ರಾಜ್ಯದ ಶ್ರೀಮಂತ ಬೆಂವಿವಿಗೆ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!

Published : Mar 12, 2025, 10:23 AM ISTUpdated : Mar 12, 2025, 10:27 AM IST
ರಾಜ್ಯದ ಶ್ರೀಮಂತ ಬೆಂವಿವಿಗೆ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆ ಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು.

ಲಿಂಗರಾಜು ಕೋರಾ

ಬೆಂಗಳೂರು (ಮಾ.12): ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆ ಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು. ಆಂತರಿಕ ಆದಾಯ ಕುಸಿತ, ವಿವಿಯ ಮೂಲನಿಧಿ ವೃದ್ಧಿಯಾಗದ ಹಿನ್ನೆಲೆಯಲ್ಲಿ ತನ್ನ ನಿವೃತ್ತ ನೌಕರರ ಪಿಂಚಣಿಗೆ ಸರ್ಕಾರದ ಮುಂದೆ ಕೈ ಚಾಚುವ ಸ್ಥಿತಿ ತಲುಪಿದೆ. ವಿವಿಗಳ ವಿಭಜನೆಯಿಂದಾಗಿ ಆಂತರಿಕ ಆದಾಯ ತೀವ್ರ ಕುಸಿತಗೊಂಡು ಪಿಂಚಣಿಗೂ ದುಡ್ಡಿಲ್ಲದೆ ಆರ್ಥಿಕವಾಗಿ ದುಸ್ಥಿತಿ ಎದುರಿಸುತ್ತಿರುವ ರಾಜ್ಯದ ಅತಿ ಹಳೆಯ ವಿವಿಗಳಾದ ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿ ಮತ್ತು ಮಂಗಳೂರು ವಿವಿಗಳ ಸಾಲಿಗೆ ಈಗ ಬೆಂಗಳೂರು ವಿವಿಯೂ ಸೇರ್ಪಡೆಯಾಗುತ್ತಿದೆ. 

ಹಿಂದಿನಿಂದ ವಿಶ್ವವಿದ್ಯಾಲಯದಲ್ಲಿ ಬೆಂಗಳೂರು ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿಗಳಾಗಿದ್ದ ಒಂದಷ್ಟು ದೂರದೃಷ್ಟಿಯುಳ್ಳ ಆಡಳಿತಗಾರರು ಭವಿಷ್ಯದ ದೃಷ್ಟಿಯಿಂದ ಪ್ರತೀ ವರ್ಷ ವಿವಿಯ ಆದಾಯದ ಒಂದಷ್ಟು ಮೊತ್ತವನ್ನು ಮೂಲ ನಿಧಿಯಾಗಿ ಸ್ಥಾಪಿಸಿದ್ದರು. ಅದು ಎಂಟು ವರ್ಷಗಳ ಹಿಂದೆ 700 ಕೋಟಿ ರು. ದಾಟಿತ್ತು. ಕಷ್ಟದ ಸ್ಥಿತಿಯಲ್ಲೂ ಈ ಹಣ ತೆಗೆದಿರಲಿಲ್ಲ. ಇದರಿಂದ ಬರುತ್ತಿದ್ದ ಬಡ್ಡಿ ಮೊತ್ತದಿಂದ ನಿವೃತ್ತ ನೌಕರರ ಪಿಂಚಣಿ, ಇನ್ನಿತರೆ ಸಿಬ್ಬಂದಿ ವೇತನ ಬಳಕೆಯಾಗುತ್ತಿತ್ತು. ಇಲ್ಲದೆ ಹೋಗಿದ್ದರೆ ಬೆಂಗಳೂರು ವಿವಿ ಮೂರು ಹೋಳಾದ ದಿನದಿಂದಲೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿತ್ತು ಎನ್ನುತ್ತಾರೆ ಇಲ್ಲಿ ಆಡಳಿತ ನಡೆಸಿದ ಕೆಲ ವಿಶ್ರಾಂತ ಕುಲಪತಿಗಳು. 

