ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಿಲ್ಲವಲ್ಲ ಅದಕ್ಕೆ ಸಿದ್ದರಾಮಯ್ಯ ಸುಳ್ಳ ಅಂತ ಜನ ಹೇಳ್ತಾ ಇದ್ದಾರೆ. ಇನ್ನು ಸಿಬಿಐಗೆ ಅವರು ಕೊಟ್ಟಿರೋ ಲೆಕ್ಕಕ್ಕೂ, ಸಿಕ್ಕಿರುವ ದಾಖಲೆಗೂ ವ್ಯತ್ಯಾಸ ಇದೆ. ಅದ್ಕೆ ಡಿಕೆಶಿ ಕಳ್ಳ. ಹಾಗಂತ ಜನ ಹೇಳ್ತಾ ಇದ್ದಾರೆ ಎಂದು ಹೇಳಿದರು.
ತಮಗೆ ಅನಿಸಿದ್ದನ್ನು ಯಾವುದೇ ಮುಲಾಜು ಇಲ್ಲದೇ ನೇರಾನೇರವಾಗಿ ಮಾತನಾಡುವ ರಾಜಕಾರಣಿಗಳು ತುಂಬಾ ಕಡಿಮೆ. ಕಾಲ, ಸಂದರ್ಭಕ್ಕೆ ಮಾತನಾಡುವವರೇ ಜಾಸ್ತಿ. ಕೆಲವು ಸಾರಿ ಮಾತಿನ ಭರಾಟೆಯಲ್ಲಿ ಬಾಯಿತಪ್ಪಿ ಆಡಿದ ಮಾತುಗಳು ನಾನಾ ಅರ್ಥ ಕಲ್ಪಿಸಿ ರಾಜಕಾರಣಿಗಳಿಗೆ ಕೊಂಚ ಬಿಸಿ ಮುಟ್ಟಿಸುವ ಪ್ರಸಂಗಗಳು ಇತ್ತೀಚೆಗೆ ಮಾಮೂಲಿ.
ನಿಷ್ಠುರವಾಗಿ ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ ಅವರಿಗೆ ಇಂತಹ ಬಿಸಿ ತಟ್ಟಿದ ಪ್ರಸಂಗ ಇತ್ತೀಚೆಗೆ ನಡೆಯಿತು.
ಬಾದಾಮಿಗೆ ಬನಶಂಕರಿದೇವಿ ದರ್ಶನಕ್ಕೆ ಬಂದಿದ್ದ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಮಾತಿನ ಭರದಲ್ಲಿ ಸಿಎಂ ಸುಳ್ಳ, ಡಿಕೆಶಿ ಕಳ್ಳ ಅಂದುಬಿಟ್ರು.
Reporters Dairy: ಯಾತ್ರೆಗೆ ಕರೆದೊಯ್ದವರ ಬಿಟ್ಟರು, ಬೇರೊಬ್ಬರನ್ನ ಗೆಲ್ಲಿಸಿದರು
ಅದು ಮಾಧ್ಯಮಗಳಲ್ಲೂ ಪ್ರಸಾರವಾಯ್ತು. ಅನಂತರ ಇದ್ದಕ್ಕಿದ್ದಂತೆ ಈಶ್ವರಪ್ಪ ಅವರು ಸಿದ್ದು ಸುಳ್ಳ, ಡಿಕೆಶಿ ಕಳ್ಳ ಎಂದು ನಾನು ಹೇಳಿದ್ದಲ್ಲ. ಅನೇಕ ಕಡೆ ಈ ರೀತಿ ಜನ ಕೂಗುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಜತೆಗೆ, ಜನ ಹೀಗ್ಯಾಕೆ ಕೂಗುತ್ತಿದ್ದಾರೆ, ಅದನ್ನು ನಾವ್ಯಾಕೆ ಕೇಳಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಕೂಡ ವಿವರವಾಗಿ ಬಿಡಿಸಿಟ್ಟರು.
ಅದ್ಯಾಕಂದ್ರೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಿಲ್ಲವಲ್ಲ ಅದಕ್ಕೆ ಸಿದ್ದರಾಮಯ್ಯ ಸುಳ್ಳ ಅಂತ ಜನ ಹೇಳ್ತಾ ಇದ್ದಾರೆ. ಇನ್ನು ಸಿಬಿಐಗೆ ಅವರು ಕೊಟ್ಟಿರೋ ಲೆಕ್ಕಕ್ಕೂ, ಸಿಕ್ಕಿರುವ ದಾಖಲೆಗೂ ವ್ಯತ್ಯಾಸ ಇದೆ. ಅದ್ಕೆ ಡಿಕೆಶಿ ಕಳ್ಳ. ಹಾಗಂತ ಜನ ಹೇಳ್ತಾ ಇದ್ದಾರೆ ಎಂದು ಹೇಳಿದರು.
ಜನ ಏನಾದ್ರೂ ಹೇಳಲಿ, ನೀವೇನು ಹೇಳೀರಿ ಸ್ವಾಮಿ ಎಂದು ಪ್ರಶ್ನಿಸಿದ್ದಕ್ಕೆ ಇದು ಪ್ರಜಾಪ್ರಭುತ್ವ. ಜನ ಹೇಳಿದ ಮೇಲೆ ಮುಗೀತು ಎನ್ನುವುದೇ.
'ರೀಡೆಬಲ್' ಎಂದು 'ನೋಡೆಬಲ್' ದಾಖಲೆ ಕೊಟ್ಟಿದ್ದಕ್ಕೆ ಕೇಸ್ ಅಡ್ಜರ್ನ್!
