
ಬೆಂಗಳೂರು(ನ.27): ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಟಾಲಿವುಡ್, ಕಾಲಿವುಡ್ ನಿಂದಲೂ ನಟ ನಟಿಯರು ಆಗಮಿಸಿ ಕಂಬನಿ ಮಿಡಿದರು.
ಆದರೆ ನಟಿ, ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಮಾತ್ರ ಅಂತಿಮ ದರ್ಶನಕ್ಕೆ ಬಾರದೇ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಮ್ಯಾ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿದೆ. ಅಲ್ಲದೇ ಮಂಡ್ಯದಾದ್ಯಂತ ರಮ್ಯಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಮ್ಯಾ ಅಂಬಿ ಅಂತ್ಯಕ್ರಿಯೆಗೆ ಯಾಕೆ ಬರಲಿಲ್ಲ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಒಂದು ತಿಂಗಳ ಹಿಂದೆ (ಅಕ್ಟೋಬರ್ 19) ರಮ್ಯಾ ಇನ್‍ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಅವರ ಕಾಲಿನಲ್ಲಿ ದುರ್ಮಾಂಸದ ಬೃಹತ್ ಗೆಡ್ಡೆ ಬೆಳೆದಿದ್ದು, ರಮ್ಯಾ ವರಿಗೆ ಕ್ಯಾನ್ಸರ್ ಇದೆ ಎಂಬೆಲ್ಲಾ ಗಾಳಿ ಸುದ್ದಿಗಳು ಹರಿದಾಡುತ್ತಿವೆ.
ರಮ್ಯಾ ಅವರಿಗೆ ಏನಾಗಿದೆ?:
ಇದಕ್ಕೆ ಸಂಬಂಧಿಸಿದಂತೆ ಕಾಲಿಗೆ ಬ್ಯಾಂಡೇಜ್ ಸುತ್ತಿರುವ ಫೋಟೋ ಒಂದನ್ನು ರಮ್ಯಾ ಹಂಚಿಕೊಂಡಿದ್ದರು. ಆಸ್ಟಿಯೋಕ್ಲ್ಯಾಟೋಮಾ ಎಂಬ ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ರಮ್ಯಾ, ಇದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಆಸ್ಟಿಯೋಕ್ಲ್ಯಾಟೋಮಾ?:
ಸ್ನಾಯು ರಜ್ಜುವಿನ ಕೋಶಕ್ಕೆ ಸಂಬಂಧಿಸಿದ ಗೆಡ್ಡೆ ಇದಾಗಿದ್ದು ಹತ್ತು ಲಕ್ಷ ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಈ ರೀತಿಯ ಸಮಸ್ಯೆ ಬರುವ ಸಾಧ್ಯತೆ ಇದೆ. ಇದು ಯಾವುದೇ ಕೇಡುಂಟು ಮಾಡದಿದ್ದರೂ ಮಾರಣಾಂತಿಕವಾಗಿ ಬದಲಾಗುವ ಸಾಧ್ಯತೆ ಇದೆ. ಅಲ್ಲದೇ ವಿರಳ ಸಂದರ್ಭದಲ್ಲಿ ಇದು ಕ್ಯಾನ್ಸರ್ ಆಗಿಯೂ ಬದಲಾಗುವ ಸಾಧ್ಯೆತೆ ಹೆಚ್ಚು.
"
ಅಂಬಿ ಅಂತ್ಯಕ್ರೀಯೆಗೆ ಬರಲು ಕಾರಣ ಏನು?:
ಇನ್ನು ರಮ್ಯಾ ಇನ್‍ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದ್ದು, ರಮ್ಯಾ ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಡೆಯಲು ಆಗುತ್ತಿಲ್ಲ ಎನ್ನಲಾಗಿದೆ.
ಇದೇ ಕಾರಣಕ್ಕೆ ನಟಿ ರಮ್ಯಾ ಕಲಿಯುಗದ ಕರ್ಣ ಅಂಬರೀಷ್ ಅವರ ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂಬಿ ಅಂತಿಮ ದರ್ಶನ ಪಡೆಯದ ರಮ್ಯಾ ಮಂಡ್ಯದ ಮಗಳು ಎನಿಸಿಕೊಳ್ಳಲು ಲಾಯಕ್ಕಿಲ್ಲ ಎಂಬ ಕೋಪದ ಮಾತುಗಳ ಮಧ್ಯೆಯೇ ರಮ್ಯಾ ಬರದಿರಲು ಇದೂ ಒಂದು ಸಕಾರಣ ಇರಬಹುದೇ ಎಂಬ ಚರ್ಚೆಗಳೂ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