ರಾಜ್ಯದ ನೂತನ ವಿಶ್ವವಿದ್ಯಾಲಯಗಳ ಸಂಕಷ್ಟ ಸಂಸತ್ತಲ್ಲಿ ಬಿಚ್ಚಿಟ್ಟ ದೇವೇಗೌಡ

ಪ್ರೊ.ಬಿ.ತಿಮ್ಮೇಗೌಡ ಮತ್ತು ಪ್ರೊ.ಎನ್. ನಿಂಗೇಗೌಡ ಕ್ರಮವಾಗಿ ಅವಿಭಜಿತ ಬೆಂಗಳೂರು ವಿವಿಯ ಕೊನೆಯ ಕುಲಪತಿ ಮತ್ತು ಕುಲಸಚಿವರು. ಅಲ್ಲಿಯವರೆಗೂ ಉತ್ತಮ ಸ್ಥಿತಿಯಲ್ಲೇ ಇದ್ದ ವಿವಿಯ ಆರ್ಥಿಕ ಸ್ಥಿತಿ ವಿಭಜನೆ ಬಳಿಕ ಕುಸಿಯಿತು. ಈ ಮಧ್ಯೆ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕುಲಪತಿಯಾ ಗಿದ್ದವರು ಉನ್ನತ ಶಿಕ್ಷಣ ಇಲಾಖೆ ಸೂಚನೆಯಂತೆ ಮೂಲ ನಿಧಿಯ ಸುಮಾರು 25 ಕೋಟಿ ರು. ಅನುದಾನ ಹೊರತೆಗೆದು ಬೆಂಗಳೂರು ವಿವಿಯಿಂದ ಬೇರ್ಪಡಿಸಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿ ಸಲು ಮುಂದಾಗಿದ್ದ ಯುವಿಸಿಸಿಗೆ ನೀಡಿದರು. ಇದು ವಿವಿಗೆ ದೊಡ್ಡ ಹೊಡೆತ ನೀಡಿತು. 

ನಂತರ ಮೂಲ ನಿಧಿಗೆ ಹೊಸ ಹಣವೂ ಸೇರ್ಪಡೆಯಾಗಲಿಲ್ಲ. ಬಡ್ಡಿಯ ಮೊತ್ತವೂ ಕಡಿಮೆಯಾಗಿ ಪಿಂಚಣಿಗೆ ಸರ್ಕಾರವನ್ನು ಬೇಡುವಂತಾಗಿದೆ ಎನ್ನುತ್ತಾರೆ ವಿವಿಯ ನಿವೃತ್ತ ಹಣಕಾಸು ಅಧಿಕಾರಿಯೊಬ್ಬರು. ಪ್ರಸಕ್ತ ಆದಾಯ, ನೌಕರರಿಗೆ ನೀಡುವ ವೇತನ ಎಲ್ಲವೂ ಸೇರಿದರೂ ಒಟ್ಟಾರೆ ಸುಮಾರು 250 ಕೋಟಿರು.ಗಳಷ್ಟಿದೆ. ಆದರೆ, ಇದರಲ್ಲಿ ವಿವಿಯ ಆಂತರಿಕ ಕಾಯಂ ಸರ್ಕಾರ ಬಹುಪಾಲು 200 ಕೋಟಿ ರು.ಗಳಿಗೂ ಹೆಚ್ಚು ಕಾಯಂ ನೌಕರರ ವೇತನ, ನಿವೃತ್ತಿ ನೌಕರರ ಪಿಂಚಣಿಗೇ ಹೋಗುತ್ತದೆ. ಇನ್ನುಳಿದ ಹಣ ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ, ವಿವಿ ಹಾಸ್ಟೆಲ್ ನಿರ್ವಹಣೆ, ರಸ್ತೆ, ಕಟ್ಟಡ ನಿರ್ವಹಣೆ, ಸಣ್ಣ ಪುಟ್ಟ ದುರಸ್ತಿ ಸೇರಿ ಒಟ್ಟಾರೆ ಕ್ಯಾಂಪಸ್ ನಿರ್ವಹಣೆಗೆ ಬಳಕೆಯಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಕೊರತೆ ಬಜೆಟ್ ಮಂಡಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಕೊರತೆ ಬಜೆಟ್ ಮೊತ್ತ ಹೆಚ್ಚಾಗುತ್ತಾ ಬಂದಿದೆ. 2023-24ನೇ ಸಾಲಿನಲ್ಲಿ 48.34 ಕೋಟಿ ರು. ಇದ್ದ ಕೊರತೆ ಬಜೆಟ್, 2024-25ನೇ ಸಾಲಿಗೆ 86.32 ಕೋಟಿ ರು.ಗೆ ತಲುಪಿದೆ. ಈ ಅವಧಿಯಲ್ಲಿ ವಿವಿಗೆ 35 ಕೋಟಿ ರು. ಅನ್ನು ಸರ್ಕಾರ ಪಿಂಚಣಿಗಾಗಿ ನೀಡಿದೆ. ಈ ವರ್ಷ ಇನ್ನೂ ಹೆಚ್ಚಿನ ಅನುದಾನ ಕೇಳಲಾಗಿದೆ. ಪ್ರಸ್ತುತ 1600 ರಷ್ಟಿರುವ ನಿವೃತ್ತರ ಸಂಖ್ಯೆ ಕೆಲ ವರ್ಷಗಳಲ್ಲಿ ಇನ್ನೂ ನೂರು ಸಂಖ್ಯೆಯಲ್ಲಿ ಹೆಚ್ಚಲಿದೆ. ಅದಕ್ಕೆ ಅನುಗುಣವಾಗಿ ಸರ್ಕಾರ ಹೆಚ್ಚಿನ ನೆರವು ನೀಡದೆ ಹೋದರೆ ಈಗ ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿಯಲ್ಲಿನ ಆರ್ಥಿಕ ದುಸ್ಥಿತಿ ಬೆಂಗಳೂರು ವಿವಿಗೂ ತಟ್ಟುವ ಕಾಲ ದೂರವಿಲ್ಲ ಎನ್ನುತ್ತಾರೆ ಹಾಲಿ ಅಧಿಕಾರಿಗಳು. 

