* ಮೊದಲ ಬಾರಿ ಥಿಯೇಟರ್‌ಗೆ ಕಾಲಿಟ್ಟ ವಿಶ್ವಪ್ರಸನ್ನ ತೀರ್ಥರು
* ದಿ ಕಾಶ್ಮೀರಿ ಫೈಲ್ಸ್ ವೀಕ್ಷಿಸಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು
* ಮಣಿಪಾಲದಲ್ಲಿ ಸಿನಿಮಾ ವೀಕ್ಷಿಸಿ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ
ವರದಿ- ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ, (ಮಾ.20): ಕಾಶ್ಮೀರಿ ಪಂಡಿತರ ಸಂಕಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ದಿ ಕಾಶ್ಮೀರಿ ಫೈಲ್ಸ್ (The Kashmir Files) ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಮುಗಿ ಬಿದ್ದು ಹೋಗುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ ಗಣ್ಯರು, ರಾಜಕಾರಣಿಗಳು ಮತ್ತು ಸಂತರನ್ನು ಕೂಡ ಈ ಸಿನಿಮಾ ಆಕರ್ಷಿಸಿದೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು(Udupi Vishwaprasanna Teertha), ಉಡುಪಿಯಲ್ಲಿ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿದ್ದಾರೆ
undefined
ಯಾವತ್ತೂ ಪೂಜೆ ಪ್ರವಚನ ಹಾಗೂ ಧಾರ್ಮಿಕ ತಿರುಗಾಟಗಳಲ್ಲೇ ನಿರತರಾಗಿರುವ ಮತ್ತು ಸಿನಿಮಾ ಥಿಯೇಟರ್ ಯಾವತ್ತೂ ಕಾಲಿರಿಸದ ಯತಿಗಳು ಕೂಡ ದಿ ಕಾಶ್ಮೀರಿ ಫೈಲ್ಸ್ ನೋಡುವ ಉತ್ಸುಕತೆ ತೋರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಉತ್ತರ ಭಾರತದಲ್ಲೂ ಅನೇಕ ಸಂತರು ಸಿನಿಮಾ ಕಂಡು, ಭಾವುಕರಾಗಿದ್ದಾರೆ. ಅಷ್ಟಮಠಾಧೀಶರಲ್ಲಿ ಒಬ್ಬರಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ರೊಂದಿಗೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಮಣಿಪಾಲದಲ್ಲಿ ಸಿನಿಮಾ ವೀಕ್ಷಿಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
The Kashmir Files Free Download ಲಿಂಕ್ ಬಗ್ಗೆ ಸೈಬರ್ ತಜ್ಞರ ಎಚ್ಚರಿಕೆ!
ಈ ಸಿನಿನಾ ಸುಳ್ಳಿನ ಸರಮಾಲೆಯಲ್ಲಿ ಮರೆಯಾಗಿದ್ದ ಸತ್ಯವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದೆ. ಸತ್ಯದ ಆವಿಷ್ಕಾರ ಮಾಡಿದ ನಿರ್ದೇಶಕರಿಗೆ ಅಭಿನಂದನೆ.ಅವರು ಕೊಟ್ಟಿರುವ ಎಚ್ಚರ ಸದಾ ಕಾಲ ನಮ್ಮಲ್ಲಿ ಜಾಗೃತರಾಗಿರಬೇಕು.ಇದು ಕೇವಲ ಆಗಿ ಹೋದ ಘಟನೆಯಲ್ಲ. ಮುಂದಿನ ದಿನ ನಮಗೂ ಈ ಪರಿಸ್ಥಿತಿ ಬಾರಬಾರದಂತೆ ಎಚ್ಚರವಾಗಿರಬೇಕು.ಈ ಸಿನಿಮಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಅನುವಾದವಾಗಬೇಕು.ಆ ಕಾಲದಲ್ಲಿ ಪಂಡಿತರು ಉಟ್ಟ ಬಟ್ಟೆಯಲ್ಲಿ ಬದುಕುಳಿದರೆ ಸಾಕೆಂದು ಊರು ಬಿಟ್ಟಿದ್ದರು,ಮತ್ತೆ ಅವರು ಸ್ವಸ್ಥಾನಕ್ಕೆ ಮರಳಬೇಕು. ಹಿಂದಿನ ವೈಭವ ಮತ್ತೆ ಕಾಶ್ಮೀರದಲ್ಲಿ ಕಾಣಬೇಕು ಎಂದರು.
