Aero India: ಕುಳಿತಲ್ಲೇ ಸೇನಾ ಜನರೇಟರ್ ರಕ್ಷಣೆಗೆ ಬಂದಿದೆ ತಂತ್ರಜ್ಞಾನ!

Published : Feb 15, 2023, 05:52 AM IST
Aero India: ಕುಳಿತಲ್ಲೇ ಸೇನಾ ಜನರೇಟರ್ ರಕ್ಷಣೆಗೆ ಬಂದಿದೆ ತಂತ್ರಜ್ಞಾನ!

ಸಾರಾಂಶ

:ವಿದ್ಯುತ್‌ ಜನರೇಟರ್‌ ನಿರ್ವಹಣೆಯಂತ ಸಣ್ಣ ಎನ್ನಿಸುವ ಸಮಸ್ಯೆ ಸೈನ್ಯದಲ್ಲಿ ಗಂಭೀರವಾಗಿ ಕಾಡುತ್ತದೆ. ಇದರಿಂದ ಸಂಭವಿಸಿದ ಅವಘಡದಿಂದಲೇ ಈ ವರ್ಷ ಮೂವರು ಯೋಧರು ಮೃತಪಟ್ಟಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ವೇಳೆ ವಿದ್ಯುತ್‌ ಕಡಿತ ಸಮಸ್ಯೆಯೇ ಬಹುದೊಡ್ಡ ಸವಾಲಾಗಿ ಅಲ್ಲಿನ ನಾಗರಿಕರು, ಸೈನಿಕರನ್ನು ಕಾಡಿದೆ..

ಬೆಂಗಳೂರು (ಫೆ.15) :ವಿದ್ಯುತ್‌ ಜನರೇಟರ್‌ ನಿರ್ವಹಣೆಯಂತ ಸಣ್ಣ ಎನ್ನಿಸುವ ಸಮಸ್ಯೆ ಸೈನ್ಯದಲ್ಲಿ ಗಂಭೀರವಾಗಿ ಕಾಡುತ್ತದೆ. ಇದರಿಂದ ಸಂಭವಿಸಿದ ಅವಘಡದಿಂದಲೇ ಈ ವರ್ಷ ಮೂವರು ಯೋಧರು ಮೃತಪಟ್ಟಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ವೇಳೆ ವಿದ್ಯುತ್‌ ಕಡಿತ ಸಮಸ್ಯೆಯೇ ಬಹುದೊಡ್ಡ ಸವಾಲಾಗಿ ಅಲ್ಲಿನ ನಾಗರಿಕರು, ಸೈನಿಕರನ್ನು ಕಾಡಿದೆ..

ಈ ಸಮಸ್ಯೆ ನಿವಾರಣೆ ಗಮನದಲ್ಲಿಟ್ಟುಕೊಂಡೇ ತಂತ್ರಜ್ಞಾನ ಆಧಾರಿತ ‘ವಿದ್ಯುತ್‌ ರಕ್ಷಕ್‌’ ಉಪಕರಣ (Vidyut Rakshak' tool)ರೂಪಿಸಿದ್ದಾರೆ ಕ್ಯಾ. ರಾಜ್‌ಪ್ರಸಾದ್‌. ಮೂಲತಃ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿರುವ ಇವರು ರೂಪಿಸಿರುವ ಈ ಉಪಕರಣ ಭಾರತೀಯ ಸೇನೆಗೆ ವರವಾಗಿ ಪರಿಣಮಿಸಿದೆ. ಇದನ್ನು ಚೆನ್ನೈ, ಕಾಶ್ಮೀರ, ಕರ್ನಾಟಕ ಸೇರಿ ಕೆಲವೆಡೆ ಅಳವಡಿಕೆ ಮಾಡಿರುವ ಸೈನ್ಯ ಪ್ರಾಯೋಗಿಕ ಬಳಕೆ ಆರಂಭಿಸಿದೆ. ಏರೋ ಇಂಡಿಯಾದ ಪ್ರದರ್ಶನ ಮಳಿಗೆಗಳಲ್ಲಿ ಇದರ ಪ್ರದರ್ಶನ ನಡೆಯುತ್ತಿದೆ.

