ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಮುರಿದು ಪ್ರಯಾಣಿಕರಿದ್ದ ಬಸ್ ಪಲ್ಟಿ ಆಗಿರುವ ದುರ್ಘಟನೆ ಸಮೀಪದ ಶಿವಳ್ಳಿ ಬಳಿ ನಡೆದಿದೆ. ಧಾರವಾಡದಿಂದ ಸಂಜೆ ಶಿವಳ್ಳಿ ಗ್ರಾಮಕ್ಕೆ ಹೊರಟಿದ್ದ ಬಸ್ ಏಕಾಏಕಿ ಸ್ಟೇರಿಂಗ್ ಕಟ್ ಆಗಿ ರಸ್ತೆ ಬದಿ ಪಲ್ಟಿ ಆಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ.
ಧಾರವಾಡ (ಜೂ.20): ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಮುರಿದು ಪ್ರಯಾಣಿಕರಿದ್ದ ಬಸ್ ಪಲ್ಟಿ ಆಗಿರುವ ದುರ್ಘಟನೆ ಸಮೀಪದ ಶಿವಳ್ಳಿ ಬಳಿ ನಡೆದಿದೆ. ಧಾರವಾಡದಿಂದ ಸಂಜೆ ಶಿವಳ್ಳಿ ಗ್ರಾಮಕ್ಕೆ ಹೊರಟಿದ್ದ ಬಸ್ ಏಕಾಏಕಿ ಸ್ಟೇರಿಂಗ್ ಕಟ್ ಆಗಿ ರಸ್ತೆ ಬದಿ ಪಲ್ಟಿ ಆಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ. ಹತ್ತು ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅನಾಹುತ ತಪ್ಪಿದಂತಾಗಿದೆ.
ಹಳೆಯ ಬಸ್ ಕಾರಣ ನಿರ್ವಹಣೆ ಇಲ್ಲದ ಕಾರಣ ಈ ರೀತಿ ಘಟನೆ ನಡೆದಿದೆ. ಗ್ರಾಮೀಣ ಭಾಗಕ್ಕೆ ತೀರಾ ಹಳೆಯ ಬಸ್ ಓಡಿಸುತ್ತಿದ್ದು ಆಗಾಗ ಈ ರೀತಿ ಘಟನೆ ನಡೆಯುತ್ತಿವೆ. ಗ್ರಾಮೀಣ ಭಾಗಕ್ಕೆ ಹೊಸ ಬಸ್ ಬಿಡಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಯಾಣಿಕರು ಆಗ್ರಹಿಸಿದರು. ಘಟನೆ ಕುರಿತು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಕೇಂದ್ರಕ್ಕೆ ಬಿಜೆಪಿ ನಾಯಕರು ರಾಜ್ಯದ ಪಾಲು ಕೇಳಲಿ: ಸಚಿವ ಮಧು ಬಂಗಾರಪ್ಪ
ತಂದೆ ಬೈದಿದ್ದಕ್ಕೆ ಉಚಿತ ಬಸ್ ಏರಿ ಅಕ್ಕತಂಗಿ ಧರ್ಮಸ್ಥಳಕ್ಕೆ!: ಚಾಕೋಲೆಟ್ ತೆಗೆದುಕೊಳ್ಳಲು ಹಣ ಕೇಳಿದ್ದಕ್ಕೆ ಅಪ್ಪ ಗದರಿದರು ಎಂಬ ಕಾರಣಕ್ಕೆ ಹೆದರಿ ಉಚಿತ ಬಸ್ ಸೌಲಭ್ಯದ ‘ಶಕ್ತಿ ಯೋಜನೆ’ ಲಾಭ ಪಡೆದು ಧರ್ಮಸ್ಥಳಕ್ಕೆ ತೆರಳಿದ್ದ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಕೋಣನಕುಂಟೆ ಠಾಣೆ ಪೊಲೀಸರು ಪತ್ತೆಹಚ್ಚಿ ಮರಳಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ. ಗೊಟ್ಟೆಗೆರೆಯ ಬಸವನಪುರ ನಿವಾಸಿ ರಮೇಶ್ ಎಂಬುವವರ ಪುತ್ರಿಯರಾದ ರಿಷಿ (13) ಮತ್ತು ಖುಷಿ (10) (ತಂದೆ ಹಾಗೂ ಪುತ್ರಿಯರ ಹೆಸರು ಬದಲಿಸಲಾಗಿದೆ).
