Wildlife: ಜನರನ್ನು ಕಾಡುತ್ತಿದ್ದ ಒಂಟಿ ಸಲಗ ಕಾಡಿಗಟ್ಟಿದ ಅರಣ್ಯ ಇಲಾಖೆ

By Kannadaprabha News  |  First Published Jul 16, 2023, 6:46 AM IST

ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ, ಐಗೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಶುಕ್ರವಾರದಂದು ಅರಣ್ಯ ಇಲಾಖೆ ಸಿಬ್ಬಂದಿ ಸೇರಿಕೊಂಡು, ಜನರಿಗೆ ಕಾಟಕೊಡುತ್ತಿದ್ದ ಒಂಟಿ ಸಲಗವನ್ನು ಕಾಡಿಗೆ ಅಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸೋಮವಾರಪೇಟೆ (ಜು.16) : ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ, ಐಗೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಶುಕ್ರವಾರದಂದು ಅರಣ್ಯ ಇಲಾಖೆ ಸಿಬ್ಬಂದಿ ಸೇರಿಕೊಂಡು, ಜನರಿಗೆ ಕಾಟಕೊಡುತ್ತಿದ್ದ ಒಂಟಿ ಸಲಗವನ್ನು ಕಾಡಿಗೆ ಅಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ರಾತ್ರಿ ಕಾಜೂರು ಅರಣ್ಯದಿಂದ ಟಾಟಾ ಕಾಫಿ ತೋಟಕ್ಕೆ ತೆರಳಿದ್ದ ಕಾಡಾನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. ಕಾಫಿ ತೋಟಕ್ಕೆ ತೆರಳಿದ್ದ ಕಾಡಾನೆ ಬೆಳಗ್ಗೆ ವಾಪಸ್‌ ಅರಣ್ಯಕ್ಕೆ ಹೋಗುವ ಸಂದರ್ಭ ಸೋಲಾರ್‌ ತಂತಿ ಬೇಲಿಗೆ ವಿದ್ಯುತ್‌ ಪ್ರವಹಿಸಲಾಗಿದ್ದರಿಂದ ವಾಪಸ್‌ ತೆರಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ರೈಲ್ವೇ ಬ್ಯಾರಿಕೇಡ್‌ನ ಪಕ್ಕದಲ್ಲಿಯೇ ಸುಮಾರು 2 ಕಿ.ಮೀ. ನಷ್ಟುಸಾಗಿದ ಕಾಡಾನೆಯನ್ನು ಕಾಜೂರು ಅರಣ್ಯ ಇಲಾಖಾ ವಸತಿ ಗೃಹದ ಬಳಿಯಿಂದ ಅರಣ್ಯಕ್ಕೆ ಅಟ್ಟುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.

Latest Videos

undefined

 

ಪ್ರಾಣಿ ದಾಳಿ: ಕಂಟ್ರೋಲ್‌ ರೂಂ ಸ್ಥಾಪನೆಗೆ ಹೈಕೋರ್ಟ್ ಆದೇಶ

ಎಲ್ಲೆಂದರಲ್ಲಿ ನುಗ್ಗುವ ಕಾಡಾನೆಗಳು ರಸ್ತೆಯಲ್ಲಿಯೇ ಸಂಚರಿಸುತ್ತಿವೆ. ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಮುಂಚೆ ನಿಗದಿತ ಸ್ಥಳದಲ್ಲಿ ಮಾತ್ರ ಕಾಡಾನೆಗಳು ದಾಟುತ್ತಿದ್ದವು. ಇದೀಗ ಟಾಟಾ ಕಾಫಿ ಸಂಸ್ಥೆಯವರು ಕಾಡಾನೆಗಳು ದಾಟುತ್ತಿದ್ದ ಕಾರಿಡಾರ್‌ಗೆ ಸೋಲಾರ್‌ ಬೇಲಿ ಅಳವಡಿಸಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆಯವರು ಕೆಲವೊಂದು ಸ್ಥಳಗಳನ್ನು ಬಿಟ್ಟು ರೈಲ್ವೇ ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಇದರಿಂದಾಗಿ ಕಾಡಾನೆಗಳು ಸಿಕ್ಕಸಿಕ್ಕ ಸ್ಥಳಗಳಲ್ಲಿ ರಸ್ತೆ ದಾಟುತ್ತಿವೆ. ವಾಹನ ಸವಾರರು ಮತ್ತು ಸ್ಥಳೀಯರು ಜೀವ ಭಯದಿಂದ ಸಂಚರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಪ್ರಸ್ತುತ ಕಾಜೂರು ಭಾಗದಲ್ಲಿ ಎರಡು ಆನೆಗಳು ಪ್ರತ್ಯೇಕವಾಗಿ ಓಡಾಡುತ್ತಿವೆ. ಉಳಿದಂತೆ ಮರಿಯಾನೆಯನ್ನು ಒಳಗೊಂಡಂತೆ ನಾಲ್ಕು ಆನೆಗಳ ಗುಂಪು ಬೀಡುಬಿಟ್ಟಿವೆ. ಇತ್ತೀಚೆಗೆ ದುರ್ಗಾ ಎಸ್ಟೇಟ್‌ನಲ್ಲಿ ಕಾಡಾನೆ ಅಡ್ಡಲಾಗಿ ಬಂದಿದ್ದರಿಂದ ಬೈಕ್‌ ಸವಾರರೋರ್ವರು ಬೈಕ್‌ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟೆಲ್ಲಾ ಅವಾಂತರಕ್ಕೆ ಆನೆ ಕಾರಿಡಾರ್‌ ಮುಚ್ಚಿರುವುದೇ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ಕಾರಿಡಾರನ್ನು ಒಳಗೊಂಡಂತೆ ಸೋಲಾರ್‌ ಹಾಕಿರುವುದು ಹಾಗೂ ಕೆಲವೊಂದು ಸ್ಥಳಗಳನ್ನು ಹೊರತುಪಡಿಸಿ ಬ್ಯಾರಿಕೇಡ್‌ ಅಳವಡಿಸಿರುವುದರಿಂದ ಕಾಡಾನೆಗಳು ಯಡವಾರೆ, ಕಾಜೂರು, ಸಜ್ಜಳ್ಳಿ, ಐಗೂರು ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಜನವಸತಿ ಪ್ರದೇಶದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿನಂತರ ಅರಣ್ಯದ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖಾ ಸಿಬ್ಬಂದಿ ಶ್ರೀಕಾಂತ್‌, ಧರ್ಮಪ್ಪ, ಅರಣ್ಯ ವೀಕ್ಷಕರಾದ ಹರ್ಷಿತ್‌, ವಿನೋದ್‌, ದರ್ಶನ್‌, ಆನೆ ಕಾರ್ಯಾಚರಣೆ ಪಡೆ ಹಾಗೂ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದರು.