ಚಿತ್ರ ಪ್ರದರ್ಶನಕ್ಕೆ ಶ್ರೀಗಳು ತಮ್ಮ ಜೊತೆಗೆ ಮಠದ 35 ಶಿಷ್ಯರನ್ನು ಕೂಡ ಕರೆದೊಯ್ದಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಶನಿವಾರ ರಾತ್ರಿ ಕೊನೆಯ ಶೋ ನೋಡಲು ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ಉರಿ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು.
The Kashmir Files Free Download ಲಿಂಕ್ ಬಗ್ಗೆ ಸೈಬರ್ ತಜ್ಞರ ಎಚ್ಚರಿಕೆ!
ಭಾರತದ ಟ್ರೆಂಡಿಂಗ್ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಮೂಲಕ ಸೈಬರ್ ಹ್ಯಾಕರ್ಸ್ ದಾಳಿ ಆರಂಭಿಸಿದ್ದು, ಉಚಿತ ಸಿನಿಮಾ ನೋಡುವ ಆಸೆಗೆ ಬಿದ್ದರೆ ಸೈಬರ್ ದಾಳಿಗೆ ಒಳಗಾಗುವುದು ಫಿಕ್ಸ್ ಎಂದು ಮಂಗಳೂರಿನ ಸೈಬರ್ ತಜ್ಞ ಡಾ.ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲೋಡ್ ಲಿಂಕ್ ಹೆಸರಲ್ಲಿ ದಾಳಿ ಮಾಡುವ ಕೆಲಸವನ್ನು ಸೈಬರ್ ಹ್ಯಾಕರ್ಸ್ ಆರಂಭಿಸಿದ್ದಾರೆ. ಪರಿಣಾಮ ಸಾಮಾಜಿಕ ತಾಣಗಳಲ್ಲಿ 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲಿಂಕ್ ವೈರಲ್ ಆಗುತ್ತಿದೆ. ಡೌನ್ ಲೋಡ್ ಲಿಂಕ್ ಒತ್ತಿದ್ರೆ ಸೈಬರ್ ಹ್ಯಾಕರ್ಸ್ ವೈರಸ್ ದಾಳಿ ಫಿಕ್ಸ್ ಎಂದು ಸೈಬರ್ ತಜ್ಞ ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ.
ಉಚಿತ ಸಿನಿಮಾ ಆಸೆಗೆ ಬಿದ್ರೆ ಬ್ಯಾಂಕ್ ಮಾಹಿತಿ ಲೀಕ್!: ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಡಾ.ಅನಂತ ಪ್ರಭು, ಆಂಡ್ರಾಯ್ಡ್ ಫೋನ್ ಮತ್ತು ಲ್ಯಾಪ್ ಟಾಪ್ ಡಾಟಾ ಕದಿಯಲು 'ಕಾಶ್ಮೀರ್ ಫೈಲ್ಸ್' ಬಳಕೆ ಮಾಡಲಾಗುತ್ತಿದೆ. ಬ್ಯಾಂಕ್ ಮಾಹಿತಿ ಸೇರಿ ಎಲ್ಲಾ ಖಾಸಗಿ ಡಾಟಾಗಳು ಹ್ಯಾಕರ್ಸ್ ಪಾಲಾಗುವ ಸಾಧ್ಯತೆ ಇದೆ. ಉಚಿತವಾಗಿ 'ಕಾಶ್ಮೀರ್ ಫೈಲ್ಸ್' ನೋಡುವ ಆಸೆಗೆ ಬಿದ್ದರೆ ಅಪಾಯ ಫಿಕ್ಸ್. ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಹಣ ಲೂಟಿ ಸಾಧ್ಯತೆ ಎಂದು ಎಚ್ಚರಿಕೆ ನೀಡಿದ್ದಾರೆ.