ಆರೆಸ್ಸೆಸ್ ಸಂಸ್ಥೆಗೆ ಬಿಜೆಪಿ ನೀಡಿದ್ದ ಜಾಗ ತಡೆಹಿಡಿದ ಸರ್ಕಾರ; ಬಿಜೆಪಿ ಆಕ್ರೋಶ

By Kannadaprabha NewsFirst Published Jul 15, 2023, 4:44 AM IST
Highlights

 ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ಸೇರಿದ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಜಮೀನು ತಡೆಹಿಡಿದಿರುವ ಈಗಿನ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಬೆಂಗಳೂರು (ಜು.15):  ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ಸೇರಿದ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಜಮೀನು ತಡೆಹಿಡಿದಿರುವ ಈಗಿನ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಅದರ ಪರಿಣಾಮ ಜನಸೇವಾ ಟ್ರಸ್ಟ್‌ಗೆ ನೀಡಿರುವ ಜಮೀನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಜನಸೇವಾ ಟ್ರಸ್ಟ್‌ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

Latest Videos

ಮಾಜಿ ಸಚಿವ ಆರ್‌.ಅಶೋಕ್‌ ಮಾತನಾಡಿ, ಹಿಂದಿನ ನಮ್ಮ ಸರ್ಕಾರ ಜಮೀನು ಕೊಟ್ಟಿತ್ತು. ಕಾಂಗ್ರೆಸ್‌ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಭೂಮಿ ನೀಡಲಾಗಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಇತ್ತು. ಆದಿಚುಂಚನಗಿರಿ, ಹಿಂದುಳಿದ ಮಠಗಳಿಗೂ ನೀಡಿದ್ದೆವು. ಅದೇ ರೀತಿ ರಾಷ್ಟೊ್ರೕತ್ಥಾನಕ್ಕೂ ಕೂಡ ಕೊಡಲಾಗಿತ್ತು. ಅದನ್ನು ತಡೆಹಿಡಿಯುವ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಇವರ ನಿಜಬಣ್ಣ ಮುಂದೆ ಬಯಲಾಗಲಿದೆ. ಇವರ ದ್ವೇಷದ ರಾಜಕಾರಣವನ್ನು ನಾನು ಖಂಡಿಸುತ್ತೇನೆ ಎಂದರು.

ಆರ್‌ಎಸ್ಎಸ್‌ಗೆ ಸರ್ಕಾರದಿಂದ ಬಿಗ್‌ ಶಾಕ್‌: ಭೂಮಿ ಹಸ್ತಾಂತರಕ್ಕೆ ತಡೆ

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಅವರೇ ತೋರಿಸುತ್ತಿದ್ದಾರೆ. ಸಚಿವರು ಆರಂಭದಲ್ಲೇ ಆರೆಸ್ಸೆಸ್‌ಗೆ ಮಂಜೂರಾದ ಭೂಮಿ ವಾಪಸ್‌ ಬಗ್ಗೆ ಮಾತಾಡುತ್ತಾರೆ. ಜನಸೇವಾ ವಿದ್ಯಾ ಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡುತ್ತಿರುವ ಸಂಸ್ಥೆ. ಅಂಥ ಸಂಸ್ಥೆಯಿಂದ ಭೂಮಿ ವಾಪಸ್‌ ಪಡೆಯುವುದು ಸರಿಯಿಲ್ಲ. ನಾನೂ ಕೂಡಾ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದರು.

click me!