Udupi: ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

By Govindaraj S  |  First Published Jun 24, 2023, 1:38 PM IST

ಮಂಗಳೂರಿನಿಂದ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣದ ತೆಲಂಗಾಣದ  ಶಾಸಕ ರೋಹಿತ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ಸಂಭವಿಸಿದೆ. 


ಉಡುಪಿ (ಜೂ.24): ಮಂಗಳೂರಿನಿಂದ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣದ ತೆಲಂಗಾಣದ  ಶಾಸಕ ರೋಹಿತ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಜೀಪಿನ ಟಯರ್ ಏಕಾಏಕಿ ಸ್ಟೋಟಗೊಂಡಿದ್ದು ಚಾಲಕನ ಸಮಯ ಪ್ರಜ್ಣೆಯಿಂದಾಗಿ ಬಾರಿ ಅನಾಹುತ ತಪ್ಪಿದೆ. ಅಲ್ಲದೇ ವಾಹನದಲ್ಲಿ‌ ಇದ್ದ ಶಾಸಕರಿಗೆ ಯಾವುದೇ ತರದಲ್ಲಿ ಗಾಯಗಳು ಸಂಭವಿಸಲಿಲ್ಲ.ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುವೆ ಸಿಲುಕಿ ಕಾರು ಜಖಂಗೊಂಡಿದ್ದು, ಸದ್ಯ ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ರ್ಡಾಡಿ ಗ್ರಾಮದ ಮೊಗೆರಡ್ಕ ಕ್ರಾಸ್‌ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಬೈಕಿಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗ್ಗೆ ಸಂಭವಿಸಿದೆ. ಮೃತ ಯುವಕ ಕೇರಳದ ಕಾಸರಗೋಡು ನಿವಾಸಿ ದೀಕ್ಷಿತ್‌ (19) ಎಂದು ಗುರುತಿಸಲಾಗಿದೆ. ಬುಧವಾರ ದೀಕ್ಷಿತ್‌ನ ಹುಟ್ಟುಹಬ್ಬವಾಗಿದ್ದು ಈ ಹಿನ್ನಲೆಯಲ್ಲಿ ಬೆಳಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗರ್ಡಾಡಿ ಮೊಗೆರಡ್ಕ ಕ್ರಾಸ್‌ನಲ್ಲಿ ಎದುರಿನಿಂದ ಬಂದ ಬಸ್‌ ಬೈಕಿಗೆ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕ ಅತಿಯಾದ ವೇಗದಲ್ಲಿ ಲಾರಿಯೊಂದನ್ನು ಓವರ್‌ ಟೇಕ್‌ ಮಾಡುತ್ತಾ ರಸ್ತೆಯ ತೀರಾ ಬಲ ಭಾಗಕ್ಕೆ ಬಂದಿದ್ದು ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದಿದೆ. 

Tap to resize

Latest Videos

undefined

ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ: ಸಲೀಂ ಅಹಮ್ಮದ್

ಹೊಡೆತದ ರಭಸಕ್ಕೆ ತಲೆಗೆ ಗಂಭೀರವಾಗಿ ಗಾಯಗೊಂಡ ದೀಕ್ಷಿತ್‌ನನ್ನು ಸ್ಥಳೀಯರು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರೂ ಆವೇಳೆಗಾಗಲೇ ಆತ ಮೃತಪಟ್ಟಿದ್ದ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಾಎ. ದೀಕ್ಷಿತ್‌ ವೇಣೂರಿನ ಎಸ್‌.ಡಿ.ಎಂ ಐಟಿಐಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಉತ್ತಮ ಕ್ರೀಡಾಪಟುವೂ ಆಗಿದ್ದ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿದ್ದ. ಈತ ಕಂಬಳದ ಓಟಗಾರನೂ ಆಗಿದ್ದ. ಈತ ಕುವೆಟ್ಟು ಗ್ರಾಪಂ ವ್ಯಾಪ್ತಿಯ ಒಡೀಲ್‌ನಲ್ಲಿರುವ ತನ್ನ ಮಾವನ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದ.

ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ: ಜಗದೀಶ್‌ ಶೆಟ್ಟರ್‌

ಟಿಪ್ಪರ್‌ ಹಾಯ್ದು ಪತ್ನಿ ಸಾವು: ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ದಂಪತಿ ಮೇಲೆ ಟಿಪ್ಪರ್‌ ಹಾಯ್ದು ಪತ್ನಿ ಸಾವನ್ನಪ್ಪಿದ್ದು, ಪತಿ ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಕುರಿಹಾಳ ಗ್ರಾಮದ ಇಮಾಮಬಿ (60) ಮೃತ ಮಹಿಳೆ. ಪತಿ ಇಮಾಮ್‌ ಝಾಸಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಝಾಸಿ ದಂಪತಿ ದ್ವಿಚಕ್ರವಾಹನದ ಮೇಲೆ ಆಕತಿ ಗ್ರಾಮದ ಕಡೆಗೆ ಹೊರಟ್ಟಿದ್ದ ವೇಳೆ ದೇವಗಿರಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಅಪಘಾತ ನಡೆದಿದೆ. ಟಿಪ್ಪರ್‌ ಚಾಲಕ ಅಪಘಾತಗೊಳಿಸಿ, ಟಿಪ್ಪರ್‌ ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!