ಮೇಲೆ ಖಾಲಿ ರಟ್ಟು, ಮಧ್ಯೆ ₹43 ಲಕ್ಷ ಮದ್ಯ! ಗೋವಾದಿಂದ ತೆಲಂಗಾಣಕ್ಕೆ ಸಾಗುತ್ತಿದ್ದ ವಾಹನ ಜಪ್ತಿ!

By Kannadaprabha News  |  First Published Oct 23, 2023, 11:41 AM IST

ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆ ಮದ್ಯದ ಘಮಲು ಹರಿಸಬೇಕೆಂಬ ರಾಜಕೀಯ ಪಕ್ಷಗಳ ವಿಫಲ ಯತ್ನ. ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಒಯ್ಯುತ್ತಿದ್ದ ಮತ್ತೊಂದು ವಾಹನ ಜಪ್ತಿ. ಒಂದೇ ವಾರದಲ್ಲಿ ಎರಡನೇ ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲ ಭೇದಿಸಿದ ಬೆಳಗಾವಿ ಅಬಕಾರಿ ಅಧಿಕಾರಿಗಳು.


ಬೆಳಗಾವಿ (ಅ.23): ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆ ಮದ್ಯದ ಘಮಲು ಹರಿಸಬೇಕೆಂಬ ರಾಜಕೀಯ ಪಕ್ಷಗಳ ವಿಫಲ ಯತ್ನ. ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಒಯ್ಯುತ್ತಿದ್ದ ಮತ್ತೊಂದು ವಾಹನ ಜಪ್ತಿ. ಒಂದೇ ವಾರದಲ್ಲಿ ಎರಡನೇ ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲ ಭೇದಿಸಿದ ಬೆಳಗಾವಿ ಅಬಕಾರಿ ಅಧಿಕಾರಿಗಳು.

ಖಾಲಿ ರಟ್ಟು, ಕಾಗದದ ಮಧ್ಯೆ ಬಚ್ಚಿಟ್ಟುಕೊಂಡು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ. ಬೆಳಗಾವಿ ಅಬಕಾರಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಅಧಿಕಾರಿಗಳು. ಗೋವಾದಿಂದ ತೆಲಂಗಾಣಕ್ಕೆ ಲಾರಿಯಲ್ಲಿ ಸುಮಾರು ₹ 43,93,700 ಮೌಲ್ಯದ 21 ವಿವಿಧ ಕಂಪನಿಯ ಬೆಲೆ ಬಾಳುವ ಮದ್ಯದ 250 ಬಾಕ್ಸ್ ಸಾಗಿಸಲಾಗುತ್ತಿತ್ತು. ಅಬಕಾರಿ ಹಾಗೂ ಪೊಲೀಸರ ದಾರಿ ತಪ್ಪಿಸುವ ಉದ್ದೇಶದಿಂದ ಮೊದಲೇ ಯೋಜನೆ ರೂಪಿಸಿದ್ದ ಅಕ್ರಮ ದಂಧೆಕೋರರು ಮದ್ಯದ ಬಾಕ್ಸ್‌ ಮೇಲೆ ಖಾಲಿ ರಟ್ಟಿನ ಬಾಕ್ಸ್‌ ಹಾಗೂ ಪೇಪರ್ ಹಾಕಿದ್ದಾರೆ. ಈ ಲಾರಿ ನೋಡಿದಲ್ಲಿ ಕೇವಲ ರಟ್ಟು ಹಾಗೂ ಪೇಪರ್‌ ಸಾಗಾಟ ಮಾಡಲಾಗುತ್ತಿದೆ ಎಂದು ಭಾವಿಸಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Tap to resize

Latest Videos

ನರ್ಸ್‌ಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಬಹಿರಂಗ ಕ್ಷಮೆಯಾಚಿಸಿದ ಶಾಸಕ ರಾಜು ಕಾಗೆ

