
ಹಾಸನ : ಕೆಸರಿನಲ್ಲಿ ಸಿಲುಕಿಕೊಂಡು ಕಾಲಿಗೆ ಏಟಾಗಿರುವ ಅಮ್ಮ ಆನೆಯೊಂದು ಮೇಲೇಳಲಾಗದೇ ಒದ್ದಾಡುತ್ತಿದ್ದರೆ, ಅದರ ಅಮ್ಮನನ್ನು ಬಿಟ್ಟು ಹೋಗುತ್ತಲೇ ಇಲ್ಲ ಮರಿ. ಆನೆ ಹಾಗೂ ಮರಿಯ ತೊಳಲಾಟವನ್ನು ನೋಡಿದರೆ ಎಂಥವರ ಕಣ್ಣಿನಲ್ಲಿಯೂ ನೀರು ಬರುತ್ತದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಸರಿನಲ್ಲಿ ಆನೆ ಒದ್ದಾಡುತ್ತಿದ್ದರೆ, ಮರಿಯಾನೆ ಅಮ್ಮನ ಸಂಕಷ್ಟ ನೋಡಲಾಗದೇ ರೋಧಿಸುತ್ತಿದೆ. ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ನೋವಿನಲ್ಲಿ ಒದ್ದಾಡುತ್ತಿರುವ ಆನೆಗೆ ಆಹಾರ ಸೇವಿಸಲೂ ಕಷ್ಟವಾಗುತ್ತಿದ್ದು, ಸಂಪೂರ್ಣವಾಗಿ ನಿತ್ರಾಣವಾಗಿದೆ. ಕಳೆದ ಎರಡು ದಿನದಿಂದಲೂ ಆನೆ ಕೆಸರಿನಲ್ಲಿಯೇ ಬಿದ್ದಿದೆ. ಸಾಕಾನೆಗಳ ನೆರವಿನಿಂದ ಆನೆಯನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅಲ್ಲದೇ ಕೆಸರಿನಿಂದ ಮೇಲೆತ್ತಿದ ಬಳಿಕ ಆನೆಗೆ ಸೂಕ್ತ ಚಿಕಿತ್ಸೆ ನೀಡಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