
ಬೆಂಗಳೂರು (ಫೆ.02): ರಾಜ್ಯ ಮುಜರಾಯಿ ಇಲಾಖೆ ಸಿ-ವರ್ಗದ ದೇವಾಲಯಗಳ ಜೀರ್ಣೋದ್ಧಾರ, ಅರ್ಚಕರಿಗೆ ವೇತನ, ಗೌರವಧನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಗೌರವಾಧ್ಯಕ್ಷ ಡಾ.ಶಾಂತವೀರ ಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ದೇವಾಲಯಗಳಿಂದ ಬರುವ ಕೋಟ್ಯಂತರ ಹಣವನ್ನು ಇಲಾಖೆಯಡಿ ಶಿಥಿಲಾವಸ್ತೆ ಯಲ್ಲಿರುವ ಸಿ-ವರ್ಗದ ಹಿಂದು ದೇವಾಲಯಗಳ ಅಭಿವೃದ್ಧಿಗಷ್ಟೇ ಬಳಸಬೇಕು. ಸಂಕಷ್ಟದಲ್ಲಿರುವ ರಾಜ್ಯದ 34 ಸಾವಿರಕ್ಕೂ ಅಧಿಕ ಸಿ-ವರ್ಗದ ದೇವಾಲಯಗಳ ಅರ್ಚಕರ ನ್ಯಾಯಯುತ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ದೇವಸ್ಥಾನ ಬಂದ್ ಮಾಡಿ 75 ಸಾವಿರ ಅರ್ಚಕರು ಪ್ರತಿಭಟಿಸುತ್ತೇವೆ ಎಂದರು.
ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ವಿಸ್ಮಯ, ಇದು ಅಪಾಯಯ ಮುನ್ಸೂಚನೆ: ಪ್ರಧಾನ ಅರ್ಚಕರು .
ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ, ಉಪ ಕಾರ್ಯದರ್ಶಿ ಸುರೇಶ್‌ಮೂರ್ತಿ ಇತರರು ಇದ್ದರು.
ಸಿ.ವರ್ಗದ ದೇವಾಲಯಗಳ ಅರ್ಚಕ/ಸಿಬ್ಬಂದಿಗೆ ಮಾಸಿಕ 5 ಸಾವಿರ ವೇತನ, 48 ಸಾವಿರ ಇರುವ ತಸ್ತಿಕ್ ಮೊತ್ತವನ್ನು ಒಂದು ಲಕ್ಷಕ್ಕೆ ಏರಿಸಬೇಕು. ಜಿಲ್ಲೆಗಳಲ್ಲಿ ತಲಾ ಒಂದು ಅರ್ಚಕರ ಭವನ, ದೇವಾಲಯ ಆವರಣದಲ್ಲಿ ಅರ್ಚಕರಿಗೆ ವಸತಿ ಗೃಹ ಮತ್ತು ಮುಜರಾಯಿ ಅಭಿವೃದ್ಧಿ ನಿಗಮ ಸ್ಥಾಪಿಸುವುದು. ಎಲ್ಲ ಮುಜರಾಯಿ ದೇವಾಲಯಗಳಿಗೆ ಆದ್ಯತೆ, ಹಿಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿನ ಅನ್ಯ ಧರ್ಮದ ಅಧಿಕಾರಿಗಳ ವಜಾ ಮತ್ತು ಖಾಲಿ ಹುದ್ದೆ ಭರ್ತಿ ಸೇರಿದಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅವರು ಆಗ್ರಹಿಸಿದರು. ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ, ಉಪ ಕಾರ್ಯದರ್ಶಿ ಸುರೇಶ್‌ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