ಗೋವಾದಿಂದ ಬೆಳಗಾವಿ ಮಾರ್ಗವಾಗಿ ತೆಲಂಗಾಣಕ್ಕೆ ಅಪಾರ ಪ್ರಮಾಣದ ಮದ್ಯ ಸಾಗಾಟ ಕುರಿತು ಮಾಹಿತಿ ಕಲೆ ಹಾಕಿದ್ದ ಬೆಳಗಾವಿ ಅಬಕಾರಿ ಅಧಿಕಾರಿಗಳು, ಭಾನುವಾರ ಬೆಳಿಗ್ಗೆ 3.30 ಸುಮಾರಿಗೆ ಬೆಳಗಾವಿ ನಗರಕ್ಕೆ ಹೊಂದಿಕೊಂಡ ಪೀರಣವಾಡಿ ಕ್ರಾಸ್‌ ಹತ್ತಿರ ಲಾರಿ ತಡೆದು ಪರಿಶೀಲನೆ ನಡೆಸಿದ್ದಾರೆ. ಲಾರಿ ತಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಈ ಲಾರಿಯಲ್ಲಿ ಅಕ್ರಮ ಮದ್ಯ ಇರುವ ಬಗ್ಗೆ ಖಚಿತವಾಗುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ. ಸುಮಾರು ₹4393700 ಮೌಲ್ಯದ ಮದ್ಯ ಹಾಗೂ ಸಾಗಾಟಕ್ಕೆ ಉಪಯೋಗಿಸಿದ್ದ ₹ 20 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು ₹ 6393700 ಮೌಲ್ಯದ ಸ್ವತ್ತನ್ನು ವಶಡಿಸಿಕೊಂಡಿದ್ದಾರೆ. ಈಚೆಗಷ್ಟೇ ಪ್ಲಾವುಡ್‌ ಮಧ್ಯೆ, ಖಾಲಿ ವಿದ್ಯುತ್‌ ಟಿಸಿಯಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು.

ಅಬಕಾರಿ ಅಪರ ಆಯುಕ್ತ ಡಾ.ವೈ. ಮಂಜುನಾಥ, ಜಂಟಿ ಆಯುಕ್ತ ಫಿರೋಜ್‌ ಖಾನ್ಲ ಕಿಲ್ಲೆದಾರ, ಉಪಾಯುಕ್ತೆ ವನಜಾಕ್ಷಿ.ಎಂ. ವಿಜಯ ಹಿರೇಮಠ ಮಾರ್ಗದರ್ಶನದಲ್ಲಿ ಅಬಕಾರಿ ಉಪಾಧೀಕ್ಷಕ ರವಿ ಮುರುಗೋಡ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ್ ಮೆಳ್ಳಿಗೇರಿ ಹಾಗೂ ಜ್ಯೋತಿ ಕುಂಬಾರ, ಪುಷ್ಪಾ ಗಡಾದೆ ಹಾಗೂ ಸಿಬ್ಬಂದಿ ಪರಸಪ್ಪ ತಿಗಡಿ, ಆನಂದ ಪಾಟೀಲ,ವಿನಾಯಕ ಭೋರಣ್ಣವರ, ಬಸವರಾಜ್. ಡಿ. ದಾಳಿ ನಡೆಸಿದ್ದಾರೆ.

ಇಂದಿನಿಂದ 3 ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ; ಮೌಡ್ಯಕ್ಕೆ ಹೆದರಿ ಸಿಎಂ ಗೈರು?


ಕಳೆದ ಒಂದು ತಿಂಗಳ ಅವಧಿಯಲ್ಲಿ ಪ್ರಮುಖ ಮೂರು ದಾಳಿ ನಡೆಸಿ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯದ ವಿರುದ್ಧ ನಿರಂತರ ದಾಳಿ ನಡೆಸಲಾಗುವುದು. ಈ ದಾಳಿಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಅಭಿನಂದನೆ

ಡಾ. ವೈ.ಮಂಜುನಾಥ. ಅಪರ ಆಯುಕ್ತ ಅಬಕಾರಿ ಇಲಾಖೆ

ಪ್ಲಾವಡ್‌ ಹಾಗೂ ಖಾಲಿ ಟಿಸಿ ಬಾಕ್ಸನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ವೇಳೆ ಲಕ್ಷಾಂತರ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಖಾಲಿ ರಟ್ಟಿನ ಬಾಕ್ಸ್‌ ಹಾಗೂ ಪೇಪರ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

* ವನಜಾಕ್ಷಿ.ಎಂ.ಉಪಾಯುಕ್ತೆ ಅಬಕಾರಿ ಇಲಾಖೆ ಬೆಳಗಾವಿ
 

click me!