ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ದಾವಣಗೆರೆ ಜಿಲ್ಲೆಯ ಪತಿ, ಪತ್ನಿ ಹಾಗೂ ಪುತ್ರ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ವರದಿಯಾಗಿದೆ.
ದಾವಣಗೆರೆ (ಆ.20) : ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ದಾವಣಗೆರೆ ಜಿಲ್ಲೆಯ ಪತಿ, ಪತ್ನಿ ಹಾಗೂ ಪುತ್ರ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ವರದಿಯಾಗಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮ ಮೂಲದ ಯೋಗೇಶ ಹೊನ್ನಾಳ(37 ವರ್ಷ), ಪ್ರತಿಭಾ ಹೊನ್ನಾಳ್(35) ಹಾಗೂ ಮಗ ಯಶ್(6) ಮೃತಪಟ್ಟವರು. ಕಳೆದ 9 ವರ್ಷದ ಹಿಂದೆ ಯೋಗೇಶ್, ಪ್ರತಿಭಾರ ಮದುವೆಯಾಗಿದ್ದು, ಈ ದಂಪತಿಗೆ 6 ವರ್ಷದ ಮಗುವಿದ್ದೂ, ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಟೌಸನ್‌ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯೋಗೇಶ, ಪ್ರತಿಭಾ ದಂಪತಿ ಪುತ್ರ ಸಹಿತ ವಾಸಿಸುತ್ತಿದ್ದ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಯೋಗೇಶ್, ಪ್ರತಿಭಾ ದಂಪತಿಗೆ ಯಾರ ಕರೆಯನ್ನೂ ಸ್ವೀಕರಿಸದೇ ಇದ್ದುದರಿಂದ, ನೆರೆ ಮನೆಯವರು ಬಾಗಿಲು ಬಡಿದರು ತೆಗೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಲ್ಟಿಮೋರ್ ಕೌಂಟಿ ಪೊಲೀಸರ ಗಮನಕ್ಕೆ ತಂದಿದ್ದರು.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ಅಲ್ಲಿನ ಪೊಲೀಸರಿಂದ ತನಿಖೆ :
ಟೌಸನ್‌ನಲ್ಲಿ ಇಂಜಿನಿಯರ್ ದಂಪತಿ ಯೋಗೇಶ, ಪ್ರತಿಭಾ ದಂಪತಿ ಮನೆ ಬಳಿ ಧಾವಿಸಿದ ಬಾಲ್ಟಿಮೋರ್ ಕೌಂಟಿ ಪೊಲೀಸ್(Baltimore County Police) ಸಿಬ್ಬಂದಿ ಬೆಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಪೊಲೀಸರು ಬಾಗಿಲು ತೆಗೆಯದಿದ್ದರಿಂದ ಬಾಗಿಲು ಒಡೆದು, ಒಳ ಹೋಗಿ ನೋಡುತ್ತಿದ್ದಂತೆಯೇ ಯೋಗೇಶ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಶವವಾಗಿ ಪತ್ತೆಯಾಗಿದೆ. ಯೋಗೇಶ, ಪ್ರತಿಭಾ ಹಾಗೂ ಪುತ್ರ ಯಶ್ ಸಾವಿನ ಬಗ್ಗೆ ಬಾಲ್ಟಿಮೋರ್ ಕೌಂಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅತ್ಯಂತ ಸುರಕ್ಷಿತ ಪ್ರದೇಶವಾದ ಬಾಲ್ಟಿಮೋರ್‌ನ ಟೌಸನ್ 1000 ಬ್ಲಾಕ್ ಕೆನಿಲ್‌ವಥ್‌ರ್ ಭಾಗದಲ್ಲಿ ಸಾಮೂಹಿಕ ಸಾವಿನ ಘಟನೆ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ.