ಅಯೂಬ್ ಕಾ ಗಜಬ್ ಕಹಾನಿ: ಒಬ್ಬನೇ ಅಭ್ಯರ್ಥಿ ‘ಬಿ ಫಾರಂ’ ಇಲ್ಲದೇ ಎರಡೆರಡು ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದರೆ!
ಕೋರ್ಟ್ ಕಲಾಪ ಎಂದರೆ ಗೊತ್ತಲ್ಲ, ಎಲ್ಲಾ ಪರ್ಫೆಕ್ಟ್ ಇರಬೇಕು ಎಂದು ಜಡ್ಜ್ ಬಯಸ್ತಾರೆ, ಇರಬೇಕು ಕೂಡ.
ಇತ್ತೀಚೆಗೆ ಕ್ರಿಮಿನಲ್ ಕೇಸಿನಲ್ಲಿ ಬಂಧನದಲ್ಲಿರುವ ಆರೋಪಿಯೋರ್ವ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದ. ಆರೋಪಿ ಪರ ವಕೀಲರು ಜಾಮೀನು ಅರ್ಜಿಯ ದಾಖಲೆಗಳೊಂದಿಗೆ ಕೋರ್ಟ್‌ಗೆ ಹಾಜರಾದರು
ಅದೇ ದಾಖಲೆಗಳ ಪ್ರತಿಯನ್ನು ನ್ಯಾಯಮೂರ್ತಿಗಳಿಗೆ ಸಲ್ಲಿಸಿ, ಅದರಲ್ಲಿದ್ದ ಮಾಹಿತಿ ಓದುತ್ತಾ ತಮ್ಮ ವಾದ ಮಂಡಿಸಲು ಆರಂಭಿಸಿದರು. ಒಂದೆಡೆ ವಕೀಲರು ಏಕ ಧಾಟಿಯಲ್ಲಿ ಓದುತ್ತಿದ್ದರೆ, ಮತ್ತೊಂದೆಡೆ ಯಾವ ದಾಖಲೆ ಓದ್ತಿದಾರೆ? ಎಲ್ಲಿ ಓದ್ತಿದಾರೆ ಎಂಬುದೇ ನ್ಯಾಯಮೂರ್ತಿಗಳಿಗೆ ತೋಚಲಿಲ್ಲ. ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, 'ರೀ ವಕೀಲರೇ... ಯಾವ ದಾಖಲೆ ಓದುತ್ತೀದ್ದೀರಾ?' ಎಂದಾಗ ವಕೀಲ, ದಾಖಲೆಯಿರುವ ಪುಟದ ಮತ್ತು ಓದುತ್ತಿರುವ ಪ್ಯಾರಾದ ಸಂಖ್ಯೆ ಹೇಳಿ ಮತ್ತೆ ಓದಲು ಶುರು ಮಾಡಿದರು. ದಾಖಲೆಗಳಲ್ಲಿ ಯಾವ ಪದಗಳೂ ಕಾಣದಿದ್ದಾಗ ನ್ಯಾಯಮೂರ್ತಿಗಳು ಮುಂದೆಯಿದ್ದ ರೀಡಿಂಗ್ ಲೈಟ್ ಸ್ವಿಚ್ ಆನ್ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, 'ವಕೀಲರೆ.. ನೀವು ಕೊಟ್ಟಿರುವ ದಾಖಲೆಯಲ್ಲಿ ಅಕ್ಷರಗಳೇ ಕಾಣುತ್ತಿಲ್ಲ' ಎಂದು ಆಕ್ಷೇಪಿಸಿದರೆ, ವಕೀಲರು ಮಾತ್ರ ಸಾವಧಾನವಾಗಿ, 'ನಿಮಗೆ ನೀಡಿರುವ ದಾಖಲೆಗಳು 'ರೀಡಬಲ್' (ಓದಬಹುದಾದ) ಆಗಿವೆ' ಎಂದು ಸಮರ್ಥಿಸಿಕೊಂಡರು.
ಇದರಿಂದ ಗರಂ ಆದ ನ್ಯಾಯಮೂರ್ತಿಗಳು, 'ವಕೀಲರೇ ನನಗೆ ಎರಡು ಕಣ್ಣುಗಳಿವೆ. ಅವುಗಳಿಗೆ ಮತ್ತೆರಡು ಕಣ್ಣುಗಳನ್ನು (ಕನ್ನಡಕ) ಹಾಕಿಕೊಂಡು ನೋಡುತ್ತಿದ್ದೇನೆ. ಆ ನಾಲ್ಕು ಕಣ್ಣುಗಳಿಗೂ ದಾಖಲೆಯಲ್ಲಿ ಏನಿದೆ ಎನ್ನುವುದು ಕಾಣುತ್ತಿಲ್ಲ. ನೋಡಿ (ದಾಖಲೆಗಳನ್ನು ಮೇಲಕ್ಕೆ ಎತ್ತಿ) ಇವು 'ರೀಡಬಲ್' ಅಲ್ಲ ಜಸ್ಟ್ 'ನೋಡಬಲ್' (ನೋಡಬಹುದಾದ ದಾಖಲೆ) ದಾಖಲೆಯಷ್ಟೇ. ನೀವು ರೀಡಬಲ್ ದಾಖಲೆ ಸಲ್ಲಿಸಿದರೆ ವಿಚಾರಣೆ ಮುಂದುವರೆಸುತ್ತೇನೆ ಎಂದು ಹೇಳಿ ವಿಚಾರಣೆಯನ್ನೇ ಎರಡು ವಾರ ಮುಂದೂಡಿಬಿಡುವುದೇ!
• ಶಂಕರ ಕುದರಿಮನಿ ವೆಂಕಟೇಶ್ ಕಲಿಪಿ