ಬೆಂಗಳೂರು: ನಗರದಲ್ಲಿ ಶೀಘ್ರ ಚಾಲಕನಿಲ್ಲದ ಮೆಟ್ರೋ ಓಡಾಟ!

ರಕ್ಷಣಾ ಪಡೆಗಳು ದುರ್ಗಮ ಪ್ರದೇಶ ಸೇರಿ ಪ್ರಸ್ತುತ ಲಕ್ಷಗಟ್ಟಲೆ ಜನರೇಟರ್‌ಗಳನ್ನು ಬಳಕೆ ಮಾಡುತ್ತಿವೆ. ಇದರ ನಿರ್ವಹಣೆಗೆ ಸರಿಸುಮಾರು ಇದಕ್ಕೆಂದೆ ಸಾಕಷ್ಟುಸೈನಿಕ ಸಂಪನ್ಮೂಲ ವ್ಯಯವಾಗುತ್ತಿದೆ. ಇದರಿಂದ ಸೈನ್ಯಕ್ಕೆ ಆಗುತ್ತಿರುವ ನಷ್ಟ, ನಿರ್ವಹಣಾ ಸಮಸ್ಯೆ ಹೆಚ್ಚು. ಜೊತೆಗೆ ಎಲ್ಲೇ ಯುದ್ಧವಾದರೂ ಪಡೆಗಳು ಶತ್ರುರಾಷ್ಟ್ರದ ವಿದ್ಯುತ್‌ ಸ್ಥಾವರದ ಮೇಲೆ ದಾಳಿ ನಡೆಸಿ ಸಂಪರ್ಕ ವ್ಯವಸ್ಥೆಯನ್ನು ಮೊದಲು ಹಾಳುಗೆಡುವುದು ಒಂದು ತಂತ್ರ. ಇಂತ ಸಂದರ್ಭದಲ್ಲಿ ವಿದ್ಯುತ್‌ ರಕ್ಷಕ್‌ ನೆರವಾಗಲಿದೆ ಎಂದು ಅವರು ತಿಳಿಸಿದರು.

Bengaluru: ನಾಳೆ ಗೋವಿಂದರಾಜ ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ

ಕಾರ್ಯ ಹೇಗೆ?

ಪ್ರತಿ ಜನರೇಟರ್‌(Power generator)ಗೆ ಈ ಉಪಕರಣ ಅಳವಡಿಕೆ ಮಾಡಬೇಕಾಗುತ್ತದೆ. ಇದರ ಮೂಲಕ ಜನರೇಟರ್‌ಗಳ ಕಮಾಂಡ್‌ ಹಾಗೂ ಕಂಟ್ರೋಲ್‌ ವ್ಯವಸ್ಥೆಯನ್ನು ಉಪಕರಣ ಹೊಂದುತ್ತದೆ. ಉಪಕರಣದ ಡ್ಯಾಶ್‌ಬೋರ್ಡನ್ನು ನಿಗದಿತ ಕೇಂದ್ರದಲ್ಲಿ ಇಡುವ ಮೂಲಕ ಸಾವಿರಾರು ಜನರೇಟರ್‌ಗಳ ಸಂಯೋಜಿತ ಸಂಪರ್ಕ ಸಾಧಿಸಿ ಸರ್ವರ್‌ ಮೂಲಕ ಒಂದೇ ಸ್ಥಳದಿಂದ ಎಲ್ಲವನ್ನೂ ನಿರ್ವಹಿಸಬಹುದು. ಇದರ ಮೇಲೆ ಯಾವಾಗಲೂ ನಿಗಾ ಇಡಲೆಂದೆ ಸೈನಿಕರನ್ನು ನಿಯೋಜಿಸುವ ಅಗತ್ಯವಿಲ್ಲ. ಶತ್ರುಗಳು ದಾಳಿ ಮಾಡಿದ ವೇಳೆ ಜನರೇಟರನ್ನು ಸಂರಕ್ಷಿಸಿ ವಿದ್ಯುತ್‌ ಪೂರೈಕೆ ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯ ಎಂದು ಕ್ಯಾ.ರಾಜ್‌ಪ್ರಸಾದ್‌ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