ಕಾಡುಗಳ್ಳ ವೀರಪ್ಪನ್ ಜೊತೆಗೆ ಮಾತನಾಡಿದ್ದ ಏಕೈಕ ಕನ್ನಡದ ಸಿಎಂ ಎಸ್.ಎಂ. ಕೃಷ್ಣ!

By Sathish Kumar KH  |  First Published Dec 10, 2024, 6:17 PM IST

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಡುಗಳ್ಳ ವೀರಪ್ಪನ್ ಜೊತೆ ಮಾತನಾಡಿದ ಏಕೈಕ ಗಟ್ಟಿಗ. ಡಾ. ರಾಜ್‌ಕುಮಾರ್ ಅವರ ಬಿಡುಗಡೆಗಾಗಿ ವೀರಪ್ಪನ್ ಜೊತೆ ಸ್ಯಾಟಲೈಟ್ ಫೋನ್ ಮೂಲಕ ಮಾತುಕತೆ ನಡೆಸಿದ್ದರು.


ಚಾಮರಾಜನಗರ (ಡಿ.10): ಕರ್ನಾಟಕ, ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗೆ ಮೋಸ್ಟ್ ವಾಂಟೆಡ್ ಆಗಿದ್ದ ಕಾಡುಗಳ್ಳ ವೀರಪ್ಪನ್ ಅವರೊಂದಿಗೆ ಮಾತನಾಡಿದ ಏಕೈಕ ಗಟ್ಟಿ ಗುಂಡಿಗೆಯ ವೀರ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಾಗಿದ್ದಾರೆ. ಸ್ಯಾಟಲೈಟ್‌ ಫೋನ್ ಮೂಲಕ ವೀರಪ್ಪನ್ ಜೊತೆಗೆ ಮಾತನಾಡಿ ವರನಟ ಡಾ. ರಾಜ್ ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ಖಡಕ್ ಸೂಚನೆಯನ್ನು ರವಾನಿಸಿದ್ದರು.

ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ಕನ್ನಡದ ವರನಟ ಡಾ.ರಾಜ್ ಕುಮಾರ್ ಕುಮಾರ್ ಅವರನ್ನು ಅಪಹರಣ ಮಾಡಿತ್ತು. ಇದಾದ ನಂತರ ರಾಜ್ ಕುಮಾರ್ ಅವರನ್ನು ಕಾಡಿನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು ಹಲವು ಬೇಡಿಕೆಗಳನ್ನು ರಾಜ್ಯದ ಮುದಿಟ್ಟಿದ್ದನು. ಈ ವೇಳೆ ಸ್ವತ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೇ ರಾಜ್ ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ವೀರಪ್ಪನ್ ಜೊತೆ ಸೆಟಲೈಟ್‌ ಫೋನ್‌ನಲ್ಲಿ  ಮಾತನಾಡಿದ್ದರು.

Tap to resize

Latest Videos

ಹೌದು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ರಾಜ್ ಅಪಹರಣ ಪ್ರಹಸನ ಕೃಷ್ಣ ಅವರಿಗೆ 108 ದಿನಗಳ ಕಾಲ ಕಾಡಿತ್ತು. ದೊಡ್ಡ ಗಾಜನೂರಿನಿಂದ 1999ರ ಜುಲೈ 30 ರಲ್ಲಿ ಮೇರುನಟ ಡಾ. ರಾಜ್ ಅವರನ್ನು ಕಾಡುಗಳ್ಳ ವೀರಪ್ಪನ್ ‌ಮತ್ತು ತಂಡದಿಂದ ಅಪಹರಣ ಮಾಡಲಾಗಿತ್ತು. ಅಪಹರಣ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರಿಗೆ ಕೊಡಲು ಪಾರ್ವತಮ್ಮ ರಾಜಕುಮಾರ್‌ಗೆ ಆಡಿಯೋ ಕ್ಯಾಸೆಟ್ ನೀಡಿದ್ದ ನರಹಂತಕ. ಅಂದು ರಾತ್ರಿ ಚಾಮರಾಜನಗರಕ್ಕೆ ಬಂದ ಪಾರ್ವತಮ್ಮ ಅವರು ಸಿಎಂ ಎಸ್.ಎಂ.ಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಇದಾದ ನಂತರ, ಮಧ್ಯರಾತ್ರಿ ಎಸ್.ಎಂ. ಕೃಷ್ಣ ಅವರಿಗೆ ಆಡಿಯೋ ಕ್ಯಾಸೆಟ್ ತಲುಪಿಸಲಾಗಿತ್ತು.

