ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅವ್ಯವಹಾರ ಕುರಿತು ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ (ಜು.16) : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅವ್ಯವಹಾರ ಕುರಿತು ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಮಟ್ಟದಲ್ಲೇ ತನಿಖೆ ಆಗಿ ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಬೇಕು. ಬೆಂಗಳೂರಿನಿಂದ ಸಿವಿಲ್ ಎಕ್ಸಪರ್ಟ್ ಹಾಗೂ ಫೈನಾನ್ಸಿಯಲ್ ಎಕ್ಸಪರ್ಟ್ ಬರುತ್ತಾರೆ. ಅವರು ನೀಡುವ ವರದಿ ಮೇಲೆ ತನಿಖೆ ಯಾರಿಗೆ ನೀಡಬೇಕು ಎನ್ನುವುದರ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.
ಬುಡಾ, ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿಲ್ಲ ಎಂದು ಕ್ಲೀನ್ ಚೀಟ್ ನೀಡಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ಬರುತ್ತಿರುವ ಅಧಿಕಾರಿಗಳು ಥರ್ಡ್ ಪಾರ್ಟಿ. ಅವರು ಬಂದು ತನಿಖೆ ಮಾಡಿ ವರದಿ ನೀಡಲಿ ಎಂದರು.
ಪಕ್ಷ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ: ಸಚಿವ ಸತೀಶ ಜಾರಕಿಹೊಳಿ
ರಸ್ತೆಯಲ್ಲೇ ಮನೆ ನಿರ್ಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಅವರ ವಿರೋಧಿಗಳು ಇದ್ದರೆ ಅವರ ಮನೆ, ಕಾರ್ಖಾನೆಗೆ ತೊಂದರೆ ಮಾಡುತ್ತಾರೆ. ಇದೊಂದೇ ಪ್ರಕರಣ ಅಲ್ಲ. ಬಹಳಷ್ಟುಪ್ರಕರಣಗಳು ಬೆಳಗಾವಿಯಲ್ಲಿವೆ. ಮಹಾನಗರ ಪಾಲಿಕೆಯಲ್ಲೇ ಹತ್ತತ್ತು ವರ್ಷಗಳು ಅದೇ ಅಧಿಕಾರಿಗಳೇ ಇದ್ದಾರೆ. ನಾವು ಅವರನ್ನು ತೆಗೆದರೆ, ಅವರು ಇನ್ನೊಂದು ಇಲಾಖೆಗೆ ಬರುತ್ತಾರೆ. ಪಾಲಿಕೆಯಿಂದ ತೆಗೆದರೆ, ಅವರು ಬುಡಾಕ್ಕೆ ಬರುತ್ತಾರೆ ಎಂದರು.
ಬಸ್‌ನ ಉದಾಹರಣೆ ಕೊಟ್ಟಸತೀಶ ಜಾರಕಿಹೊಳಿ ಅವರು, ಬಸ್‌ನಿಂದ ಇಳಿಸಿರ್ತಿವಿ, ಅವರು ಹಿಂದಿನ ಬಾಗಿಲಿನಿಂದ ಒಳ ಬಂದಿದ್ದು ಗೊತ್ತೇ ಆಗುವುದಿಲ್ಲ. ಬಸ್ ಖಾಲಿ ಇದೆ ಎಂದು ನಾವು ತಿಳಿದುಕೊಳ್ಳುತ್ತೇವೆ. ಆದರೆ, ಅವರು ಎರಡನೇ ಬಸ್‌ನಲ್ಲಿ ಬರುತ್ತಾರೆ. ಜಾತಿ, ಧರ್ಮ, ಎಲ್ಲವೂ ಸೇರಿ ಒತ್ತಡ ಹಾಕಿ ಮತ್ತೆ ಬರುತ್ತಾರೆ. ಬೆಳಗಾವಿಯಲ್ಲಿ ಕಂಡಕ್ಟರ್ ಇಬ್ಬರಾಗಿಲ್ಲ. ಬಸ್‌ಗಳು ಎರಡಾಗಿವೆ ಎಂದರು.
ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ
ಬಸವೇಶ್ವರ ವೃತ್ತದ ಬಳಿಯಿರುವ ತಿನಿಸು ಕಟ್ಟೆಯ ಜಾಗ ಒಬ್ಬರ ಹೆಸರಿನಲ್ಲಿದೆ. ಹರಾಜು ಹಾಕಿದವರು ಮತ್ತೊಬ್ಬರು. ತರಾತುರಿಯಲ್ಲಿ 30 ವರ್ಷ ಲೀಸ್‌ಗೆ ಕೊಡಲಾಗಿದೆ. ಮೊದಲು 5 ವರ್ಷ ಇತ್ತು. ಈಗ 30 ವರ್ಷ ಲೀಸ್ ಹೇಗೆ ಕೊಟ್ಟಿದ್ದಾರೆ ಎಂಬುವುದರ ಕುರಿತು ತನಿಖೆ ನಡೆಯಬೇಕಿದೆ. ಬಾಡಿಗೆ ಬಹಳ ಕಡಿಮ ಇದೆ. ಅಕ್ರಮವಾಗಿ ಬಾಡಿಗೆ ಹಣ ವರ್ಗಾವಣೆಯಾಗುತ್ತಿದೆ. .15 ಸಾವಿರ ಬಾಡಿಗೆ ಕೊಡುವ ಜಾಗದಲ್ಲಿ ಮನಬಂದಂತೆ ಬಾಡಿಗೆ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ಅಧಿಕಾರಿಗಳೇ ವರದಿ ನೀಡಬೇಕು.- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು.