ಮಂಡ್ಯ ಬಸ್ ದುರಂತಕ್ಕೂ ಮೊದಲು ಕೇಳಿ ಬಂದಿತ್ತು ಆ ಶಬ್ಧ!

By Web DeskFirst Published Nov 25, 2018, 11:04 AM IST
Highlights

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿ 30 ಮಂದಿ ಮೃತಪಟ್ಟದುರಂತಕ್ಕೆ ಚಾಲಕನ ಅಜಾಗರೂಕತೆಯ ಚಾಲನೆ, ಬಸ್‌ನ ಸ್ಟೇರಿಂಗ್‌ ರಾಡ್‌ ತುಂಡಾಗಿದ್ದೇ ಕಾರಣವೇ?

ಮಂಡ್ಯ[ನ.25]: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿ 30 ಮಂದಿ ಮೃತಪಟ್ಟದುರಂತಕ್ಕೆ ಚಾಲಕನ ಅಜಾಗರೂಕತೆಯ ಚಾಲನೆ, ಬಸ್‌ನ ಸ್ಟೇರಿಂಗ್‌ ರಾಡ್‌ ತುಂಡಾಗಿದ್ದೇ ಕಾರಣವೇ?

ಹೌದೆನ್ನುತ್ತಾರೆ ಈ ದುರಂತದಲ್ಲಿ ಜೀವ ಉಳಿಸಿಕೊಂಡವರು ಮತ್ತು ಸ್ಥಳೀಯರು. ಇದೇ ವೇಳೆ, ಈ ಬಸ್‌ ಹದಿನೇಳು ವರ್ಷಗಳಷ್ಟುಹಳೆಯದಾಗಿತ್ತು, ಗುಜರಿಗೆ ಹಾಕಬೇಕಾದ ಈ ಬಸ್‌ನ ನಿರ್ವಹಣೆಯೂ ಸರಿಯಾಗಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಮುಳುಗಿದ ಬಸ್ ನಿಂದ ಪಾರಾದವನ ಸಾಹಸಗಾಥೆ

ಶಬ್ದ ಬರುತ್ತಿತ್ತು?:

ಕನಗನಮರಡಿ ಗ್ರಾಮದಿಂದ ಹೊರಟ ಬಸ್‌ ಕುರಹಟ್ಟಿಗೇಟ್‌ ಬಳಿಗೆ ಆಗಮಿಸುತ್ತಿದ್ದಂತೆ ಸ್ಟೇರಿಂಗ್‌ ರಾಡ್‌ ತುಂಡಾಗಿ ಶಬ್ದ ಬರಲಾರಂಭಿಸಿತ್ತು. ಇದನ್ನು ಗಮನಿಸಿದ ಚಾಲಕ ಬಸ್‌ ಅನ್ನು ತಕ್ಷಣ ನಿಲ್ಲಿಸಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಉಜ್ಜಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿತ್ತು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

ಅಲ್ಲದೆ ಹೇಳಿ ಕೇಳಿ ಬಸ್‌ ಸಾಗುತ್ತಿದ್ದ ಮಾರ್ಗವೂ ಕಿರಿದಾಗಿತ್ತು. ಗುಂಡಿಗಳಿಂದಾಗಿ ಸಂಪೂರ್ಣ ಅದ್ವಾನಗೊಂಡಿತ್ತು. ಇಂಥ ರಸ್ತೆಯಲ್ಲಿ ಈಗಾಗಲೇ 8 ಮಂದಿಯಿಂದ ಹಸ್ತಾಂತರಗೊಂಡು ಪ್ರಸ್ತುತ 9ನೇ ಮಾಲೀಕರ ಕೈಗೆ ಬಂದಿರುವ ಈ ಡಕೋಟಾ ಬಸ್‌ ವೇಗವಾಗಿ ಸಂಚರಿಸಿತ್ತು. ಇದು ಕೂಡ ದುರಂತಕ್ಕೆ ಕಾರಣಗಳಲ್ಲೊಂದಾಗಿದೆ. ಸಾಮಾನ್ಯವಾಗಿ ಯಾವುದೇ ಬಸ್‌ನ ಆಯಸ್ಸು, ಸಾರಿಗೆ ಇಲಾಖೆ ನಿಯಮಗಳ ಪ್ರಕಾರ ಗರಿಷ್ಠ ಎಂದರೆ 15 ವರ್ಷ. ಆದರೆ, ಈ ಬಸ್‌ನ ಆಯಸ್ಸು ಮಂಡ್ಯ ಸಾರಿಗೆ ಇಲಾಖೆಯ ದಾಖಲೆಗಳು ಹೇಳುವಂತೆ ಹದಿನೇಳೂವರೆ ವರ್ಷ. ಹೀಗೆ ಆಯಸ್ಸು ಮೀರಿದ ಬಸ್‌ ಸಂಪೂರ್ಣ ಡಕೋಟಾ ಆಗಿತ್ತು. ಇದೇ ಕಾರಣದಿಂದ ಚಾಲಕ ಬಸ್‌ ಅನ್ನು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ತನಿಖೆಯ ಬಳಿಕವೇ ಅವಘಡಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬರಬೇಕಿದೆ.

click me!