, (ಅ.10): ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಇದಕ್ಕೆ ಕಾನೂನಿನಲ್ಲಿಯೂ ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ (Dr Ashwath narayan) ಸ್ಪಷ್ಟಪಡಿಸಿದ್ದಾರೆ.
 
ಬೀದರ್ (Bidar) ಇಂದು (ಅ.10) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ (Guest Lecturers)  ಖಾಯಂ ಕುರಿತು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಅವರ ಸೇವೆಯನ್ನು ಪ್ರತಿ ವರ್ಷದಂತೆ ಮುಂದುವರೆಸಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅನುಪಾತದಲ್ಲಿ ಉಪನ್ಯಾಸಕರ ನೇಮಕಾತಿ (Recruitment) ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಇನ್ನೂ ಅತಿಥಿ ಉಪನ್ಯಾಸಕರ ಸಂಭಾವನೆ (Salary( ಹೆಚ್ಚಿಸುವ ಕುರಿತಂತೆ ಸಿಎಂ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಸಧ್ಯದಲ್ಲೇ ಈ ಸಂಬಂಧ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ: ಅಧಿಸೂಚನೆ ಪ್ರಕಟ

ರಾಜ್ಯದಲ್ಲಿ ಹೊಸ ಉಪನ್ಯಾಸಕ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಅರ್ಹತೆವುಳ್ಳ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಇದೆ. ಮೆರಿಟ್ ಮತ್ತು ಮೀಸಲಾತಿ (Reservation) ಅನ್ವಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.

ಕಾನೂನು ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ಉಳಿದ ಎಲ್ಲ ರೀತಿಯ ಶಿಕ್ಷಣವನ್ನು (Education) ಒಳಗೊಂಡು ರಾಷ್ಟ್ರಿಯ ಶಿಕ್ಷಣ ನೀತಿ-2020ನ್ನು (National Education Policy 2020) ಜಾರಿಗೊಳಿಸಲಾಗುತ್ತಿದೆ. ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕ, ಹೊಸ ಹೊಸ ಕಾಲೇಜುಗಳ ಸ್ಥಾಪನೆಯಂತಹ ಹಲವಾರು ಪ್ರಕ್ರಿಯೆಗಳ ವೇಗಗೊಳಿಸುವ ಪ್ರಯತ್ನವನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವನ್ನು ಆರ್‌ಎಸ್‌ಎಸ್ (RSS) ನಡೆಸುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಹೇಳಿಕೆ ಸರಿಯಲ್ಲ. ಬಿಜೆಪಿಯಷ್ಟೇ ಅಲ್ಲ ಕಾಂಗ್ರೆಸ್, ಜೆಡಿಎಸ್‌ನ ಹಲವು ಶಾಸಕರು ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದಿದ್ದಾರೆ. ಸರ್ಕಾರದ ಆಡಳಿತ, ಪಾರದರ್ಶಕತೆ ವಿಷಯದ ಬಗ್ಗೆ ಅವರು ಮಾತನಾಡಲಿ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಪ್ರಚಾರಕ್ಕಾಗಿ ಹೊಸ ವಿಷಯ ಕೈಹಾಕುತ್ತಾರೆ. ಬರುವ ದಿನಗಳಲ್ಲಿ ಇದರಿಂದ ಪಕ್ಷಕ್ಕೆ ಇನ್ನಷ್ಟು ಮಾರಕ ಆಗಲಿದೆ. ಬಿಎಸ್‌ವೈ ನಮ್ಮ ಅಗ್ರಮಾನ್ಯ ನಾಯಕರು. ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೌರವ, ಅಭಿಮಾನ ಇದೆ. ಅವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಐಟಿ ದಾಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ಸಚಿವ ಡಾ. ಅಶ್ವಥನಾರಾಯಣ ಹೇಳಿದರು.

click me!