ವಿಭಜನೆ ಬಳಿಕ ಕುಸಿದ ಬೆಂ.ವಿವಿ ಆದಾಯ: 2015ರಲ್ಲಿ ಬೆಂಗಳೂರು ವಿವಿ ವಿಭಜನೆಯ ಅಧಿ ಸೂಚನೆ ಹೊರಡಿಸಲಾಯಿತು. 2017ರಲ್ಲಿ ಅಧಿಕೃತ ವಾಗಿ 'ಬೆಂಗಳೂರು ವಿಶ್ವವಿದ್ಯಾಲಯ', 'ಬೆಂಗಳೂರು ನಗರ ವಿಶ್ವವಿದ್ಯಾಲಯ' ಮತ್ತು 'ಬೆಂಗಳೂರು ಉತ್ತರ ವಿಶ್ವವಿದ್ಯಾಲಯ' ಎಂದು ನಾಮಕರಣಗೊಂಡು ಕಾರ್ಯಾರಂಭ ಮಾಡಿದವು. ಬೆಂಗಳೂರು ವಿವಿಯನ್ನು ಅವೈಜ್ಞಾನಿಕವಾಗಿ ವಿಭಜನೆ ಮಾಡಿದ್ದರಿಂದ800 ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರೂ ವಿವಿಗೆ ಹಂಚಿಹೋದರು. ವಿವಿಗಳಿಗೆ ಪ್ರಮುಖ ಆದಾಯ ಮೂಲವೇ ಖಾಸಗಿ ಕಾಲೇಜು ಗಳ ಸಂಯೋಜನಾ ಶುಲ್ಕ. ಆದರೆ, ಮೂಲ ಬೆಂಗಳೂರು ವಿವಿಗೆ ಬಂದ 300ಕ್ಕೂ ಕಡಿಮೆ ಕಾಲೇಜುಗಳಲ್ಲಿ ಹೆಚ್ಚಿನವು ಸರ್ಕಾರಿ ಕಾಲೇಜುಗಳಾಗಿದ್ದವು.