ಶನಿವಾರ ಬನ್ನೇರುಘಟ್ಟ ರಸ್ತೆಯ ಡಿ-ಮಾರ್ಚ್ ಬಳಿಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆ ತಂದು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಕೋಲೆಟ್ ವಿಚಾರವಾಗಿ ತಂದೆ ಗದರಿದ್ದರಿಂದ ಭಯವಾಗಿತ್ತು. ಹೀಗಾಗಿ ಮನೆಗೆ ಹೋಗಲಿಲ್ಲ. ಉಚಿತ ಬಸ್ ಸೌಲಭ್ಯದ ಬಗ್ಗೆ ಮಾಹಿತಿ ಇದ್ದಿದ್ದರಿಂದ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾಗಿ ಬಾಲಕಿಯರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
ಬಾಗಿಲಿಲ್ಲದ ಬಸ್‌ನಿಂದ ಬಿದ್ದು ವ್ಯಕ್ತಿ ಸಾವು: ಬಾಗಿಲಿಲ್ಲದ ಬಸ್‌ನ ಪುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದಾಗ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿಯ ಹೇಮಾವತಿ ನಾಲೆ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಅರಕನಕೆರೆ ಗ್ರಾಮದ ನಿವಾಸಿ ಚಲುವೇಗೌಡ(65) ಮೃತ ವ್ಯಕ್ತಿ. ಜಕ್ಕನಹಳ್ಳಿ ಸರ್ಕಲ್‌ನಲ್ಲಿ ನಡೆಯುತ್ತಿದ್ದ ಸೋಮವಾರದ ಸಂತೆಗೆ ಬಂದಿದ್ದ ಚಲುವೇಗೌಡ, ಸಂತೆ ಮುಗಿಸಿ ಬಸ್‌ನಲ್ಲಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದರು.
ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಬಿಜೆಪಿ ಜಾಯಮಾನ: ಸಚಿವ ಜಾರ್ಜ್
ಮಹಿಳೆಯರಿಗೆ ಉಚಿತ ಬಸ್ ಯೋಜನೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬಸ್‌ನಲ್ಲಿ ವಿಪರೀತ ರಶ್ ಇತ್ತು. ಹೀಗಾಗಿ, ಚಲುವೇಗೌಡ ಅವರು ಬಸ್‌ನ ಒಳಗಡೆ ಜಾಗವಿಲ್ಲದೆ ಬಾಗಿಲ ಬಳಿ ಪುಟ್‌ಬೋಡ್‌ನಲ್ಲಿ ನಿಂತಿದ್ದರು. ಬಸ್‌ಗೆ ಬಾಗಿಲು ಇರಲಿಲ್ಲ. ಬಸ್, ಜಕ್ಕನಹಳ್ಳಿಯ ಹೇಮಾವತಿ ನಾಲೆ ಬಳಿ ಬರುತ್ತಿದ್ದಂತೆ ರಸ್ತೆಯಲ್ಲಿದ್ದ ಗುಂಡಿಗೆ ಬಸ್‌ನ ಚಕ್ರ ಇಳಿಯಿತು. ಈ ವೇಳೆ, ಆಯತಪ್ಪಿ ಚಲುವೇಗೌಡ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಪ್ರತಿಭಟನೆ ನಡೆಸಿದರು. ಸಾರಿಗೆ ಅಧಿಕಾರಿಗಳು 2.50 ಲಕ್ಷ ಪರಿಹಾರ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.