ಚಾಮಿಯಾಲ, ಮೈತಾಡಿ, ದೇವಣಗೇರಿ ಭಾಗದಲ್ಲಿ ಕಾಡಾನೆ ಹಾವಳಿ

ಮಡಿಕೇರಿ (ಜು.16) : ವಿರಾಜಪೇಟೆ ತಾಲೂಕಿನ ಚಾಮಿಯಾಲ, ಮೈತಾಡಿ ಹಾಗೂ ದೇವಣಗೇರಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಬೆಳೆಗಳನ್ನು ನಾಶಪಡಿಸುತ್ತಿದೆ.

ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಬೆಳೆಗಾರರು ಬೆಳೆದ ಅಡಕೆ ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸುತ್ತಿವೆ. ಚಾಮಿಯಾಲ ಗ್ರಾಮದ ಬೆಳೆಗಾರರಾದ ಅಶ್ಪಾಕ್‌ ಕೆ.ಎ. ಹಾಗೂ ಸಣ್ಣುವಂಡ ಅಪ್ಪಚ್ಚು ಅವರ ತೋಟದಲ್ಲಿ ದಾಂದಲೆ ನಡೆಸಿರುವ ಕಾಡಾನೆಗಳು ಬಾಳೆ ಗಿಡ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸಿದ್ದು, ಬೆಳೆಗಾರರಿಗೆ ಅಪಾರ ನಷ್ಟಉಂಟಾಗಿದೆ. 

ಅರಣ್ಯ ಇಲಾಖೆಯವರು ನೆಪಮಾತ್ರಕ್ಕೆ ಕಾಡಾನೆಗಳನ್ನು ತೋಟಗಳಿಂದ ಕಾಡಿಗಟ್ಟುವ ಕಾರ್ಯಚರಣೆ ಮಾಡುತ್ತಿದ್ದಾರೆ. ಆದರಕೆ ಕಾಡಿಗಟ್ಟಿರುವ ಕಾಡಾನೆಗಳು ಮತ್ತೆ ತೋಟದತ್ತ ಲಗ್ಗೆಯಿಡುತ್ತಿವೆ. ಮನೆಯಂಗಳಕ್ಕೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು,ಭಯದ ವಾತವರಣದಲ್ಲೇ ಈ ಭಾಗದ ಜನರು ಜೀವನ ನಡೆಸುತ್ತಿದ್ದಾರೆ. ಬೆಳೆಗಾರರು ಹಾಗೂ ಕಾರ್ಮಿಕರು ಕಾಡಾನೆ ಭಯದಿಂದ ತೋಟ ಕೆಲಸಗಳಿಗೆ ತೆರಳು ಹಿಂದೇಟು ಹಾಕುವಂತಾಗಿದೆ. 

ಕೊಡಗಿನಲ್ಲಿ ಕಾಡಾನೆ ಉಪಟಳ: ನಾಳೆ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆಗೆ ನಿರ್ಧಾರ

 ಅರಣ್ಯ ಇಲಾಖೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಅರಣ್ಯ ಇಲಾಖೆ ಕಾಡಿನಲ್ಲಿ ಆನೆಗಳ ಆಹಾರಕ್ಕೆ ಬೇಕಾದ ಹಲಸಿನ ಹಣ್ಣಿನ ಮರವನ್ನು ನೆಟ್ಟು ಬೆಳೆಸಬೇಕು. ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಜಿ ಶಾಸಕರು ಯಾವುದೇ ಮುತುವರ್ಜಿವಹಿಸದೆ ನಿರ್ಲಕ್ಷ ್ಯ ಮಾಡಿದ್ದರು. ಇದೀಗ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಕಾಡಾನೆ ಸಮಸ್ಯೆಗೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕಾಡಾನೆ ಸಮಸ್ಯೆ ಬಗೆಹರಿಯುವ ವಿಶ್ವಾಸವಿದಎ ಂದು ಚಾಮಿಯಾಲ ಗ್ರಾಮದ ಬೆಳೆಗಾರ ಅಶ್ಪಾಕ್‌ ಕೆ.ಎ. ಹೇಳಿದ್ದಾರೆ.   

click me!