ಇದನ್ನೂ ಓದಿ: ಕನ್ನಡದ ಪ್ರಖ್ಯಾತ ನಟಿಯನ್ನು ಮದುವೆಯಾಗುವ ಪ್ರಪೋಸಲ್‌ ಎಸ್‌ಎಂ ಕೃಷ್ಣಗೆ ಇತ್ತು, ಮುಂದಾಗಿದ್ದೇನು?

ವೀರಪ್ಪನ್ ಕಳುಹಿಸಿದ ಕ್ಯಾಸೆಟ್‌ನಲ್ಲಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದನು. ಡಾ.ರಾಜ್ ಕುಮಾರ್ ಬಿಡುಗಡೆಗೆ ಎಸ್.ಎಂ.ಕೃಷ್ಣ ಅವರು ಹಲವು ರೀತಿಯಲ್ಲಿ ಪ್ರಯತ್ನಿಸಿದರೂ 108 ದಿನಗಳ ಕಾಲ ತೆಗೆದುಕೊಂಡಿತು. ಈ ವೇಳೆ ಕಾಡುಗಳ್ಳ ವೀರಪ್ಪನ್ ಜೊತೆಗೆ ಸ್ವತಃ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೇ ಸ್ಯಾಟಲೈಟ್‌ ಫೋನ್ ಮೂಲಕ  ಮಾತನಾಡಿ ಡಾ.ರಾಜ್ ಅವರಿಗೆ ಏನೂ ಮಾಡದಂತೆ, ಅವರು ನಮ್ಮ ನಾಡಿ ಆಸ್ತಿ ಎಂದು ಮನವರಿಕೆ ಮಾಡಿಕೊಟ್ಟು ವಾಪಸ್ ಕಳಿಸುವಂತೆ ಖಡಕ್ ಸೂಚನೆಯನ್ನೂ ನೀಡಿದ್ದರು.

ಇದನ್ನೂ ಓದಿ: ಕರುನಾಡಿಗೆ ಮತ್ತೊಂದು ಆಘಾತ; ಸಿದ್ದರಾಮಯ್ಯ ಪರಮಾಪ್ತ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ನಿಧನ!

ಇದಾದ ನಂತರ ಕೃಷ್ಣ ಅವರು ವೀರಪ್ಪನ್ ಬಳಿಕೆ ಸಂಧಾನಕಾರರನ್ನು ಕಳುಹಿಸಿ ಡಾ. ರಾಜ್ ಕುಮಾರ್ ಅವರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ, ಮಾಜಿ ಸಿಎಂ ಕೃಷ್ಣ ಅವರು ಚಾಮರಾಜನಗರ ಜಿಲ್ಲೆಯ ತಮ್ಮ ಮನೆ ದೇವರು ಮಹದೇಶ್ವರಬೆಟ್ಟಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಪರಿಸರ ಪ್ರೇಮಿಯೂ ಆಗಿರುವ ಎಸ್. ಎಂ. ಕೃಷ್ಣ ಅವರು, 2002ರಲ್ಲಿ ಬಿಳಿಗಿರಿರಂಗನಬೆಟ್ಟದಲ್ಲಿ ಮಿನಿ ಸಚಿವ ಸಂಪುಟ ಸಭೆ ನಡೆಸಿದ್ದರು. ಈ ಮೂಲಕ ಗಿರಿಜನರ ಅಭಿವೃದ್ಧಿಗೆ ಮಿನಿ ಕ್ಯಾಬಿನೆಟ್‌ನಲ್ಲಿ ಚರ್ಚೆಯನ್ನೂ ಮಾಡಿದ್ದರು. ಹೀಗಾಗಿ, ರಾಜ್ಯದ ಗಿರಿಜನರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ ಮೊದಲ ಸಿಎಂ ಕೂಡ ಎಸ್.ಎಂ.ಕೃಷ್ಣ ಅವರಾಗಿದ್ದಾರೆ.

click me!