ಅಲ್ಲಿನ ಸ್ಥಳೀಯರು ಹೇಳುವಂತೆ ಶಾಲೆಗೆ ಹೋಗುವ ಮಗ, ಯೋಗೇಶ, ಪ್ರತಿಭಾ ದಂಪತಿ ಮೂವರೂ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ತಮ್ಮ ಪಾಡಿಗೆ ತಾವಿದ್ದ ಯೋಗೇಶ್ ಕುಟುಂಬ ಹೀಗೆ ಸಾಮೂಹಿಕವಾಗಿ ಸಾವನ್ನಪ್ಪಿರುವುದು ಸಾಕಷ್ಟುಆಘಾತ ತಂದಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆಯೆಂದಿದ್ದಾರೆ.
ಹಾಲೇಕಲ್ಲು ಗ್ರಾಮದಲ್ಲಿ ಐದಾರು ಎಕರೆ ಜಮೀನು ಹೊಂದಿರುವ ಯೋಗೇಶ್ ಕುಟುಂಬ ಮೂಲತಃ ರೈತಾಪಿಗಳದ್ದು. ಸುಖಿ ಕುಟುಂಬ ಯಾಕೆ ನಿಗೂಢವಾಗಿ ಸಾವನ್ನಪ್ಪಿದೆಯೆಂಬುದೇ ಸದ್ಯ ಕುಟುಂಬ ವರ್ಗವನ್ನು ಕಾಡುತ್ತಿದೆ. ಯೋಗೇಶ್, ಪತ್ನಿ ಪ್ರತಿಭಾ, ಪುತ್ರ ಯಶ್ ಸಾವಿಗೆ ಕಾರಣವೇನೆಂಬುದು ಗೊತ್ತಾಗಬೇಕು, ಮೂವರ ಪಾರ್ಥಿವ ಶರೀರ ಭಾರತಕ್ಕೆ ತರಿಸಿಕೊಡಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮೃತರ ಬಂಧು-ಬಳಗ ಒತ್ತಾಯಿಸಿದೆ.
ದಕ್ಷಿಣ ಕನ್ನಡ: ಪುತ್ರನ ಆತ್ಮಹತ್ಯೆ ಬೆನ್ನಲ್ಲೇ ನೊಂದು ತಂದೆಯೂ ಆತ್ಮಹತ್ಯೆ!
ಕುಟುಂಬದವರ ಆಕ್ರಂದನ
ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದ ವಾಸಿ, ನಿವೃತ್ತ ತಹಸೀಲ್ದಾರ್ ದಿವಂಗತ ನಾಗರಾಜಪ್ಪ ಹೊನ್ನಾಳ್‌ರಿಗೆ ಇಬ್ಬರು ಪುತ್ರರು, ಯೋಗೇಶ್ ಅಮೆರಿಕದಲ್ಲಿ ಯೋಗೇಶ್ ಪತ್ನಿ, ಮಗನ ಸಮೇತ ಇದ್ದರೆ, ಇನ್ನೊಬ್ಬ ಪುತ್ರ ಬೆಂಗಳೂರಿನಲ್ಲಿ ಸಾಫ್‌್ಟವೇರ್ ಇಂಜಿನಿಯರ್ ಆಗಿದ್ದಾರೆ. ಮನೆ ಕಡೆ ಆರ್ಥಿಕ ಸ್ಥಿತಿವಂತರಾದ ಯೋಗೇಶ್ ಸಾವಿಗೆ ಗ್ರಾಮಸ್ಥರು ಮರುಗುತ್ತಿದ್ದಾರೆ. ಯೋಗೇಶ್‌ರ ತಾಯಿ ದಾವಣಗೆರೆಯಲ್ಲಿ ವಾಸವಾಗಿದ್ದು, ತಮ್ಮ ಮಗನ ಸಾವಿನ ವಿಚಾರ ಕೇಳಿ ಆಕಾಶವೇ ಕಳಚಿ ಬಿದ್ದಂತೆ ನೋವನುಭವಿಸುತ್ತಿದ್ದಾರೆ.