Karnataka Monsoon Rains: ಮುಂಗಾರ ಅಬ್ಬರಕ್ಕೆ ಮೈದುಂಬಿದ ಜಲಪಾತಗಳು; ವೀಕೆಂಡ್ ಎಲ್ಲೂ ಹೋಗೋದು ಬೇಡ, ಈ ಸ್ಥಳಗಳಿಗೆ ಹೋಗಿ

Kannadaprabha News, Ravi Janekal |   | Kannada Prabha
Published : Jun 20, 2025, 05:32 PM IST
karnataka monsoon

ಸಾರಾಂಶ

ಮುಂಗಾರು ಮಳೆಯಿಂದ ರಾಜ್ಯದ ಜಲಪಾತಗಳು ಧುಮ್ಮಿಕ್ಕುತ್ತಿವೆ. ಜೋಗ, ಭರಚುಕ್ಕಿ, ಗೋಕಾಕ್, ಕಲ್ಲತ್ತಗಿರಿ ಸೇರಿದಂತೆ ಹಲವು ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಜಲಪಾತಗಳಿಗೆ ತೆರಳುವ ಮಾರ್ಗಗಳ ಮಾಹಿತಿ ಇಲ್ಲಿದೆ.

ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯದ ಪ್ರಮುಖ ಜಲಪಾತಗಳು ಮೈದುಂಬಿವೆ. ಕ್ಷೀರಧಾರೆಯಂತೆ ಧುಮ್ಮಿಕ್ಕುತ್ತಿರುವ ಈ ಜಲಧಾರೆಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ಈ ಜಲರಾಶಿಯ ಸಣ್ಣ ಝಲಕ್‌ ಇಲ್ಲಿದೆ.

- ಜೋಗ ಫಾಲ್ಸ್‌ :

ಹೋಗೋದು ಹೇಗೆ? -

ಶಿವಮೊಗ್ಗ ಜಿಲ್ಲೆ ಸಾಗರದಿಂದ 31 ಕಿ.ಮೀ., ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಿಂದ 19 ಕಿ.ಮೀ. ದೂರದಲ್ಲಿದೆ. ಸಾಗರ, ಸಿದ್ದಾಪುರದಿಂದ ರೋಡ್‌ ಮೂಲಕ ಹೋಗಬಹುದು. ಬಸ್‌ಗಳ ಸೌಲಭ್ಯವೂ ಉಂಟು

.- ಭರಚುಕ್ಕಿ-ಗಗನಚುಕ್ಕಿ:

ಹೋಗೋದು ಹೇಗೆ? -

ಚಾಮರಾಜನಗರ-ಮಂಡ್ಯ ಜಿಲ್ಲೆಗಳ ಗಡಿಭಾಗದಲ್ಲಿವೆ. ಮಳವಳ್ಳಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು, ಬೆಂಗಳೂರಿನಿಂದ ಮಳವಳ್ಳಿ-ಕೊಳ್ಳೇಗಾಲ ರಸ್ತೆ ಮೂಲಕ ತೆರಳಬಹುದು.

- ಗೋಕಾಕ್‌ ಫಾಲ್ಸ್‌ :

ಹೋಗೋದು ಹೇಗೆ? -

ಬೆಳಗಾವಿ ಜಿಲ್ಲೆ ಗೋಕಾಕ್‌ನಿಂದ 6 ಕಿ.ಮೀ. ದೂರದಲ್ಲಿದೆ. ಗೋಕಾಕ್ ಜಲಪಾತದಿಂದ 10 ಕಿ.ಮೀ ದೂರದಲ್ಲಿ ಗೊಡಚಿನಮಲ್ಕಿ ಎಂಬ ಹಳ್ಳಿ ಇದೆ. ಇಲ್ಲಿಂದ 2 ಕಿ.ಮೀ. ನಡೆದರೆ ಜಲಪಾತದತ್ತ ಸಾಗಬಹುದು.

- ಕಲ್ಲತ್ತಗಿರಿ ಫಾಲ್ಸ್‌:

ಹೋಗೋದು ಹೇಗೆ?-

ಚಿಕ್ಕಮಗಳೂರು ಜಿಲ್ಲೆ ಕೆಮಣ್ಣುಗುಂಡಿಯಿಂದ 10 ಕಿ.ಮೀ.ದೂರದಲ್ಲಿದೆ. ಜಿಲ್ಲಾ ಕೇಂದ್ರದಿಂದ 52 ಕಿ.ಮೀ. ದೂರದಲ್ಲಿದ್ದು, ಚಿಕ್ಕಮಗಳೂರಿನಿಂದ ತರೀಕೆರೆ ದಾರಿಯಲ್ಲಿ ಲಿಂಗದಹಳ್ಳಿ ಸಮೀಪ ತಿರುಗಬೇಕು.

- ಸಿರಿಮನೆ ಫಾಲ್ಸ್‌:

ಹೋಗೋದು ಹೇಗೆ?-

ಶೃಂಗೇರಿಯಿಂದ ಮಂಗಳೂರು ರಸ್ತೆಯಲ್ಲಿ ಸುಮಾರು 7 ಕಿ.ಮೀ. ಪ್ರಯಾಣಿಸಿದರೆ ಕಿಗ್ಗಾ ಗ್ರಾಮ ಸಿಗಲಿದೆ. ಅಲ್ಲಿಂದ 4 ಕಿ.ಮೀ. ಪ್ರಯಾಣಿಸಿದರೆ ಸಿರಿಮನೆ ಫಾಲ್ಸ್‌ಗೆ ಹೋಗಬಹುದು. ಕಿಗ್ಗಾದವರೆಗೆ ಪ್ರಯಾಣಿಸಲು ಮಾತ್ರ ಬಸ್ಸಿನ ವ್ಯವಸ್ಥೆ ಇದೆ.

- ಅಬ್ಬಿ ಫಾಲ್ಸ್‌:

ಹೋಗೋದು ಹೇಗೆ?-

ಕೊಡಗಿನ ಮಡಿಕೇರಿಯಿಂದ 6 ಕಿ.ಮೀ. ದೂರದಲ್ಲಿದೆ. ಬಸ್‌ ಸಂಚಾರ ಇಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಿ ಅಲ್ಲಿಂದ, ಟ್ಯಾಕ್ಸಿಯಲ್ಲಿ ಹೋಗಬಹುದು. ಖಾಸಗಿ ವಾಹನಗಳ ಮೂಲಕವೂ ತೆರಳಬಹುದು.

- ಮಾಗೋಡು ಫಾಲ್ಸ್‌:

ಹೋಗೋದು ಹೇಗೆ?-

ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಹೋಗಿ, ಅಲ್ಲಿಂದ 3 ಕಿ.ಮೀ. ದೂರ ಸಾಗಿ, ಎಡಮಾರ್ಗದಲ್ಲಿ ಸುಮಾರು 13 ಕಿ.ಮೀ. ದೂರದಲ್ಲಿ ಸಾಗಿದರೆ ಮಾಗೋಡು ಗ್ರಾಮವಿದ್ದು, ಇಲ್ಲಿ ಜಲಪಾತವಿದೆ. ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.

- ಸಾತೋಡಿ ಫಾಲ್ಸ್‌:

ಹೋಗೋದು ಹೇಗೆ?-

ಯಲ್ಲಾಪುರ ತಲುಪಿ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಸಿಗುತ್ತದೆ. 2 ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತ ಸಿಗುತ್ತದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