Bengaluru Mysuru Expressway: ಟೋಲ್ ದರ ಮತ್ತೆ ಹೆಚ್ಚಳ: ಕನ್ನಡಪರ ಸಂಘಟನೆಗಳು ಪ್ರತಿಭಟನೆ

By Ravi Janekal  |  First Published Jun 24, 2023, 1:14 PM IST

ಬೆಂಗಳೂರು-ಮೈಸೂರು ದಶಪಠ ಹೆದ್ದಾರಿಯ ಟೋಲ್ ದರ ಮತ್ತೆ ಸದ್ದಿಲ್ಲದೇ ಹೆಚ್ಚಳವಾಗಿದೆ. ಈ ಹಿನ್ನೆಲೆ ಕನ್ನಡಪರ ಸಂಘಟನೆಗಳು ಕುಂಬಳಗೂಡು ಕಣಮಿಣಕಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು.


ರಾಮನಗರ (ಜೂ.24) ಬೆಂಗಳೂರು-ಮೈಸೂರು ದಶಪಠ ಹೆದ್ದಾರಿಯ ಟೋಲ್ ದರ ಮತ್ತೆ ಸದ್ದಿಲ್ಲದೇ ಹೆಚ್ಚಳವಾಗಿದೆ. ಈ ಹಿನ್ನೆಲೆ ಕನ್ನಡಪರ ಸಂಘಟನೆಗಳು ಕುಂಬಳಗೂಡು ಕಣಮಿಣಕಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು.

ಶೇ.22 ರಷ್ಟು ಟೋಲ್ ದರವನ್ನು ಹೆಚ್ಚಳ ಮಾಡಿರೋ ಹೆದ್ದಾರಿ ಪ್ರಾಧೀಕಾರ. ಜೂನ್ 1ರಿಂದಲೇ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ದಶಪತಿ ಹೆದ್ದಾರಿ ಆದಾಗಿಂದಲೂ ಒಂದಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿದ್ದು. ಈ ಭಾಗದ ಜನರಿಗೆ ಅನುಕೂಲವಾಗುವ ಬದಲು ತೊಂದರೆಯಾಗುತ್ತಿರುವುದೇ ಹೆಚ್ಚಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.  ರಸ್ತೆ ಮಧ್ಯೆ ಕುಳಿತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಕನ್ನಡಪರ ಕಾರ್ಯಕರ್ತರು ಈ ಕೂಡಲೇ ಹೆಚ್ಚಾಗಿರುವ ಟೋಲ್ ದರ ಇಳಿಸುವಂತೆ ಆಗ್ರಹಿಸಿದ್ದಾರೆ.

Tap to resize

Latest Videos

ಮೈಸೂರು-ಬೆಂಗಳೂರು ಟೋಲ್ ದರ ಮತ್ತೆ ಹೆಚ್ಚಳ: NHAI ಜತೆ ಚರ್ಚಿಸುತ್ತೇನೆ: ಪ್ರತಾಪ್ ಸಿಂಹ

ಟೋಲ್ ಎಷ್ಟು ಹೆಚ್ಚಳ?

  • ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ₹135 ರಿಂದ ₹165ಕ್ಕೆ ಏರಿಕೆ (30 ರೂ ಹೆಚ್ಚಳ).
  • ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಏರಿಕೆ(50ರೂ ಹೆಚ್ಚಳ).
  • ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹460 ರಿಂದ ₹565ಕ್ಕೆ ಏರಿಕೆ.(105 ಹೆಚ್ಚಳ).
  • 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ₹ 500 ರಿಂದ ₹615ಕ್ಕೆ ಏರಿಕೆ (115 ರೂ ಹೆಚ್ಚಳ).
  • ಭಾರಿ ವಾಹನಗಳ ಏಕಮುಖ ಸಂಚಾರ ₹ 720ರಿಂದ ₹885ಕ್ಕೆ ಏರಿಕೆ (165 ಹೆಚ್ಚಳ).
  • 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಎಕಮುಖ ಸಂಚಾರ ₹880ರಿಂದ  ₹1,080ಕ್ಕೆ ಏರಿಕೆ (₹200 ಹೆಚ್ಚಳ).

ಬೆಂ-ಮೈಸೂರು ಹೆದ್ದಾರಿಯಲ್ಲಿ ತಾಂತ್ರಿಕ ದೋಷ: ಸತೀಶ್‌

ಮೈಸೂರು : ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಅಪಘಾತ ಆಗಿವೆ. ಹೆದ್ದಾರಿ ನಿರ್ಮಾಣದಲ್ಲಿ ತಾಂತ್ರಿಕ ದೋಷ ಆಗಿರಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಂತ್ರಿಕ ದೋಷ ನಮ್ಮ ಇಲಾಖೆ ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆಗೆ ಸೇರಿಕೊಂಡು ಸರಿಪಡಿಸುತ್ತೇವೆ. ಟೋಲ್‌ ದರ ಕೂಡ ಜಾಸ್ತಿ ಇದೆ. ನಾವು ಎಲ್ಲವನ್ನೂ ಸರಿ ಮಾಡಲು ಆಗಲ್ಲ. ಆದರೆ, ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

 

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಮತ್ತೆ ಬರೆ: ಟೋಲ್ ದರ ಭಾರೀ ಹೆಚ್ಚಳ..!

click me!