ಕೈಗಾರಿಕೆ ಪ್ರದೇಶ ನಿರ್ವಹಣೆಗೆ ಆಡಳಿತ ಮಂಡಳಿ: ಸಚಿವ ಎಂ.ಬಿ. ಪಾಟೀಲ್‌

Published : Jul 15, 2023, 04:00 AM IST
ಕೈಗಾರಿಕೆ ಪ್ರದೇಶ ನಿರ್ವಹಣೆಗೆ ಆಡಳಿತ ಮಂಡಳಿ: ಸಚಿವ ಎಂ.ಬಿ. ಪಾಟೀಲ್‌

ಸಾರಾಂಶ

ಕೈಗಾರಿಕಾ ಪ್ರದೇಶಗಳ ನಿರ್ವಹಣೆಗಾಗಿ ಹೊಸದಾಗಿ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಆಯಾ ಆಡಳಿತ ಮಂಡಳಿಗೆ ಕೈಗಾರಿಕಾ ಪ್ರದೇಶವನ್ನು ಹಸ್ತಾಂತರಿಸಲಾಗುವುದು. ಹಾಗೆಯೇ ಕೈಗಾರಿಕೆಗಳಿಂದ ಬರುವ ತೆರಿಗೆಯಲ್ಲಿ ಶೇ.30ನ್ನು ಆಡಳಿತ ಮಂಡಳಿಗಳಿಗೆ ನೀಡಲಾಗುತ್ತದೆ: ಸಚಿವ ಎಂ.ಬಿ. ಪಾಟೀಲ್‌ 

ವಿಧಾನಸಭೆ(ಜು.15): ಕೈಗಾರಿಕಾ ಪ್ರದೇಶಗಳ ನಿರ್ವಹಣೆಗೆ ಹೊಸದಾಗಿ ಆಡಳಿತ ಮಂಡಳಿ ರಚಿಸಿ, ಕೈಗಾರಿಕಾ ಪ್ರದೇಶದ ಎಲ್ಲ ಹೊಣೆಯನ್ನು ಆ ಮಂಡಳಿಗೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಪ್ರಶ್ನೋತ್ತರ ಕಲಾಪದ ಬಿಜೆಪಿಯ ಧೀರಜ್‌ ಮುನಿರಾಜು ಅವರು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್‌, ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 132 ತಾಲೂಕುಗಳು ಅತಿ ಹಿಂದುಳಿದಿವೆ, 78 ತಾಲೂಕುಗಳು ಹಿಂದುಳಿದಿದ್ದು, 9 ತಾಲೂಕು ಮಾತ್ರ ಅಭಿವೃದ್ಧಿ ಹೊಂದಿವೆ. ಹೀಗಾಗಿ ತಾಲೂಕುಗಳಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸುವ ಸಲುವಾಗಿ ಎಲ್ಲ ಕೈಗಾರಿಕಾ ಪ್ರದೇಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯವನ್ನಾದರೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಜು.20ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಜ್ಜು ಆಗಸ್ಟ್‌ 11ರಿಂದ ವಿಮಾನ ಹಾರಾಟ: ಸಚಿವ ಎಂ.ಬಿ.ಪಾಟೀಲ

ಕೈಗಾರಿಕಾ ಪ್ರದೇಶಗಳ ನಿರ್ವಹಣೆಗಾಗಿ ಹೊಸದಾಗಿ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಆಯಾ ಆಡಳಿತ ಮಂಡಳಿಗೆ ಕೈಗಾರಿಕಾ ಪ್ರದೇಶವನ್ನು ಹಸ್ತಾಂತರಿಸಲಾಗುವುದು. ಹಾಗೆಯೇ ಕೈಗಾರಿಕೆಗಳಿಂದ ಬರುವ ತೆರಿಗೆಯಲ್ಲಿ ಶೇ.30ನ್ನು ಆಡಳಿತ ಮಂಡಳಿಗಳಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.

ದೊಡ್ಡಬಳ್ಳಾಪುರದಲ್ಲಿ ಫಾಕ್ಸ್‌ಕಾನ್‌ ಸ್ಥಾಪನೆ:

ಆ್ಯಪಲ್‌ ಫೋನ್‌ ತಯಾರಿಕೆಗೆ ಬಿಡಿಭಾಗ ನೀಡುವ ಫಾಕ್ಸ್‌ಕಾನ್‌ ಸಂಸ್ಥೆ ರಾಜ್ಯದಲ್ಲಿ ತನ್ನ ಕೈಗಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದಕ್ಕಾಗಿ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಭೂಮಿಯನ್ನು ನೀಡಲಾಗುತ್ತಿದೆ. 8,400 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್