ನಿವೃತ್ತಿ ಅಂಚಿನ ನೌಕರರೆಲ್ಲರೂ ಮೂಲ ವಿವಿಯಲ್ಲೇ ಉಳಿದರು. ಸಂಯೋಜನಾ ಶುಲ್ಕ ಗಣನೀಯವಾಗಿ ಇಳಿಯಿತು, ಹೊರೆ ಹೆಚ್ಚಾಯಿತು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಯಾಂಪಸ್‌ನಲ್ಲಿ ಎಲ್ಲಾ ವಿಭಾಗಗಳಲ್ಲಿ ಸುಮಾರು 7,000, ಇತರೆ ಸಂಯೋಜಿತ ಕಾಲೇಜುಗಳಲ್ಲಿ ಒಟ್ಟಾರೆ 1.30 ಲಕ್ಷ ಇದ್ದಾರೆ. ಕಾಲೇಜು, ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಸಂಯೋಜನಾ ಶುಲ್ಕ, ಪರೀಕ್ಷೆ, ಪ್ರವೇಶ ಶುಲ್ಕ ಸಂಗ್ರಹವೂ ಕುಸಿಯಿತು. ಹತ್ತು ವರ್ಷಗಳ ಹಿಂದೆ ಮೂಲ ವಿವಿಯಲ್ಲಿ 450 ಕೋಟಿ ರು.ಗಳಿಗೂ ಹೆಚ್ಚಿನ ಬಜೆಟ್ ಮಂಡಿಸುತ್ತಿದ್ದ ವಿವಿ ಈಗ ವಾರ್ಷಿಕ 250 ಕೋಟಿ ರು. ಬಜೆಟ್‌ಗೆ ಇಳಿದಿದೆ. ಮತ್ತೊಂದೆಡೆ ಯುಜಿಸಿ ಅನುದಾನ, ಸರ್ಕಾರದ ಬ್ಲಾಕ್ ಗ್ಯಾಂಟ್ ಯಾವುದೂ ಇಲ್ಲ. ಇದರಿಂದ ವಿಭಜನೆಯ ಬಳಿಕ ವಿವಿಯ ಆಂತರಿಕ ಆದಾಯ ಅರ್ಧಕ್ಕೂ ಹೆಚ್ಚು ಕುಸಿದಿದೆ.

ಸ್ಮಗ್ಲರ್‌ಗೆ ಪ್ರೋಟೋಕೋಲ್‌ ಸಿಕ್ಕಿದ್ದು ಹೇಗೆ?: ನಟಿ ರನ್ಯಾ ರಾವ್ ತಂದೆಗೂ ತನಿಖೆ ತೂಗುಕತ್ತಿ

ವಿವಿ ಇತಿಹಾಸ-ಸಾಧನೆ: 1964 ನವೆಂಬರ್ 28ರಂದು ಆರಂಭವಾದ ಬೆಂ.ವಿವಿ ಆರಂಭದಲ್ಲಿ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿತ್ತು. ನಂತರ 1100 ಎಕರೆಗೂ ಹೆಚ್ಚು ವಿಸ್ತೀರ್ಣದ ಜ್ಞಾನಭಾರತಿ ಕ್ಯಾಂಪಸ್‌ ಸ್ಥಳಾಂತರ ಆಯಿತು. ಪ್ರೊ.ಎಚ್.ನರಸಿಂ ಹಯ್ಯ, ಜ್ಞಾನಪೀಠ ಪುರಸ್ಕೃತ ಸಾಹಿತಿ ವಿ.ಕೃ. ಗೋಕಾಕ್, ಪ್ರೊ.ಸಿದ್ದಪ್ಪ, ಪ್ರೊ.ಎಂ.ಎಸ್. ತಿಮ್ಮಪ್ಪ,ಡಾ.ಪ್ರಭುದೇವ್,ಪ್ರೊ.ತಿಮ್ಮೇಗೌಡ, ಪ್ರೊ.ಕೆ.ಆರ್.ವೇಣುಗೋಪಾಲ್ ಸೇರಿ ಅನೇ ಕರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಪ್ರೊ.ಎಸ್.ಎಂ.ಜಯಕರ ಆ ಸ್ಥಾನದಲ್ಲಿದ್ದು, ನ್ಯಾಕ್‌ನಿಂದ ಎ++ ಶ್ರೇ ಯಾಂಕ ಪಡೆದಿದೆ. ಬಹುಶಿಸ್ತೀಯ ಕೋರ್ಸು ಗಳ ಅಧ್ಯಯನದಲ್ಲಿ ಮುಂಚೂ ಣಿಯಲ್ಲಿದೆ. ಕೇಂದ್ರ ಬಿಡುಗಡೆ ಮಾಡಿರುವ ದೇಶದ ಟಾಪ್ 150 ವಿವಿಗಳಲ್ಲಿ 24ನೇ ಸ್ಥಾನದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